- ರಾಘವೇಂದ್ರ ಅಡಿಗ ಎಚ್ಚೆನ್
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಘೋಷಣೆ ಮಾಡಲಾಗಿದೆ. ಶಾರುಖ್ ಖಾನ್, ವಿಕ್ರಾಂತ್ ಮಾಸ್ಸಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ರಾಣಿ ಮುಖರ್ಜಿ ಅತ್ಯುತ್ತಮ ನಟಿ, ‘12 ಫೇಲ್’ ಅತ್ಯುತ್ತಮ ಸಿನಿಮಾ, ‘ದಿ ಕಶ್ಮೀರ್ ಫೈಲ್ಸ್’ನ ಸುದಿಪ್ತೋ ಸೇನ್ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಈ ಬಾರಿ ಹಿಂದಿ ಸಿನಿಮಾಗಳೇ ಹೆಚ್ಚಿನ ಪ್ರಶಸ್ತಿಗೆ ಆಯ್ಕೆ ಆಗಿವೆ. ಮಲಯಾಳಂ, ತಮಿಳು ಹಾಗೂ ತೆಲುಗಿನ ಕೆಲವು ಸಿನಿಮಾಗಳು ಸಹ ಪಟ್ಟಿಯಲ್ಲಿವೆ. ಆದರೆ ಕನ್ನಡದ ಒಂದೇ ಒಂದು ಸಿನಿಮಾಕ್ಕೂ ಪ್ರಶಸ್ತಿ ಲಭಿಸಿಲ್ಲ. ಆದರೆ ನಾನ್ ಫೀಚರ್ ವಿಭಾಗದಲ್ಲಿ ಕನ್ನಡದ ಕಿರುಚಿತ್ರವೊಂದು ಪ್ರಶಸ್ತಿಗೆ ಆಯ್ಕೆ ಆಗಿದೆ.
ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳ ಪಟ್ಟಿ
ವಿಶೇಷ ಗೌರವ- ಅನಿಮಲ್ (ರೀ ರೆಕಾರ್ಡಿಂಗ್)
ಅತ್ಯುತ್ತಮ ಸ್ಟಂಟ್- ಹನುಮ್ಯಾನ್ (ತೆಲುಗು)
ಅತ್ಯುತ್ತಮ ಕೊರಿಯೋಗ್ರಫಿ-ದಿಂಢೋರಾ ಬಾಜೋರೆ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಗೀತ ಸಾಹಿತ್ಯ – ಕಾಸರಾಲ ಶ್ಯಾಮ-ಬಲಗಂ (ತೆಲುಗು)
ಅತ್ಯುತ್ತಮ ಸಂಗೀತ- ಜಿವಿ ಪ್ರಕಾಶ್ ಕುಮಾರ್- ವಾತಿ (ತಮಿಳು)
ಹಿನ್ನೆಲೆ ಸಂಗೀತ- ಅನಿಮಲ್ (ಹಿಂದಿ) ಹರ್ಷವರ್ಧನ್ ರಾಮೇಶ್
ಅತ್ಯುತ್ತಮ ಪ್ರಸಾಧನ- ಶ್ರೀಕಾಂತ್ ದೇಸಾಯಿ (ಸ್ಯಾಮ್ ಬಹಾದ್ಧೂರ್)
ಅತ್ಯುತ್ತಮ ವಸ್ತ್ರವಿನ್ಯಾಸ- ಸ್ಯಾಮ್ ಬಹಾದ್ಧೂರ್
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್- ಮೋಹನ್ದಾಸ್-2018 (ಮಲಯಾಳಂ)
ಅತ್ಯುತ್ತಮ ಸಂಕಲನ- ಮಿಧುನ್ ಮುರಳಿ-ಪೂಕಾಲಂ, (ಮಲಯಾಳಂ)
ಅತ್ಯುತ್ತಮ ಧ್ವನಿ ವಿನ್ಯಾಸ- ಸಚಿನ್ ಸುಧಾಕರ್-ಹರಿಹರ, ಅನಿಮಲ್ (ಹಿಂದಿ)
ಅತ್ಯುತ್ತಮ ಚಿತ್ರಕತೆ- ಬೇಬಿ (ತೆಲುಗು), ಪಾರ್ಕಿಂಗ್ (ತಮಿಳು)
ಅತ್ಯುತ್ತಮ ಸಂಭಾಷಣೆ- ಸಿರ್ಫ್ ಎಕ್ ಬಂದಾ ಕಾಫಿ ಹೈ (ಹಿಂದಿ)
ಅತ್ಯುತ್ತಮ ಸಿನಿಮಾಟೊಗ್ರಫಿ- ಪ್ರಸಂತನು ಮೋಹಪಾತ್ರ- ದಿ ಕೇರಳ ಸ್ಟೋರಿ, (ಹಿಂದಿ)
ಅತ್ಯುತ್ತಮ ಗಾಯಕಿ- ಚಲಿಯಾ (ಜವಾನ್)
ಅತ್ಯುತ್ತಮ ಗಾಯಕ- ರೋಹಿತ್ಮ, ಪ್ರೇಮಿಸ್ತುನ್ನಾ-ಬೇಬಿ ಸಿನಿಮಾ (ತೆಲುಗು)
ಅತ್ಯುತ್ತಮ ಬಾಲ ಕಲಾವಿದರು- ಗಾಂಧಿ ತಾತ ಚೆಟ್ಟು (ಸುಕ್ರುತಿ), ಮರಾಠಿ (ಜಿಪ್ಸಿ) ಕಬೀರ್ ಖಂದಾರೆ, ನಾಲ್ 2 (ಜಿಮ್ಮಿ)
ಅತ್ಯುತ್ತಮ ಪೋಷಕ ನಟಿ- ಊರ್ವಶಿ-ಉಳುಲುಕ್ಕು(ಮಲಯಾಳಂ) , ಜಾನಕಿ ಬೋಡಿವಾಲ-ವಶ್ (ಗುಜರಾತಿ)
ಪೋಷಕ ನಟ- ವಿಜಯರಾಘವನ್-ಪೂಕಾಲಂ (ಮಲಯಾಳಂ), ಮುತ್ತುಪೇಟೆ ಸೋನು ಭಾಸ್ಕರ್-ಪಾರ್ಕಿಂಗ್ (ತಮಿಳು)
ಅತ್ಯುತ್ತಮ ನಟಿ- ರಾಣಿ ಮುಖರ್ಜಿ, ಮಿಸ್ಟರ್ ಚಾಟರ್ಜಿ ವರ್ಸಸ್ ನಾರ್ವೆ (ಹಿಂದಿ)
ಅತ್ಯುತ್ತಮ ನಟ- ಶಾರುಖ್ ಖಾನ್ ಜವಾನ್, ವಿಕ್ರಾಂತ್ ಮಾಸ್ಸಿ 12 ಫೇಲ್
ಅತ್ಯುತ್ತಮ ನಿರ್ದೇಶಕ- ಸುದಿಪ್ತೋ ಸೇನ್, ದಿ ಕೇರಳ ಸ್ಟೋರಿ
ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ಹನುಮಾನ್ (ತೆಲುಗು)
ಅತ್ಯುತ್ತಮ ಮಕ್ಕಳ ಸಿನಿಮಾ-ನಾಲ್ 2 (ಮರಾಠಿ)
ಅತ್ಯುತ್ತಮ ಸಾಮಾಜಿಕ ಮೌಲ್ಯ ಸಿನಿಮಾ-ಸ್ಯಾಮ್ ಬಹಾದ್ಧೂರ್ (ಹಿಂದಿ)
ಅತ್ಯುತ್ತಮ ಮನೊರಂಜನಾ ಸಿನಿಮಾ- ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ
ಅತ್ಯುತ್ತಮ ಡೆಬ್ಯೂ ಸಿನಿಮಾ-ಆತ್ಮಪಾಂಪಲೇಟ್ (ಮರಾಠಿ)
ಅತ್ಯುತ್ತಮ ಸಿನಿಮಾ- 12ತ್ ಫೇಲ್ (ಹಿಂದಿ)