- ರಾಘವೇಂದ್ರ ಅಡಿಗ ಎಚ್ಚೆನ್.
ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಶಾಖಾಹಾರಿ ಸಿನಿಮಾ ಖ್ಯಾತಿಯ ಸಂದೀಪ್ ಸುಂಕದ್ ನಿರ್ದೇಶನದಲ್ಲಿ ಧೀರನ್ ಹಾಗು ಅಮೃತಾ ಪ್ರೇಮ್ ಜೊತೆಯಾಗಿ ನಟಿಸುತ್ತಿರುವ ಹೊಸ ಸಿನಿಮಾಗೆ ಪಬ್ಬಾರ್ ಎಂದು ಹೆಸರಿಡಲಾಗಿದ್ದು, ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂಹರ್ತ ಕಾರ್ಯಕ್ರಮ ನಡೆದಿದೆ.
ಸಿನಿಮಾದ ಮುಹೂರ್ತದ ವೇಳೆ ಶಿವಣ್ಣ, ಪ್ರೇಮ್, ರಾಮ್ ಕುಮಾರ್ ಮುಂತಾದವರು ಹಾಜರಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾ ಅಧ್ಯಕ್ಷರು ಹಾಗು ಪದಾಧಿಕಾರಿಗಳು ತಂಡಕ್ಕೆ ಶುಭಹಾರೈಸಿದರು.
ಚಿತ್ರದ ಮುಹೂರ್ತದ ದಿನವೇ ಟೈಟಲ್ ಕೂಡ ರಿಲೀಸ್ ಆಗಿದೆ. ಪೋಸ್ಟರ್ ಮೂಲಕ ಟೈಟಲ್ ರಿವೀಲ್ ಮಾಡಲಾಗಿದೆ. ಪಬ್ಬಾರ್ ಅನ್ನುವ ವಿಶೇಷ ಟೈಟಲ್ ಅನ್ನೆ ಈ ಚಿತ್ರಕ್ಕೆ ಇಡಲಾಗಿದೆ. ನಾಯಕ ನಟ ಧೀರೇನ್ ಈ ಚಿತ್ರಕ್ಕೆ ಸೂಕ್ತ ತಯಾರಿ ಮಾಡಿಕೊಂಡಿದ್ದಾರೆ. ಸಖತ್ ಅನಿಸೋ ಲುಕ್ ಅಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅಮೃತಾ ಪ್ರೇಮ್ ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಟಗರು ಪಲ್ಯ ಆದ್ಮೇಲೆ ಮಾಡ್ತಿರೋ ಮತ್ತೊಂದು ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನಟ ಧೀರೇನ್ ಆರ್.ರಾಜ್‌ಕುಮಾರ್‌ಗೆ ಜೋಡಿ ಆಗಿದ್ದಾರೆ. ಮಗಳ ಈ ಒಂದು ಚಿತ್ರದ ಮುಹೂರ್ತಕ್ಕೆ ನೆನಪಿರಲಿ ಪ್ರೇಮ್ ಕೂಡ ಆಗಿಮಿಸಿದ್ದರು.
ಇನ್ನು 'ಪಬ್ಬಾರ್'ಹಿಮಾಲಯದ ಕಣಿವೆಯಲ್ಲಿರೋ ಒಂದು ಹಳ್ಳಿಯ ಹೆಸರಾಗಿದ್ದು ಇದು ಅಲ್ಲಿ ನಡೆಯುವ ಕಥೆ ಎನ್ನಲಾಗಿದೆ. ಇದೊಂದು ಎಮೋಷನಲ್ ಥ್ರಿಲ್ಲರ್ ಸಿನಿಮಾ ಎಂಬ ಮಾಹಿತಿ ಇದೆ. ಮೇ 15ರಿಂದ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು ಬೆಂಗಳೂರು, ಮಡಿಕೇರಿಯಲ್ಲಿ ಮೊದಲ ಎರಡು ಶೆಡ್ಯೂಲ್ ಸಿನಿಮಾ ಚಿತ್ರೀಕರಣ ನಡೆಯಲಿದ್ದು, ನಂತರ ಹಿಮಾಚಲ ಪ್ರದೇಶದಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬಹುತೇಕ ‘ಶಾಖಾಹಾರಿ’ ಸಿನಿಮಾದ ತಂಡ ಈ ಸಿನಿಮಾಗೂ ಕೆಲಸ ಮಾಡಲಿದೆ. ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ, ವಿಶ್ವಜಿತ್ ರಾವ್ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಸಿನಿಮಾದಲ್ಲಿ ಧೀರೆನ್ ಜೊತೆಗೆ ದೊಡ್ಡ ತಾರಾ ಬಳಗವೆ ಇದೆ. ಈ ವರ್ಷವೇ 'ಪಬ್ಬಾರ್' ಸಿನಿಮಾ ತೆರೆಗೆ ಬರಲಿದೆ.
ಈ ಹಿಂದೆ ದೀರನ್ 'ಶಿವ 143' ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಈಗ 'ಪಬ್ಬಾರ್ ಮೂಲಕ ಮತ್ತೆ ಬೆಳ್ಳಿಪರದೆಗೆ ಬರಲು ಸಿದ್ದವಾಗಿದ್ದಾರೆ.