– ರಾಘವೇಂದ್ರ ಅಡಿಗ ಎಚ್ಚೆನ್

ಆಂಜನೆಯನಿಗೆ ಭಜರಂಗಿ, ಹನುಮಾನ್ ಇನ್ನು ಮುಂತಾದ ಹೆಸರುಗಳು ಇರಲಿದೆ. ಆ ಸಾಲಿಗೆ *ಪಿಂಗಾಕ್ಷ* ಎಂಬುದು ಸೇರ್ಪಡೆಯಾಗಿದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ನಂದಿನಿ ಲೇ ಔಟ್‌ದಲ್ಲಿರುವ ಶ್ರೀ ಬಲಮುರಿ ವರಸಿದ್ದಿ ವಿನಾಯಕನ ಸನ್ನಿದಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಸಗಿಟ್ಟರಿಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ *ಬಿ.ವಾಸುದೇವರಾವ್ ನಿರ್ಮಾಣ* ಮಾಡುತ್ತಿರುವುದು ಹೊಸ ಅನುಭವ. ಟೆಕ್ಕಿಯಾಗಿರುವ *ಬಿ.ಭರತ್‌ವಾಸುದೇವ್ ಸಿನಿಮಾಕ್ಕೆ ಕಥೆ,ಚಿತ್ರಕತೆ ಬರೆದು ಆಕ್ಷನ್ ಕಟ್* ಹೇಳುತ್ತಿದ್ದಾರೆ. ಸತ್ತವರ ಧ್ವನಿಗಳು ಎಂಬ ಕ್ಯಾಚಿ  ಅಡಿಬರಹ ಇಂಗ್ಲೀಷ್‌ದಲ್ಲಿ ಹೇಳಲಾಗಿದೆ.

IMG-20250814-WA0027

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ದೇಶಕರು, ಇಲ್ಲಿಯವರೆಗೂ ಹಾರರ್ ಚಿತ್ರಗಳು ಬಂದಿರಬಹುದು. ಆದರೆ ಇಲ್ಲಿ ಭಿನ್ನ ಎನ್ನುವಂತೆ ಪ್ರಾರಂಭದಿಂದ ಕೊನೆವರೆಗೂ ನೋಡುಗರಿಗೆ ಭಯಾನಕ ದೃಶ್ಯಗಳು ಮೈ ಜುಂ ಅನಿಸುವುದು ಹೈಲೈಟ್ ಆಗಿದೆ. ಪಿಂಗಾಕ್ಷ ಎನ್ನುವುದು ಸಂಸ್ಕ್ರತ ಪದ. ನಮ್ಮ ಕತೆಗೆ ಹೊಂದಿಕೊಳ್ಳುವುದರಿಂದ ಇದನ್ನೆ ಇಡಲಾಗಿದೆ.

IMG-20250814-WA0029

ಮನೆ ಯಜಮಾನ ದುಷ್ಟ ಶಕ್ತಿಯಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಯಾವ ರೀತಿ ಹೋರಾಟ ನಡೆಸುತ್ತಾನೆ. ಇದಕ್ಕೆ ದೈವಶಕ್ತಿ ಹೇಗೆ ಸಹಕಾರ ನೀಡುತ್ತದೆ. ಗಂಡ,ಹೆಂಡತಿ ಮಗುವಿನ ಮೇಲೆ ಸೇಡು ಇರದೆ ಇದ್ದರೂ, ದೆವ್ವ ಬರುವುದು ಯಾತಕ್ಕೆ? ಇದನ್ನು ಹೋಗಲಾಡಿಸಲು ಕಂಡುಕೊಂಡ ಮಾರ್ಗ ಏನು? ಇದರೊಂದಿಗೆ ಪ್ರೀತಿ, ಮದುವೆ, ಸಂಸಾರ, ಮನರಂಜನೆ ತುಂಬಿದ ಮಿಶ್ರಣಗಳು ಇರಲಿದೆ. ನಾಲ್ಕು ಹಾಡು, ಮೂರು ಫೈಟ್ ಇರಲಿದೆ.

IMG-20250814-WA0030

ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮಡಕೇರಿ, ಕಲಪಿ, ಮುನ್ನಾರ್, ಕೊಚ್ಚಿನ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂಬುದರ ಮಾಹಿತಿಯನ್ನು ಭರತ್‌ವಾಸುದೇವ್ ನೀಡಿದರು.

IMG-20250814-WA0026

ಎಸಿಪಿ ಪಾತ್ರದಲ್ಲಿ ಸಂತೋಷ್‌ಕುಮಾರ್ ನಾಯಕ. ರಿಶಾಗೌಡ ನಾಯಕಿ. ವಿಶೇಷ ಪಾತ್ರದಲ್ಲಿ ಭಾರ್ಗವ್. ಕೇರಳ ಮೂಲದ ಐರಾಮೆನನ್ ಉಪನಾಯಕಿ. ಇವರೊಂದಿಗೆ ಅವಿನಾಶ್, ರಂಗಾಯಣರಘು, ಕಿಟ್ಟಿತಾಳಿಕೋಟೆ, ತೆಲುಗಿನ ನಾಗಮಹೇಶ್, ಬಲರಾಜವಾಡಿ, ಶರತ್‌ಲೋಹಿತಾಶ್ವ, ವರ್ಧನ್, ಆಶಾ ಮುಂತಾದವರು ಅಭಿನಯಿಸುತ್ತಿದ್ದಾರೆ. ಹಾಸ್ಯ ಹಾಗೂ ಹೆದರಿಸುವ ಸನ್ನಿವೇಶಗಳಿಗೆ ಬಿ.ರಾಜರತ್ನ ಮಾತುಗಳನ್ನು ಪೋಣಿಸುತ್ತಿದ್ದಾರೆ. ಸಂಗೀತ ಕ್ರಿಸ್ಟೋಫರ್ ಜಾಯ್ಸನ್, ಛಾಯಾಗ್ರಹಣ ಜೆ.ಕೆ.ಗಣೇಶ್, ಸಾಹಸ ಯೋಗಾನಂದ್.ಡಿ.ಸಿ ಅವರದಾಗಿದೆ. ಅಂದಹಾಗೆ ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ