ವಿಭಾ*
ದಿಗಂತ್ ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡಾ ಎಂದೇ ಫೇಮಸ್.. ತೀರ್ಥಹಳ್ಳಿಯ ಈ ಸುಂದರ ಸಾಕಷ್ಟು ಹುಡುಗಿಯರ ಡ್ರೀಮ್ ಬಾಯ್ ಆಗಿದ್ದರೂ ಈ ನಟನ ಡ್ರೀಮ್ ಗರ್ಲ್ ಆಗಿದ್ದು ಐಂದ್ರಿತಾ ರೇ..ಮದುವೆಯಾಗಿ ತಮ್ಮದೇ ಶೈಲಿಯಲ್ಲಿ ಲೈಫ್ ಸ್ಟೈಲ್ ರೂಢಿಸಿಕೊಂಡಿರುವ ಈ ಜೋಡಿ ಪ್ರಾಣಿ ಪ್ರಿಯರು. ಬೆಟ್ಟ ಗುಡ್ಡ ಕಾಡು ಅಂತ ನೇಚರ್ ಪ್ರಿಯನಾಗಿರುವ ದಿಗಂತ್ ಸೋಷಿಯಲ್ ಮೀಡಿಯಾ ಅಂದ್ರೆ ಅಷ್ಟಕ್ಕಷ್ಟೇ ..ಏಕೆ ಎಂದು ಕೇಳಿದರೆ .ದಿಗಂತ್ ಹೇಳೋದು ‘ ನಿಜವಾಗ್ಲೂ ಹೇಳ್ತೀನಿ ಇದೆಲ್ಲಾ ನಂಗೆ ಅರ್ಥಾನೇ ಆಗೋಲ್ಲ , ಇನ್ಸ್ಟಾದಲ್ಲಿ ಅಕೌಂಟ್ ಇದೆ ಆದರೆ ಅದನ್ನು ಸಿನಿಮಾ ಪ್ರಮೋಷನ್ ಗೋಸ್ಕರ ಇಟ್ಟಿದ್ದೇನೆ ನಿರ್ಮಾಪಕರಿಗಾಗಿ..ಸಿನಿಮಾಗಾಗಿ .. ಇದ್ಯಾವುದೂ ಇಲ್ಲ ಅಂದಿದ್ರೆ ನಾನು ಅದರಿಂದ ಯಾವತ್ತೋ ಹೊರಗೆ ಬರ್ತಿದ್ದೆ.. ತುಂಬಾ ಹೊತ್ತು ನೋಡ್ತಿದ್ರೆ ಕನ್ಫ್ಯೂಸ್ ಆಗಿ ತಲೆ ಕೆಟ್ಟು ಹೋಗೋತ್ತೆ..ಇದು ತಿನ್ನಬೇಡಿ, ಅದು ಮಾಡ್ಬೇಡಿ , ಬರೀ ತೊಂದರೆ ಹೀಗೆ ನೂರಾರು ಸಲಹೆಗಳು ವೀಡಿಯೋಗಳು ಕನ್ಫ್ಯೂಸ್ ಮಾಡುತ್ತವೆ.. ಐಂದ್ರಿತಾಳೇ ನನ್ನ ಅಕೌಂಟ್ ನೋಡಿಕೊಳ್ಳೋದು ಅವಳೇ ನನ್ನ ಸಿನಿಮಾದ ಅಪ್ಡೇಟ್ ಪೋಸ್ಟ್ ಮಾಡ್ತಾಳೆ. ದಿಗಂತ್ ಹೇಳೋದು ನೂರಕ್ಕೆ ನೂರರಷ್ಟು ಸತ್ಯ..ನಾವೂ ಕೂಡ ಅದನ್ನೇ ಹೇಳುತ್ತೇವೆ ..ಆದರೆ ಕೆಲವರಂತೂ ಅದರಲ್ಲೇ ಮುಳುಗಿ ಹೋಗಿರುತ್ತಾರೆ , ಆರೋಗ್ಯಕ್ಕೂ, ಮೆದುಳಿಗೂ ಈ ಅಡಿಕ್ಷನ್ ಅಪಾಯಕಾರಿ. ಆದಷ್ಟು ಬಳಕೆ ಕಡಿಮೆ ಇರಲಿ.