ಚಿತ್ರಶೋಭಾ

ಬಾಲಿವುಡ್‌ ಸ್ಟಾರ್ಸ್‌ ಕುರಿತು ಹೇಳುವುದಾದರೆ, ಅವರು ತಮ್ಮ ಡ್ರೆಸ್ಸಿಂಗ್‌ ಸೆನ್ಸ್, ತಮ್ಮ ಸೂಪರ್‌ ಹಿಟ್‌ ಡೈಲಾಗ್ಸ್ ನಿಂದ ಸದಾ ಚರ್ಚೆಯಲ್ಲಿರುತ್ತಾರೆ. ಮತ್ತೊಂದು ವಿಷಯ ಗೊತ್ತೇ? ಕೆಲವು ಸ್ಟಾರ್ಸ್‌ ರಿಯಲ್ ನಲ್ಲೂ ಕೃಷಿ ನಡೆಸಿ ಫ್ಯಾನ್ಸ್ ಮಧ್ಯೆ ಚರ್ಚೆಯಲ್ಲಿ ಉಳಿಯುತ್ತಾರೆ. ಇವರಲ್ಲಿ ಒಬ್ಬರು ನಾಜ್‌ ವುದ್ದೀನ್‌ ಸಿದ್ದಿಕಿ. ಇವರು ನಟನೆ ಜೊತೆ ಹೊಲ ಗದ್ದೆಗಳಲ್ಲಿ ದುಡಿಯುವ ಹವ್ಯಾಸ ಉಳಿಸಿಕೊಂಡಿದ್ದಾರೆ! ಇದನ್ನು ಈತ ಸೋಶಿಯಲ್ ಮೀಡಿಯಾ ಮೂಲಕ ತನ್ನ ಫ್ಯಾನ್ಸ್ ಗೆ ತೋರಿಸುತ್ತಿರುತ್ತಾನೆ. ಇದೇ ತರಹ ಪ್ರೀತಿ ಝಿಂಟಾ ತನ್ನ ಸೇಬಿನ ತೋಟದಲ್ಲಿ ದುಡಿದರೆ, ಶಿಲ್ಪಾ ಶೆಟ್ಟಿ ಸಹ ತರಕಾರಿ ತೋಟಗಳಲ್ಲಿ ದುಡಿಯುತ್ತಿರುತ್ತಾಳೆ!

Hay_Shweta_Sharma

ಶ್ವೇತಾ ಶರ್ಮಾಳ ಬೋಲ್ಡ್ ನೆಸ್ಗೆ ಏನಂತೀರಿ?

ಭೋಜ್‌ ಪುರಿ ಇಂಡಸ್ಟ್ರಿಯ ಶ್ವೇತಾ ಶರ್ಮಾಳ ಕುರಿತು ಹೇಳುವುದಾದರೂ ಏನು? ಇವಳು ತನ್ನ ಅಲ್ಟ್ರಾ ಪಾಶ್‌ ಬೋಲ್ಡ್ ನಟನೆಗೆಂದೇ ಖ್ಯಾತಳಾದಳು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇವಳ ಯಾವ ಪರಿಯ ಬೋಲ್ಡ್ ಸೆಕ್ಸೀ ಫೋಟೋಗಳು ವೈರಲ್ ಆದವೆಂದರೆ, ಇವಳ ಅಭಿಮಾನಿಗಳು ನೇರ ಇವಳನ್ನು ಸನೀ ಲಿಯೋನ್‌ ಗೆ ಹೋಲಿಸತೊಡಗಿದರು. ನಿಜಕ್ಕೂ ಇವಳ ಈ ಫೋಟೋಗಳನ್ನು ಕಂಡು ಬಾಲಿವುಡ್‌ ನ ನಟೀಮಣಿಯರೂ ಬೆಚ್ಚಿಬಿದ್ದರಂತೆ! ಇವಳ ಯೆಲ್ಲೋ ಶಾರ್ಟ್‌ ಡ್ರೆಸ್‌ ನ ಫೋಟೋ ಕಂಡು ಪಡ್ಡೆ ಫ್ಯಾನ್ಸ್ ಕುಣಿದಾಡಿದ್ದೂ ಆಡಿದ್ದೆ! ಇದೇ ಪರಿಯಲ್ಲಿ ಇವಳು ಮುಂದುವರಿದರೆ ಬಾಲಿವುಡ್‌ ನ ಬೋಲ್ಡ್ ಲೇಡೀಸ್ ಭಯದಿಂದ ಬಾಲ್ಡ್ ಆಗಿಹೋದಾರು!

Chatak_Matak_Song

93 ಕೋಟಿ ಲೈಕ್ಸ್ ದಾಟಿದ ಹಾಡು

`ಚಟಕ್‌ ಮಟಕ್‌….’ ಸಪ್ನಾ ಚೌಧರಿ ತನ್ನ ಹರಿಯಾಣ್ವಿ ಭಾಷೆಯ `ಚಟಕ್‌ ಮಟಕ್‌…..’ ಹಾಡಿನಿಂದ ಇಡೀ ಯೂಟ್ಯೂಬ್ ಪೂರ್ತಿ ಆರಿಸಿಕೊಂಡಿದ್ದಾಳೆ! ಕೇವಲ ಇವಳ ಈ ಹಾಡು ಮಾತ್ರವಲ್ಲದೆ, ಇವಳ ಹರಿಯಾಣ್ವಿ ಲುಕ್ಸ್, ಇವಳ ಫ್ಯಾನ್ಸ್ ಗೆ ಹುಚ್ಚು ಹಿಡಿಸಿದೆಯಂತೆ. ಈ ಕಾರಣದಿಂದಲೇ ಇವಳ ಫ್ಯಾನ್ಸ್ ಯೂಟ್ಯೂಬ್‌ ನಲ್ಲಿ 93 ಕೋಟಿಗೂ ಅಧಿಕ ಲೈಕ್ಸ್ ನೀಡಿ ಇತರ ನಟಿಯರ ಹೊಟ್ಟೆಯುರಿಗೆ ಕಾರಣರಾಗಿದ್ದಾರೆ. ಈ ಹಾಡಿನ ಹಿನ್ನೆಲೆ ಗಾಯಕಿ ರೇಣುಕಾ ಪಾರ್‌, ಸಂಗೀತ  ಗುಲ್ಶನ್‌ ಮ್ಯೂಸಿಕ್ಸ್ ನದು. ಸಪ್ನಾ ನಿನ್ನ ಸ್ವಪ್ನಗಳೆಲ್ಲ ನಿಜವಾಗಲಿ!

Aishwarya_Ka_jawab_nahi

ಅಂತಿಂಥ ಹೆಣ್ಣಲ್ಲ ಐಶ್ವರ್ಯಾ

ಅಯ್ಯೋ, ಇಲ್ಲಿ ಮಂಗಳೂರಿನ ಬೆಡಗಿ ಐಶ್ವರ್ಯಾ ರೈ ಬಗ್ಗೆ  ಅಲ್ಲ….. ಸೌತ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ರ ಮಗಳು ಐಶ್ವರ್ಯಾ ಬಗ್ಗೆ ಮಾತನಾಡುತ್ತಿದ್ದೇವೆ. ಈಕೆ ತಮಿಳು ಚಿತ್ರಗಳ ಖ್ಯಾತ ನಿರ್ದೇಶಕಿ ಎಂದು ಹೆಸರು ಗಳಿಸಿದ್ದಾಳೆ. ಇದೀಗ ಬಾಲಿವುಡ್‌ ಗೂ ದಾಂಗುಡಿಯಿಟ್ಟು ಹಿಂದಿ ಚಿತ್ರ ನಿರ್ದೇಶಿಸಲಿದ್ದಾಳಂತೆ! ಈಕೆ ತನ್ನ ಅದ್ಭುತ ನಿರ್ದೇಶನದಿಂದ ಫ್ಯಾನ್ಸ್ ನಡುವೆ ಚರ್ಚೆಯಲ್ಲಿರುತ್ತಾಳೆ. ಅಷ್ಟೇ ಅಲ್ಲ….. 40+ ನಲ್ಲೂ ಇವಳ ಫಿಟ್‌ ನೆಸ್‌, ಕ್ಯೂಟ್‌ ನೆಸ್‌, ಬ್ಯೂಟಿ ಸಿಂಪ್ಲಿಸಿಟಿ ಕಾರಣ ಫ್ಯಾನ್ಸ್ ಇವಳೆಡೆ ಸೆಳೆಯಲ್ಪಡುತ್ತಿದ್ದಾರೆ. ಕೆಂಪು ಸೀರೆಯ ಇವಳ ಫೋಟೋ ಇತ್ತೀಚೆಗೆ ವೈರಲ್ ಆಗಿ ಎಲ್ಲೆಡೆ ಮೆಚ್ಚುಗೆ ಗಳಿಸಿದೆ. ಇಷ್ಟೆಲ್ಲ ಇದ್ದ ಮೇಲೆ ಇವಳಲ್ಲಿ ಏನೋ ವಿಶೇಷ ಇರಲೇಬೇಕಲ್ಲವೇ?

Akshay_bane_favrit

ಎಲ್ಲರ ಫೇವರಿಟ್ಅಕ್ಷಯ್ಕುಮಾರ್

ಮೀಡಿಯಾ ಇನ್‌ ಸೈಟ್ಸ್ ಫರ್ವ್‌ ಓವರ್‌ ಮ್ಯಾಕ್ಸ್ ಸಂಸ್ಥೆಯು ಕಳೆದ ವರ್ಷಾಂತ್ಯದ ಹೊತ್ತಿಗೆ ಟಾಪ್‌-10 ಮೋಸ್ಟ್ ಪಾಪ್ಯುಲರ್ ಹಿಂದಿ ಹೀರೋಗಳ ಪಟ್ಟಿ ಪ್ರಕಟಿಸಿದಾಗ, ಅದರಲ್ಲಿ ಅಕ್ಷಯ್‌ ಕುಮಾರ್‌ ಎಲ್ಲರಿಗಿಂತ ಟಾಪ್‌ ನಲ್ಲಿದ್ದ! ಬೇರೆ ಯಂಗ್‌ ಸ್ಟಾರ್ಸ್‌ನಾಚಿಕೊಳ್ಳುವಂತೆ ಆಗಿದೆ. ಶಾರೂಖ್‌ ಸಲ್ಮಾನ್‌ ಖಾನ್‌ ಸಹ 2ನೇ, 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ. ವಿಡಂಬನೆ ಎಂದರೆ ಕಳೆದ ವರ್ಷ ಅಕ್ಷಯ್‌ ನ ಯಾವ ಚಿತ್ರ ಸೂಪರ್‌ ಹಿಟ್‌ ಅಲ್ಲ! ಆದರೆ ಈ ವರ್ಷ ಈತನ ದೊಡ್ಡ ಬಜೆಟ್‌ನ  `ಸೆಲ್ಛಿ, ಬಡೇ ಮಿಯಾಂ ಛೋಟೆ ಮಿಯಾಂ’ ಮುಂತಾದ ಚಿತ್ರಗಳು ಬಿಡುಗಡೆಗೆ ಕಾದು ಕುಳಿತಿವೆ. ಇವುಗಳ ಹಣೆಬರಹವನ್ನು ಕಾಲವೇ ನಿರ್ಣಯಿಸಬೇಕು.

Goldan_award

ಗೋಲ್ಡನ್ಗ್ಲೋಬಲ್ ಅವಾರ್ಡ್ ಗರಿ

ಗೋಲ್ಡನ್‌ ಗ್ಲೋಬಲ್ ಅವಾರ್ಡ್‌-2023ರಲ್ಲಿ ತೆಲಗು ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಿದೆ! ಗೋಲ್ಡನ್‌ ಗ್ಲೋಬಲ್ ಅವಾರ್ಡ್‌-2023ನಲ್ಲಿ ಚಿತ್ರದ `ನಾಟು ನಾಟು….’ ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್‌ ಎಂಬ ಸನ್ಮಾನ ಪಡೆದಿದೆ. ಇದಾದ ಮೇಲೆ ಇಡೀ ಟಾಲಿವುಡ್‌ ಅಂದ್ರೆ ತೆಲುಗು ಚಿತ್ರರಂಗದಲ್ಲಿ ಹಬ್ಬದ ವಾತಾವರಣ ಮೂಡಿತು! ಈ ಚಿತ್ರ ಕನ್ನಡದ `ಕಾಂತಾರ’ ಜೊತೆ ಆಸ್ಕರ್‌ ಪ್ರಶಸ್ತಿಗೂ ಶಾರ್ಟ್‌ ಲಿಸ್ಟೆಡ್‌! ಇದರ ಸೂಪರ್‌ ಡ್ಯೂಪರ್‌ ಪಾಪ್ಯುಲಾರಿಟಿಗೆ ಇಷ್ಟು ಸಾಕಲ್ಲವೇ?

Chatriwali

ಛತ್ರಿವಾಲಿ ಚಿತ್ರದಲ್ಲಿ ಸೆಕ್ಸ್

ಈ ವರ್ಷದ ಹೊಸ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳ ಪೈಕಿ `ಛತ್ರಿವಾಲಿ’ ಸಹ ಒಂದು. ಇದು ಸಾಕಷ್ಟು ರೊಮ್ಯಾಂಟಿಕ್‌ ಕಾಮಿಡಿ ಎನಿಸಿದೆ. ಈ ಚಿತ್ರದ ಟ್ರೇಲರ್‌ ಈಗಾಗಲೇ ರಿಲೀಸ್‌ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್‌ ನ ಬ್ಯೂಟಿಫುಲ್ ನಟಿ ರಾಕುಲ್ ಪ್ರೀತ್‌ ಸಿಂಗ್‌, ಇಲ್ಲಿ ತುಂಬಾನೇ ಬೋಲ್ಡ್ ವಿಷಯಗಳನ್ನು ಚರ್ಚಿಸಿದ್ದಾಳಂತೆ! ಅಂದ್ರೆ ಈಕೆ ಇಲ್ಲಿ ಸೆಕ್ಸ್ ಎಜುಕೇಶನ್‌ ಬಗ್ಗೆ ವಿವರಿಸುತ್ತಾಳೆ, ಇದು ಪ್ರಸ್ತುತ ಸಂದರ್ಭಕ್ಕೆ ಅಗತ್ಯ ಕೂಡ. ನಾವು ಮಾನಸಿಕ, ಭಾವನಾತ್ಮಕ ಆರೋಗ್ಯದ ಬಗ್ಗೆ ಮಾತನಾಡಬಹುದಾದರೆ, ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡಲು ಹಿಂಜರಿಕೆ ಏಕೆ? ಈ ಚಿತ್ರದ ಸ್ಕ್ರಿಪ್ಟ್ ಓದಿದಾಗ ಬಹಳ ಇಷ್ಟವಾಯಿತು, ಇದರಲ್ಲಿ ನಟಿಸಲೇಬೇಕು ಎಂದು ನಿರ್ಧರಿಸಿದೆ ಎನ್ನುತ್ತಾಳೆ. ಇದು ಜನರಿಗೆ ಕೇವಲ ಮನರಂಜನೆ ನೀಡುವುದು ಮಾತ್ರವಲ್ಲ, ಜಾಗೃತಿ ಉಂಟು ಮಾಡಲಿದೆ ಎನ್ನುತ್ತಾಳೆ.

Bechara_kartik_aaryan

ಅಯ್ಯೋ ಪಾಪ ಕಾರ್ತಿಕ್ಆರ್ಯನ್

ಬಾಲಿವುಡ್‌ ನಲ್ಲಿ ಯಂಗ್‌ ಸ್ಟಾರ್ಸ್‌ ಮಧ್ಯೆ ಸದಾ ಶೈನ್‌ ಆಗುತ್ತಿರುವ ಕಾರ್ತಿಕ್‌ ಆರ್ಯನ್‌, ತನ್ನದೇ ವಿಭಿನ್ನ ಫ್ಯಾನ್‌ ಫಾಲೋಯರ್ಸ್‌ ಹೊಂದಿದ್ದಾನೆ. ಈತನ ಅಭಿಮಾನಿಗಳು ಇವನ ಹೊಸ ಚಿತ್ರಕ್ಕಾಗಿ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಸದಾ ಜಾಲಿ ಮೂಡ್‌ ನಲ್ಲಿರುವ ಈತನ ನಟನೆ ಎಲ್ಲರಿಗೂ ಇಷ್ಟ. ಈತ ಸದಾ ತನ್ನ ಹೊಸ ಹೊಸ ಲುಕ್ಸ್, ಪೋಸ್‌ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾನೆ. ಈತ ಇತ್ತೀಚೆಗೆ, ಐಸ್‌ ಬಳಸಿ ತನ್ನ ಮಂಡಿಗೆ ಫಿಸಿಕಲ್ ಥೆರಪಿ ಪಡೆಯುತ್ತಿರುವ ಸೆಲ್ಛಿ ಪ್ರದರ್ಶಿಸಿದಾಗ, ಇನ್‌ ಸ್ಟಾಗ್ರಾಂನ ಫ್ಯಾನ್ಸ್ ಮಾತ್ರವಲ್ಲದೆ, ಅನೇಕ ಸೆಲೆಬ್ರಿಟೀಸ್‌ ಸಹ ಇದಕ್ಕೆ ಲವ್ಲಿ ಕಾಮೆಂಟ್ಸ್ ನೀಡಿದರು. ಈತನ ಮುಂದಿನ `ಶಹರದಾ’ ಚಿತ್ರದ ಶೂಟಿಂಗ್‌ ನಲ್ಲಿ ಈತನ ಮಂಡಿಗೆ ಪೆಟ್ಟಾಯಿತು. ಅದಕ್ಕೆ ಕೆಲವು ಕಿಡಿಗೇಡಿಗಳು, ಮಂಡಿ ಮುರಿದೇ ಹೋಯಿತು, ಆದರೆ ಹೇರ್‌ ಸ್ಟೈಲ್‌ಸೆಲ್ಛಿ ಪೌಟ್‌ ಮಾತ್ರ ಅದ್ಹೇಗೆ ಸರಿಯಾಗಿದೆ ಎಂದು ವ್ಯಂಗ್ಯವಾಡಿದರು. ಈ ಜೋಶ್ ಸದಾ ಹೀಗೇ ಇರಲಿ ಎಂದು ಕೆಲವರು ಆಡಿಕೊಂಡರು. ಇದನ್ನು ಕಂಡು ಎಲ್ಲರೂ ನಾನಾ ಬಗೆಯಲ್ಲಿ ಛೇಡಿಸತೊಡಗಿದರು. ಅಯ್ಯೋ ಪಾಪ, ಕಾರ್ತಿಕ್‌ ಗೆ ಹೀಗೆ ಆಗಬಾರದಿತ್ತು!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ