Sj*

ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ "ರೋಲೆಕ್ಸ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ ಕೋಮಲ್ ಗೆ ನಾಯಕಿಯಾಗಿ ಸೋನಲ್ ಮಾಂತೆರೊ ಕಾಣಿಸಿಕೊಂಡಿದ್ದಾರೆ. ವಿಶೇಷಪಾತ್ರದಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ‌ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ನವೀನ್ ಪಡೀಲ್, ರಾಣಾ ಸೇರಿದಂತೆ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಅವರೆ ಟೀಸರ್ ಬಿಡುಗಡೆ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ, ಇತ್ತೀಚೆಗೆ ಚಿತ್ರದ ಮೊದಲ ಕಾಪಿ ನೋಡಿ ನಿರ್ಮಾಪಕರು ಖುಷಿ‌ಪಟ್ಟರು. ನಿರ್ಮಾಪಕರು ಖುಷಿಯಾದಾಗ ನಿರ್ದೇಶಕರ ಶ್ರಮ ಸಾರ್ಥಕವಾದ ಹಾಗೆ. ನಟನೆಯ ಮೂಲಕ ಮೋಡಿ ಮಾಡಿರುವ ಕೋಮಲ್ ಕುಮಾರ್ ಅವರು ಇಡೀ ಚಿತ್ರವನ್ನು ಹೆಗಲ ಮೇಲೆ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ.

ನಗೆ ಹಬ್ಬದ ರಸದೌತಣ ಉಣ ಬಡಿಸಲು ಕೋಮಲ್ ಸಜ್ಜಾಗಿದ್ದಾರೆ. ಕಾಮಿಡಿ ಮತ್ತು ಪ್ರೀತಿಯ ಕಥೆ ಹೊಂದಿದೆ. ನಟ ವಿನೋದ್ ಪ್ರಭಾಕರ್ ಪ್ರಮುಖ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ, ಹಸನ್ಮುಖಿ ಚೆಲುವೆ ಸೋನಾಲ್ ಮೊಂತೆರೊ ಬಂದ ನಂತರ ಚಿತ್ರಕ್ಕೆ ಮತ್ತಷ್ಟು ಕಳೆ ಬಂದಿತ್ತು. ಜೊತೆಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ" ರೋಲೆಕ್ಸ್ "ಮುಗ್ದ ಭಾವನಾತ್ಮಕ ಕೌಟಂಬಿಕ ಚಿತ್ರ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂದು ಹೇಳಿದರು.
ನಟ ಕೋಮಲ್‌ ಮಾತನಾಡಿ, ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ. ನಾಲ್ಕೈದು ಜನ ಬೇರೆ ಬೇರೆ ಚಿತ್ರ ಮಾಡುವ ಬದಲು ಒಂದೇ ಸಿನಿಮಾ ಮಾಡಿದರೆ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ. "ರೋಲೆಕ್ಸ್" ಚಿತ್ರ ಚೆನ್ನಾಗಿ ಮೂಡಿಬಂದಿದೆ. "ಮಿಸ್ಟರ್ ಗರಗಸ" ಚಿತ್ರದ ನಂತರ ಇಂತಹ ಕಥೆಗೆ ಹುಡುಕಾಟ ನಡೆಸುತ್ತಿದ್ದೆ. ಈಗ ಆ ರೀತಿಯ ಪಾತ್ರ ಸಿಕ್ಕಿದೆ. ನಿರ್ದೇಶಕ ಶ್ರೀನಿವಾಸ್ ಕಥೆಗೆ ಏನು ಬೇಕು ಅದನ್ನು ಮಾಡಿದ್ದಾರೆ ಎಂದರು.

rolex

ನಟಿ ಸೋನಾಲ್ ಮೊಂತೆರೊ ಮಾತನಾಡಿ, ನಿರ್ಮಾಪಕರು ಇಡೀ ಚಿತ್ರೀಕರಣದ ಸಮಯದಲ್ಲಿ ಮಗಳ ರೀತಿ ನೋಡಿಕೊಂಡಿದ್ದಾರೆ. ಇಡೀ ತಂಡ ಕುಟುಂಬದ ರೀತಿ ಇತ್ತು. ಇದೇ ಮೊದಲ ಬಾರಿಗೆ ಕೋಮಲ್‌ ಕುಮಾರ್ ಅವರ ಜೊತೆ ನಟನೆ ಮಾಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ಕಲಿಕೆಗೆ ಸಹಕಾರಿಯಾಗಿದೆ. ಮತ್ತೆ ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ವಿನೋದ್ ಪ್ರಭಾಕರ್ ನನ್ನ ಅತ್ಯುತ್ತಮ ಸ್ನೇಹಿತರು. ಅವರ ಪಾತ್ರವೂ ಚೆನ್ನಾಗಿ ಬಂದಿದೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು

ನಟ ವಿನೋದ್ ಪ್ರಭಾಕರ್ ಮಾತನಾಡಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರಮುಖ ಪಾತ್ರ. ನಾಯಕಿ ಸೋನಾಲ್ ಅವರ ಜೊತೆಗೆ ಮಾದೇವ ಚಿತ್ರದ ಆದ ನಂತರ "ರೋಲೆಕ್ಸ್" ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಸೋನಾಲ್ ಮೊಂತೆರೊ ಅವರೆ ನನಗೆ ಅವಕಾಶ ಕೊಡಿಸಿದ್ದಾರೆ. ಇದು ಎಲ್ಲರನ್ನು ನೋಡಿಸಿಕೊಂಡು ಹೋಗುವ ಚಿತ್ರವಾಗಲಿದೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ಮಾಹಿತಿ ನೀಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ