–ಶರತ್ ಚಂದ್ರ
“ಕಾಂತರ ‘ಚಿತ್ರದ ಅತೀ ಯಶಸ್ಸಿನ ನಂತರ ಸಪ್ತಮಿ ಗೌಡರ ಪಾಲಿಗೆ ಅವಕಾಶ ಗಳ ಮಹಪೂರ ಹರಿದು ಬರುತ್ತೆ ಮತ್ತು ಸಾಕಷ್ಟು ಚಿತ್ರಗಳಲ್ಲಿ ಆಕೆ ನಟಿಸುತ್ತಾರೆ ಅಂತ ಜನ ಭಾವಿಸಿದ್ದರು. ಕೆ. ಜಿ. ಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಯ ಹಾಗೆ,ಸಪ್ತಮಿ ಕೂಡ ಮೂರು ವರ್ಷ ಗಳಲ್ಲಿ ಅಭಿನಯಿಸಿದ್ದು ಬೆರಳೆಣಿಕೆಯ ಚಿತ್ರಗಳು.
‘ ಕಾಂತರ’ ದ ಬೆನ್ನಲ್ಲೇ ಕಾಶ್ಮೀರ್ ಫೈಲ್ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೋವಿಡ್ ನಂತರ ತೆರೆಗೆ ತಂದ The vaccine war ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರ ಜನರ ನಿರೀಕ್ಷೆ ಹುಸಿ ಮಾಡಿ ನೆಲ ಕಚ್ಚಿತ್ತು.
ದೊಡ್ಮನೆ ಕುಡಿ ಯುವರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ನೀಡಿದ ‘ಯುವ ‘ ಚಿತ್ರ ದಲ್ಲಿ ನಾಯಕಿಯಾಗಿ ಮಿಂಚಿದ ಸಪ್ತಮಿ ಇತ್ತೀಚಿಗೆ ಕನ್ನಡದಲ್ಲಿ ಸತೀಶ್ ನೀನಾಸಮ್ ಗೆ Rise of Ashoka ಚಿತ್ರದಲ್ಲಿ ನಾಯಕಿಯಾಗಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟ ಸಪ್ತಮಿ, ತೆಲುಗಿನ ಚಾಕ್ಲೆಟ್ ಹೀರೋ ಮತ್ತು ಸ್ಟಾರ್ ನಟ ನಿತಿನ್ ಗೆ ಜೋಡಿಯಾಗಿದ್ದಾರೆ. “ಮೂಡ್ ಆಫ್ ತಮ್ಮುಡು ‘ ಚಿತ್ರದ ಪೋಸ್ಟರ್ ಟೀಸರ್ ಇತ್ತೀಚೆಗೆ ಲಾಂಚ್ ಆಗಿದ್ದು, ಮತ್ತೆ ಹಳ್ಳಿ ಹುಡುಗಿಯ ಲುಕ್ ನಲ್ಲಿ ಸಪ್ತಮಿ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ ಕಾಂತರ ಚಿತ್ರದ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು.
ಒಟ್ಟಿನಲ್ಲಿ ಆರಂಭ ದಲ್ಲಿ ಪಾತ್ರಗಳ ಆಯ್ಕೆ ಯಲ್ಲಿ ಚೂಸಿಯಾಗಿದ್ದ ಸಪ್ತಮಿ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಾರ ಕೈಗೊಂಡಂತಿದೆ.