-  ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರಿನ ಲಾಲ್ಬಾಗ್ಮುಖ್ಯರಸ್ತೆಯ ಐಕಾನಿಕ್ಊರ್ವಶಿಚಿತ್ರಮಂದಿರಕ್ಕೆ ಇತಿಶ್ರೀ ಹಾಡಲಾಗಿದೆ. ಎಂಟು ವರ್ಷಗಳಿಂದ ನಡೆಯುತ್ತಿದ್ದ ಗುತ್ತಿಗೆ ವಿವಾದಕ್ಕೆ ಸುಪ್ರೀಂ ಕೋರ್ಟ್ಆದೇಶದ ಮೂಲಕ ತೆರೆ ಬಿದ್ದಿದ್ದು, ಭೂಮಾಲೀಕರು ಪೊಲೀಸರ ಸಮ್ಮುಖದಲ್ಲಿ ಸ್ಥಳವನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಐತಿಹಾಸಿಕ ಚಿತ್ರಮಂದಿರದ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ.

1970ರಲ್ಲಿ ವರನಟ ಡಾ. ರಾಜ್‌ಕುಮಾರ್‌ ಅವರ ಹಸ್ತದಿಂದ ಉದ್ಘಾಟನೆಗೊಂಡಿದ್ದ ‘ಊರ್ವಶಿ’ ಸುಮಾರು 55 ವರ್ಷಗಳ ಸಿನಿ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. 1,100 ಆಸನಗಳ ಸಾಮರ್ಥ್ಯ ಹೊಂದಿದ್ದ ಈ ಚಿತ್ರಮಂದಿರದಲ್ಲಿ ಐದು ಭಾಷೆಗಳ 5,000ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಂಡಿದ್ದವು.

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ‘ಎಕೆ 47’ ಸಿನಿಮಾ ಇದೇ ಚಿತ್ರಮಂದಿರದಲ್ಲಿ 100 ದಿನಗಳ ಯಶಸ್ವಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು. ಅತ್ಯಾಧುನಿಕ ಸೌಂಡ್‌ ಟೆಕ್ನಾಲಜಿಯಲ್ಲೂ ‘ಊರ್ವಶಿ’ ತನ್ನದೇ ಆದ ಸ್ಥಾನ ಹೊಂದಿತ್ತು. ಭಾರತದಲ್ಲಿ ಕೇವಲ ಎರಡು ಏಕಪರದೆ ಚಿತ್ರಮಂದಿರಗಳಲ್ಲಿ ಲಭ್ಯವಿದ್ದ ವಿಶೇಷ ಸೌಂಡ್‌ ತಂತ್ರಜ್ಞಾನವನ್ನು ಈ ಚಿತ್ರಮಂದಿರ ಹೊಂದಿತ್ತು.

ಚಿತ್ರಮಂದಿರವನ್ನು ಗುತ್ತಿಗೆಗೆ ಪಡೆದಿದ್ದ ಬಸಟ್ಟಿ ಶೆಟ್ಟಿ ಅವರ ಲೀಸ್‌ ಅವಧಿ 2018ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು. ಬಳಿಕ ಗುತ್ತಿಗೆ ಮುಂದುವರಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ವಿವಾದ ಮುಂದುವರಿದಿತ್ತು. ಸುಮಾರು ಎಂಟು ವರ್ಷಗಳ ಕಾನೂನು ಹೋರಾಟದ ಬಳಿಕ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಭೂಮಾಲೀಕರು ಸ್ಥಳವನ್ನು ವಾಪಸ್‌ ಪಡೆದುಕೊಂಡಿದ್ದಾರೆ.

ಇದೀಗ ‘ಊರ್ವಶಿ’ ಕಟ್ಟಡ ನೆಲಸಮವಾಗುತ್ತಿರುವ ದೃಶ್ಯಗಳು ಸಿನಿಪ್ರಿಯರನ್ನು ಭಾವುಕರನ್ನಾಗಿಸಿವೆ. ಹಲವು ತಲೆಮಾರುಗಳ ನೆನಪುಗಳನ್ನು ಹೊತ್ತಿದ್ದ ಚಿತ್ರಮಂದಿರ ಕಣ್ಮರೆಯಾಗುತ್ತಿರುವುದು ಬೆಂಗಳೂರಿನ ಸಿನಿ ಇತಿಹಾಸದಲ್ಲೇ ಒಂದು ಅಧ್ಯಾಯ ಮುಕ್ತಾಯಗೊಂಡಂತಾಗಿದೆ.

ವಿಶೇಷವೆಂದರೆ, ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ‘ಊರ್ವಶಿ’ ನೆಲಸಮವಾಗುತ್ತಿದೆ. ಚಿತ್ರಮಂದಿರ ಉಳಿದಿದ್ದರೆ ‘ಟಾಕ್ಸಿಕ್’ ಕೂಡ ಇದೇ ಐಕಾನಿಕ್‌ ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ತೆರೆಕಾಣುವ ಸಾಧ್ಯತೆ ಇತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ‘ಊರ್ವಶಿ’ಯ ಅಂತ್ಯ ಕನ್ನಡ ಸಿನಿರಂಗದ ಒಂದು ಪ್ರಮುಖ ಮೈಲಿಗಲ್ಲಿನ ಅಂತ್ಯವೂ ಆಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ