ಕನ್ನಡತಿʼ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್‌, ನಟನೆ ಬಿಟ್ಟು ನಿರ್ದೇಶನದಲ್ಲಿ ಬ್ಯುಸಿಯಾಗಿದ್ದು, ತಮ್ಮ ಲೈಫ್‌ ಪಾರ್ಟ್‌ನರ್‌ ಜತೆ ಜಾಲಿಯಾಗಿ ಸುತ್ತಾಟ ನಡೆಸಿದ್ದಾರೆ.ಕಿರುತೆರೆಯ ʻಪುಟ್ಟಗೌರಿ ಮದುವೆʼ ಧಾರಾವಾಹಿ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದಿರುವ ರಂಜನಿ ರಾಘವನ್‌ ʻಕನ್ನಡತಿʼಯಾಗಿ ಹೆಚ್ಚು ಖ್ಯಾತಿ ಪಡೆದಿದ್ದರು. ಬಳಿಕ ಬೆಳ್ಳೆತೆರೆಯಲ್ಲಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಮೋಡಿ ಮಾಡಿದ್ದರು. ಸದ್ಯ ರಂಜನಿ ನಿರ್ದೇಶನಕ್ಕಿಳಿದಿದ್ದು, ಈ ಮಧ್ಯೆ ತಮ್ಮ ಗೆಳೆಯನ ಜೊತೆ ರಂಜನಿ ಜಾಲಿ ಪ್ರವಾಸ ಮಾಡಿದ್ದಾರೆ.ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿರುವ ರಂಜನಿ ರಾಘವನ್, ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಲೈಫ್‌ ಪಾರ್ಟ್‌ನರ್‌ ಯಾರು ಎಂಬುದನ್ನು ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ರಂಜನಿ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದರು. ಇದೀಗ ಗೆಳೆಯನ ಜೊತೆ ಸುತ್ತಾಟ ನಡೆಸಿದ್ದಾರೆ. ಈ ಕುರಿತ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದು, ಅವರು ಬರೆದುಕೊಂಡಿರುವ ಕ್ಯಾಪ್ಶನ್‌ ಗಮನ ಸೆಳೆಯುತ್ತಿದೆ.ತಮ್ಮ ಗೆಳೆಯನ ಕೈ ಹಿಡಿದು ಸುಂದರ ಸ್ಥಳಗಳಿಗೆ ರಂಜನಿ ರಾಘವನ್‌ ಭೇಟಿ ಕೊಟ್ಟಿದ್ದಾರೆ. ಲೈಫ್‌ ಪಾರ್ಟ್‌ನರ್

ಸಾಗರ್‌ ಭಾರಧ್ವಜ್‌ ಅವರನ್ನು ತಮ್ಮ ಲೈಫ್‌ ಪಾರ್ಟ್‌ನರ್‌ ಎಂದು ಇನ್ಸ್​ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಪರಿಚಯಿಸಿದ್ದರು.ರಂಜನಿ ರಾಘವನ್‌ ಮತ್ತು ಸಾಗರ್‌ ಭಾರಧ್ವಜ್‌ ವಿವಾಹವಾಗಲಿದ್ದು, ಇನ್ಸ್​ಟಾಗ್ರಾಮ್​ನಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡು, “ಲೈಫು ರೀಸೆಂಟ್ಲಿ.. ಲೈಫ್‌ ಪಾರ್ಟ್‌ನರ್‌, ನನ್ನ ಹುಡುಗ” ಎಂದು ಗೆಳೆಯನ ಬಗ್ಗೆ ಬರೆದುಕೊಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ