-ಶರತ್ ಚಂದ್ರ.
ಸುಮಾರು 16 ವರ್ಷಗಳಿಂದ ಕನ್ನಡ ಚಿತ್ರರಂಗ ದಲ್ಲಿ ಚಿತ್ರ ರಸಿಕರನ್ನು ರಂಜಿಸುತ್ತ ಆಕ್ಟಿವ್ ಆಗಿರುವ ರಾಗಿಣಿ ದ್ವಿವೇದಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಹುಷಃ ಬೇರೆ ರಾಜ್ಯದಿಂದ ಬಂದು ಕನ್ನಡ ಕಲಿತು ಈಗಲೂ ನಾಯಕಿ ಪಾತ್ರ ನಿರ್ವಹಿಸುತ್ತಿರುವ ನಟಿ ಯಾರು ಕನ್ನಡ ದಲ್ಲಿ ಇರುವುದು ಅಪರೂಪ.
2009 ರಲ್ಲಿ ಬಿಡುಗಡೆ ಯಾದ ಸುದೀಪ್ ಅಭಿನಯದ 'ಈ ಶತಮಾನದ ವೀರ ಮದಕರಿ ನಾಯಕ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಗಿಣಿ,ಸ್ಪಷ್ಟವಾಗಿ ಕನ್ನಡ ಮಾತನಾಡುವುದರ ಮೂಲಕ ನಮ್ಮವರೇ ಆಗಿದ್ದಾರೆ.
ಒಂದಷ್ಟು ಸಂಕಷ್ಟ ಗಳನ್ನು ಧೈರ್ಯ ವಾಗಿ ಎದುರಿಸಿ ಮತ್ತೆ ಚಿತ್ರರಂಗದಲ್ಲಿ ತೊಡಗಿಸಿ ಕೊಂಡು, ಇತ್ತೀಚೆಗೆ ನಿರ್ಮಾಣ ಸಂಸ್ಥೆ ಮತ್ತು ಹೊಸ ಕಂಪನಿ ಹುಟ್ಟು ಹಾಕಿ ಕನ್ನಡ ಚಿತ್ರರಂಗ ದಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ RDV ಎಂಬ ಸಂಸ್ಥೆ ಹುಟ್ಟು ಹಾಕಿದ್ದು ಚಿತ್ರ ನಿರ್ಮಾಣ ದ ಜೊತೆಗೆ ಸಮಾಜ ಸೇವೆ, ಈವೆಂಟ್ ಹೀಗೆ ಸಿನಿಮಾ ರಂಗಕ್ಕೆ ಒಂದಷ್ಟು ಸೇವೆ ಸಲ್ಲಿಸುವುದಕ್ಕೋಸ್ಕರ ಹುಟ್ಟಿಕೊಂಡ ಸಂಸ್ಥೆಯಿದು.
ಗಜರಾಮ ಚಿತ್ರದ ನಾಯಕ ರಾಜವರ್ಧನ್ ಕೂಡ ರಾಗಿಣಿಯ ವೆಂಚೆರ್ ಗಳಲ್ಲಿ ಕೈ ಜೋಡಿಸುತ್ತಿದ್ದು' ಜಾವ ' ಎಂಬ ಚಿತ್ರಗಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.ಕುಮಾರ್ ಬಂಗಾರಪ್ಪ ಜೊತೆ ನಟಿಸುತ್ತಿರುವ ನ್ಯಾಯ ಬೆಲೆ ಅಂಗಡಿ ಸಿನಿಮಾ ದಲ್ಲಿ ಅಭಿನಯಕ್ಕೆ ಅವಕಾಶ ವಿರುವ ಪಾತ್ರದಲ್ಲಿರಾಗಿಣಿ ಅಭಿನಯಿಸುತ್ತಿದ್ದಾರೆ.
ವರ್ಷ ಮುವತ್ತೈದು ದಾಟಿದರೂ ಈಗಲೂ ಫಿಟ್ ಮತ್ತು ಹಾಟ್ ಆಗಿ ಕಾಣುವ, ರಾಗಿಣಿ ತನ್ನದೇ ಅಭಿಮಾನಿ ಬಳಗ ಹೊಂದಿದ್ದಾರೆ. ಕನ್ನಡ ಸಿನಿಮಾ ದಲ್ಲಿ ಸಂಪೂರ್ಣ ವಾಗಿ ತೊಡಗಿಸಿ ಕನ್ನಡ ದ ಮನೆ ಮಗಳಾಗಿರುವ ರಾಗಿಣಿ ದ್ವಿವೇದಿ ಗೆ ಹುಟ್ಟು ಹಬ್ಬದ ಶುಭಾಶಯಗಳು.