ಹಿಂದಿ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಪಡಿಯಚ್ಚು ಮೂಡಿಸಿರುವ ಸೋನಂ ಕಪೂರ್‌`ಬ್ಲ್ಯಾಕ್‌' ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯ ರೂಪದಲ್ಲಿ ಕೆಲಸ ಮಾಡಿದ್ದಾಳೆ. ಆ ಬಳಿಕ `ಸಾವರಿಯಾ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ದೊರಕಿತು. ಈ ಚಿತ್ರ ಯಶಸ್ಸು ಪಡೆಯಲಿಲ್ಲ. ಆದರೆ `ಸೂಪರ್‌ ಸ್ಟಾರ್‌ ಟುಮಾರೋ' ಪ್ರಶಸ್ತಿ ಬಂತು.

ವಿಮರ್ಶಕರು ಆಕೆಯ ಬಗ್ಗೆ ಸಾಕಷ್ಟು ಟೀಕೆಯ ಮಳೆ ಸುರಿಸಿದರು. ಆದರೆ  ಸೋನಂ ಮೌನವಾಗಿದ್ದುಕೊಂಡು ತನ್ನನ್ನು ತಾನು ಸಿದ್ಧ ಮಾಡುವಲ್ಲಿ ತೊಡಗಿದ್ದಳು. ಆಕೆ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದಳು. ಅವುಗಳಲ್ಲಿ `ದಿಲ್ಲಿ 6, ರಾಂಝನಾ, ಭಾಗ್ ಮಿಲ್ಕಾ ಭಾಗ್‌, ಖೂಬ್‌ ಸೂರತ್‌, ಡಾಲಿ ಕಿ ಡೋಲಿ, ನೀರಜಾ' ಮುಂತಾದವು. `ನೀರಜಾ' ಆಕೆಯ ಕೆರಿಯರ್‌ನ ಅತ್ಯುತ್ತಮ ಚಿತ್ರ.

ಪ್ರೇಕ್ಷಕರ ಪ್ರೀತಿ

``ನಿಜಕ್ಕೂ `ನೀರಜಾ' ನನ್ನ ಜೀವನದ ವ್ಯಾಖ್ಯೆಯನ್ನೇ ಬದಲಿಸಿಬಿಟ್ಟಿತು. ಆ ಚಿತ್ರದಲ್ಲಿ ಅಭಿನಯಿಸುತ್ತ ನನಗೆ ಸ್ತ್ರೀಶಕ್ತಿ ಮತ್ತು ಆತ್ಮವಿಶ್ವಾಸದ ಅನುಭೂತಿ ಉಂಟಾಯಿತು. ಅಂಥದೊಂದು ಅನುಭೂತಿ ನನಗೆ ಬೇರಾವ ಚಿತ್ರದಲ್ಲೂ ದೊರಕಲಿಲ್ಲ. ಇಂತಹ ಚಿತ್ರಗಳು ನನಗೆ ಬಹಳಷ್ಟು ಪ್ರೇರಣೆ ನೀಡುತ್ತವೆ. ಪ್ರಶಸ್ತಿಗಾಗಿ ನಾನು ಪಾತ್ರ ಮಾಡುವುದಿಲ್ಲ. ಆದರೆ ಪ್ರಶಸ್ತಿ ದೊರೆತರೆ ನನಗೆ ಬಹಳ ಖುಷಿಯಾಗುತ್ತದೆ. ಪ್ರೇಕ್ಷಕರು ನನ್ನ ಪ್ರತಿಯೊಂದು ಚಿತ್ರ ನೋಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ.''

ಸೋನಂ ಡ್ರೆಸ್ಸಿಂಗ್‌ ಸೆನ್ಸ್ ಗೆ ಪ್ರಖ್ಯಾತಿ ಪಡೆದಿದ್ದಾಳೆ. ಬಾಲಿವುಡ್‌ ಚಿತ್ರಗಳಿಂದ ಹಿಡಿದು ವೈಯಕ್ತಿಕ ಜೀವನದ ಹೆಚ್ಚಿನ ಡ್ರೆಸ್‌ಗಳನ್ನೆಲ್ಲ ಆಕೆಯ ತಂಗಿ ರಿಯಾ ಸಿದ್ಧಪಡಿಸುತ್ತಾಳೆ.

ಸೋನಂಗೆ ಕೆಲಸ ಒಂದು ಪ್ಯಾಶನ್‌ ಆಗಿದೆ. ಪ್ರತಿಯೊಂದು ಚಿತ್ರಕ್ಕೂ ಆಕೆ 100ಕ್ಕೆ 100ರಷ್ಟು ಪ್ರಯತ್ನ ಮಾಡುತ್ತಾಳೆ. ಆಕೆಯ ಬರಲಿರುವ ಹೊಸ ಚಿತ್ರದ ಹೆಸರು `ವೀರೇ ದಿ ವೆಡ್ಡಿಂಗ್‌.' ಅದರ ಶೂಟಿಂಗ್‌ ಮುಗಿದಿದೆ. ಆಕೆ ಉದ್ಯಮಿ ಆನಂದ್‌ ಅಹೂಜಾ ಜೊತೆ ಮದುವೆ ಆದಳು.

ಕಲಿಯುವಿಕೆ ನಿರಂತರ

ಹಸನ್ಮುಖಿ ಸ್ವಭಾವದ ಸೋನಂ ಇಂಡಸ್ಟ್ರಿಗೆ ಬಂದು 10 ವರ್ಷವಾಗಿದೆ. ಅದನ್ನೇ ಆಕೆ ದೊಡ್ಡ ಸಾಧನೆ ಎಂದುಕೊಂಡು, ``ಇಂಡಸ್ಟ್ರಿಯಲ್ಲಿ ನಾನು ಸದಾ ಪ್ರಗತಿ ಪಥದಲ್ಲಿ ಸಾಗಿದ್ದೇನೆ. ಪ್ರತಿಯೊಂದು ಚಿತ್ರದಿಂದ ನಾನು ಏನನ್ನಾದರೂ ಹೊಸದನ್ನು ಕಲಿಯುತ್ತೇನೆ. ಪ್ರತಿದಿನ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಬೇಕೆನ್ನುವ ಇಚ್ಛೆ ನನಗೆ ಮೊದಲಿನಿಂದಲೇ ಬಂದಿದೆ,'' ಎನ್ನುತ್ತಾಳೆ.

ಸೋನಂ ಕುಟುಂಬ ಮುಕ್ತ ವಿಚಾರಗಳಿಗೆ ಅವಕಾಶ ಕೊಡುವಂಥ ಕುಟುಂಬ. ಬಾಲ್ಯದಿಂದಲೇ ಸೋನಂಗೆ ಆ ಸ್ವಾತಂತ್ರ್ಯ ಸಿಕ್ಕಿದೆ. ಈ ಕುರಿತಂತೆ ಸೋನಂ ಹೇಳುತ್ತಾಳೆ, ``ನನ್ನ ಕುಟುಂಬದವರು ಎಂದೂ ನೀನು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಲ್ಲ. ನನ್ನ ಮದುವೆಯ ಬಗ್ಗೆಯೂ ಅವರು ಎಂದೂ ಏನನ್ನೂ ಹೇಳಿಲ್ಲ.

``ಸಿನಿಮಾಗಳ ಆಯ್ಕೆಯೇ ಆಗಿರಬಹುದು, ನನ್ನ ವೈಯಕ್ತಿಕ ವಿಷಯವೇ ಆಗಿರಬಹುದು, ಎಲ್ಲದರಲ್ಲೂ ನನ್ನದೇ ಫೈನಲ್. ನನಗೆ ಯಾವುದೇ ರೀತಿಯ ಒತ್ತಡ ಹಾಕಲಿಲ್ಲ. ಈ ರೀತಿ ನನ್ನ ಆತ್ಮವಿಶ್ವಾಸ ಹೆಚ್ಚುತ್ತಾ ಹೋಯಿತು. ನಾನು ಪ್ರಗತಿ ಪಥದಲ್ಲಿ ಸಾಗಿದೆ. ಆದರೆ ಇಂಡಸ್ಟ್ರಿ ನಾನು ಹೀರೋಗಿಂತ ಕಡಿಮೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಅವರು ನನಗೆ ಚಿಕ್ಕದು ಹಾಗೂ ಹೀರೋಗೆ ದೊಡ್ಡ ರೂಮ್ ಕೊಡುವ ಬಗ್ಗೆ ಮಾತನಾಡುತ್ತಿದ್ದರು. ಇದು ನನಗೆ ಆಶ್ಚರ್ಯವನ್ನುಂಟು ಮಾಡುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ