ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿರುವ ತಮಿಳಿನ ಯುವ ನಟಿ ಶೃತಿ ನಾರಾಯಣನ್ ಅವರದ್ದು ಎನ್ನಲಾದ​​​​ ಖಾಸಗಿ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆ 14 ನಿಮಿಷದ ವಿಡಿಯೋ ತಮ್ಮದಲ್ಲ.. ಅದು ಫೇಕ್ ಅಂತಾ ಶೃತಿ ನಾರಾಯಣನ್​ ಅವರು ಹೇಳಿದ್ರೂ ಕೂಡ ಆ ವಿಡಿಯೋ ಅದಾಗಲೇ ಭಾರೀ ವೈರಲ್ ಆಗೋಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟಿಯ ಹೆಸರು ಅತೀ ಹೆಚ್ಚು ಸರ್ಚ್ ಆಗುತ್ತಿದೆ. ನಟಿ ಶ್ರುತಿ ನಾರಾಯಣ್ 14 ನಿಮಿಷಗಳ ವೀಡಿಯೊವನ್ನು ಮೊದಲಿಗೆ ರೆಡ್ಡಿಟ್‌ನಲ್ಲಿ ಬಹಿರಂಗವಾಗಿತ್ತು. ಈ ವೀಡಿಯೊವನ್ನು ಅದಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಆದರೆ ಈ ವಿಡಿಯೋದ ಅಸಲಿಯತ್ತು ದೃಢಪಟ್ಟಿಲ್ಲ.

ಖಾಸಗಿ ವಿಡಿಯೋ ಲೀಕ್ ಬೆನ್ನಲ್ಲೇ ಮೊದಲ ಪೋಸ್ಟ್ ಮಾಡಿರುವ ನಟಿ ಶೃತಿ ನಾರಾಯಣನ್​​​ ತಕ್ಷಣ ಇನ್​ಸ್ಟಾಗ್ರಾಮ್​ ಕಾಮೆಂಟ್​ ಆಫ್ ಮಾಡಿದ್ದಾರೆ. ವಿಡಿಯೋ ಲೀಕ್ ಬೆನ್ನಲ್ಲೇ ಮತ್ತೆ ಆಕ್ಟೀವ್ ಆಗಿರೋ ಶೃತಿ, ಸದ್ಯ ಸೀರೆಯುಟ್ಟು ಟ್ರೆಡಿಷನಲ್​ ಲುಕ್​​ನಲ್ಲಿರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಸ್​​ಗೆ ಯಾವುದೇ ಕ್ಯಾಪ್ಶನ್​​​ ಕೊಡದೇ ಕಾಮೆಂಟ್​ ಬಾಕ್ಸ್ ಆಫ್ ಮಾಡಿದ್ದು, AI ತಂತ್ರಜ್ಞಾನ ಬಳಸಿ ಮಾಡಿರುವ ಫೇಕ್ ವೀಡಿಯೋ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಇನ್​ಸ್ಟಾ ಸ್ಟೋರಿಯಲ್ಲಿ AI ಹಾಗು ರಿಯಲ್ ವ್ಯತ್ಯಾಸ ಹೇಗೆ ಕಂಡು ಹಿಡಿಯೋದು ಹೇಗೆ ಎಂಬ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಲೀಕ್ ಆಗಿರೋ ವಿಡಿಯೋ ನನ್ನದಲ್ಲ ಇದು AI ಜನರೇಟೆಡ್ ಅಂತಾ ಹೇಳುವ ಪ್ರಯತ್ನ ಮಾಡಿದ್ದಾರೆ.

ಇನ್ನು ವಿಡಿಯೋವನ್ನು ನೋಡಿದ ಮಂದಿ ಇದು ಅಸಲಿಯಲ್ಲ. ಇದನ್ನು AI ಬಳಸಿ ಮಾಡಲಾಗಿದೆ ಎಂದು ವಾದಿಸುತ್ತಿದ್ದರೆ, ಮತ್ತೆ ಕೆಲವರು ಇಲ್ಲ. ಇದು ನಟಿಯದ್ದೇ ವಿಡಿಯೋ ಎಂದು ವಾದಿಸುತ್ತಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶೃತಿ ನಾರಾಯಣ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರೈವೆಟ್‌ ಮೂಡ್‌ಗೆ ಹಾಕಿದ್ದಾರೆ. ಅಸಲಿಗೆ ಈ ನಟಿ ಶೃತಿ ನಾರಾಯಣನ್ ವೆಬ್​ಸಿರೀಸ್​ಗಳಾದ​​ ಸಿಟಾಡೆಲ್, ಹನಿ ಬನ್ನಿ, ಮೂವಿಗಳಾದ ಕಾರ್ತಿಗೈ ದೀಪಂ,  ಮಾರಿ ಚಿತ್ರಗಳಲ್ಲಿ ನಟಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ