ರಾಘವೇಂದ್ರ ಅಡಿಗ ಎಚ್ಚೆನ್.

ಯುಗಾದಿ ಅಂದ್ರೆ ಹೊಸತನ. ಮೂರು ದಶಕಗಳಿಂದ ಕನ್ನಡಿಗರ ಮನಗೆದ್ದಿರೋ ಉದಯ ಟೀವಿ ಈಗ ಹೊಸದಾಗಿದೆ. ಯುಗಾದಿಯ ಶುಭ ದಿನ ಅದು ʼಸನ್ ಉದಯʼವಾಗಿ ಬದಲಾಗಿದೆ. ಹೊಸ ಹೊಸ ಕಾರ್ಯಕ್ರಮಗಳೂ ರೆಡಿಯಾಗ್ತಿವೆ. ಇದರ ಮೊದಲ ಹೆಜ್ಜೆಯೇ ಮುಂದಿನ ಸೋಮವಾರ ಮಾರ್ಚ್ 23ರಿಂದ ರಾತ್ರಿ 8 ಗಂಟೆಗೆ ಮೂಗತಿ ಮಲ್ಲಿ ಹೆಸರಿನ ಹೊಸ ಧಾರಾವಾಹಿ

Sun

ಶುರುವಾಗಲಿದೆ. ಇದೊಂದು ಲವ್ ಸ್ಟೋರಿ. ಶ್ರೀಮಂತರು ಅಂದ್ರೆ ದೂರ ಓಡಿ ಹೋಗೋ, ಕಷ್ಟದಲ್ಲಿ ಬೆಳೆದ ಹುಡುಗಿಗೂ, ಬಡವರನ್ನು ಕಡೆಗಣ್ಣಿನಿಂದಲೂ ನೋಡದೇ ಇರೋ ಶ್ರೀಮಂತ ಕುಟುಂಬದ ಹುಡುಗನಿಗೂ ನಡೆಯೋ ಲವ್ ಸ್ಟೋರಿ. ನಮ್ ಹುಡುಗಿ ಮಲ್ಲಿ ಚೂಟಿ, ಘಾಟಿ ಮತ್ತು ಸ್ವಾಭಿಮಾನಿ. ಅಣ್ಣ ಉಂಡಾಡಿ ಗುಂಡ. ಹಾಗಾಗಿ ಮನೆ ಹೊಣೆಗಾರಿಕೆ ಇವಳ ಹೆಗಲ ಮೇಲೆ ಬಿದ್ದಿದೆ. ಅಪ್ಪನಿಂದ ಬಳುವಳಿಯಾಗಿ ಬಂದಿರೋ ಅಡುಗೆ ಕೆಲಸವೇ ಈಕೆಯ ಕೈಹಿಡಿದಿದೆ. ಮನೆ ಮನೆಗೆ ಹೋಗಿ ಅಡುಗೆ ಮಾಡೋ ಮಲ್ಲಿಯ ಕೈಯಲ್ಲಿ ಅದೇನೋ ಜಾದೂ ಇದೆ.

Sun 2

ಹಸಿದವರಿಗಷ್ಟೇ ಅನ್ನದ ಬೆಲೆ ಗೊತ್ತಿರೋದು ಅನ್ನೋದು ಅವಳ ನಂಬಿಕೆ. ಮಸಾಲೆ ಕಂಪನಿ ನಡೆಸೋ, ಹಸಿವೇ ನೋಡದ ಕುಟುಂಬದ ಹುಡುಗ ವಿರಾಜ್. ಈತನಿಗೆ ಮಲ್ಲಿಯನ್ನು ನೋಡಿದ್ ಕೂಡ್ಲೇ ಲವ್ವಾಗುತ್ತೆ. ಈಕೆಗೋ ಶ್ರೀಮಂತರನ್ನು ಕಂಡರಾಗದು. ಈ ಮಧ್ಯೆ ದ್ವೇಷಕ್ಕಾಗಿ ಮನೆಯೊಳಗೆ ನಡಿಯೋ ಸಂಚುಗಳು. ಇವೆಲ್ಲ ನಡಿಯೋವಾಗ ಮಲ್ಲಿ ಮತ್ತು ವಿರಾಜ್ ಲವ್ ಸ್ಟೋರಿ ಎಲ್ಲಿ ಮುಟ್ಟುತ್ತೆ? ಇದಕ್ಕೆ ಉತ್ತರ ಸೋಮವಾರ ರಾತ್ರಿ 8 ಗಂಟೆಗೆ ಸಿಗುತ್ತೆ.

Sun 3

ಅಂತರಪಟ ಖ್ಯಾತಿಯ ಚಂದನ್ ಗೌಡ ನಾಯಕ, ಕೋಟಿ ಸಿನಿಮಾದಲ್ಲಿ ಡಾಲಿ ಧನಂಜಯ ತಂಗಿಯಾಗಿ ನಟಿಸಿದ್ದ ತನುಜಾ ವೆಂಕಟೇಶ್ ನಾಯಕಿ. ಹಿರಿಯ ನಟಿ ಅಂಬಿಕಾ, ತೆಲುಗು ಬಿಗ್ಬಾಸ್ ಖ್ಯಾತಿಯ ಕನ್ನಡತಿ ಕೀರ್ತಿ ಭಟ್, ಆರ್ಯ, ವೀಣಾ ಪೊನ್ನಪ್ಪ, ಪುನೀತ್, ಮರೀನಾ- ಹೀಗೆ ಭಾರೀ ತಾರಾಗಣ ಮೂಗುತಿ ಮಲ್ಲಿಯಲ್ಲಿದೆ. ಯಶೋದೆ, ಶ್ರೀಗೌರಿ ಮುಂತಾದ ಸೀರಿಯಲ್ಗಳಲ್ಲಿ ನಾಯಕನಾಗಿದ್ದ ಆರವ್ ಕಾರ್ತಿಕ್ ಇದರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ.

Sun 4

ಪುನೀತ್ ಅವರ ಕ್ಯಾಮರಾ ಕೈಚಳಕ ಇಲ್ಲಿದೆ. ಈವೆಂಟೈನರ್ಸ್ ಸಂಸ್ಥೆಯ ಅಜಯ್ ರವಿ ಮೂಗುತಿ ಮಲ್ಲಿಯ ಪ್ರೊಡ್ಯೂಸರ್. ಯುಗಾದಿ ಹಬ್ಬಕ್ಕೆ ಉದಯ ಚಾನೆಲ್ ಸನ್ ಉದಯವಾಗಿ ಬದಲಾಗಿದೆ. ಹೊಸ ಸೀರಿಯಲ್ಗಳು ಶುರುವಾಗ್ತಿವೆ. ಕಾರ್ಯಕ್ರಮಗಳು ಬೆಟರ್ ಆಗಿವೆ.

Sun 5

ಹೊಸ ಹೊಸ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಬರ್ತಿದ್ದಾರೆ. ಕನ್ನಡಿಗರು ಈ ಪ್ರಯತ್ನಗಳನ್ನು ಖಂಡಿತಾ ಪ್ರೋತ್ಸಾಹಿಸ್ತಾರೆ ಎನ್ನುತ್ತಾರೆ ಚಾನೆಲ್ನ ಮುಖ್ಯಸ್ಥರು. ಮೂಗತಿ ಸುಂದರಿಯು 23ರಿಂದ ಸೋಮವಾರದಿಂದ ಶನಿವಾರ ತನರ ರಾತ್ರಿ 8 ಗಂಟೆಗೆ ಸನ್ ಉದಯವಾಹಿನಿಯಲ್ಲಿ ಹಾಜರಿರುತ್ತಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ