ಸ್ಯಾಂಡಲ್ ವುಡ್ಗೆ ಸದಾ ಪರಭಾಷಾ ನಾಯಕಿಯರ ದಾಳಿ ಇದ್ದದ್ದೇ. ಇಂಥವರ ಮಧ್ಯೆ ಅಪ್ಪಟ ಕನ್ನಡ ಪ್ರತಿಭೆಯಾಗಿ, ಮದುವೆಯಾದ ನಂತರ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಹೊಸದಾಗಿ ಬರುತ್ತಿರುವ ನಟಿ ಸ್ವಾತಿ, ತಮ್ಮ ಬಗ್ಗೆ ಇಲ್ಲಿ ಏನು ಹೇಳಿಕೊಂಡಿದ್ದಾರೆ....?

ಕನ್ನಡ ಚಿತ್ರರಂಗಕ್ಕೆ ನಿತ್ಯ ಹೊಸಬರ ಪ್ರವೇಶ ಆಗುತ್ತಲೇ ಇದೆ. ಇತ್ತೀಚೆಗಂತೂ ಹೊಸ ಪ್ರತಿಭಾವಂತ ನಟನಟಿಯರ ದಂಡೇ ಇತ್ತ ಹರಿದುಬರುತ್ತಿದೆ. ಅಂತಹವರಲ್ಲಿ ಹಲವರು ಚಿತ್ರರಂಗದ ಹಿನ್ನೆಲೆ ಇರದಂತಹ ಬೇರೆಯದೇ ಕ್ಷೇತ್ರದಲ್ಲಿ ದುಡಿದವರು ಎನ್ನುವುದು ವಿಶೇಷ. ಸಾಫ್ಟ್ ವೇರ್‌ ಟೆಕ್ಕಿಗಳು, ಮಾಡೆಲಿಂಗ್‌ ಕ್ಷೇತ್ರದವರು, ಖಾಸಗಿ ಬಿಸ್‌ ನೆಸ್‌ ನಡೆಸುವವರು ಸಹ ಇದರಲ್ಲಿ ಇದ್ದಾರೆ. ಇವರಲ್ಲಿ ಅನೇಕರು ಚಿತ್ರರಂಗಕ್ಕೆ ಪ್ರವೇಶಿಸುವುದು ಕೇವಲ ಆಕಸ್ಮಿಕವಾಗಿ. ಸ್ವಾತಿ ಲಿಂಗರಾಜು ಸಹ ಅಂತಹರಲ್ಲಿ ಒಬ್ಬರು. ಮೂಲತಃ ಸಾಫ್ಟ್ ವೇರ್‌ ಟೆಕ್ಕಿಯಾಗಿ ನೆಟ್‌ ವರ್ಕ್‌ ಎಂಜಿನಿಯರ್‌ ಆಗಿದ್ದ ಸ್ವಾತಿ ವಿಧಾನಸೌಧದಲ್ಲಿ ಸಹ ಕೆಲಸ ಮಾಡಿದ್ದಾರೆ.

ಆದರೆ ಈಗ ಆಕೆ `ವಿಧಿ (ಆರ್ಟಿಕಲ್) 370' ಖ್ಯಾತಿಯ ನಿರ್ದೇಶಕ ಶಂಕರ್‌ ರ ನಿರ್ದೇಶನದ `ಹಲೋ ಸರ್‌' ಚಿತ್ರದ ನಾಯಕಿಯಾಗಿದ್ದಾರೆ. ಸ್ವಾತಿಯ ನಟನಾವೃತ್ತಿ ಹೇಗೆ ಪ್ರಾರಂಭವಾಗಿತ್ತು? ಅವರ ಭವಿಷ್ಯದ ಕನಸೇನು ಎನ್ನುವುದನ್ನು `ಗೃಹಶೋಭಾ'ದ ಜೊತೆ ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದ ಸಾರಾಂಶ ಇಲ್ಲಿದೆ :

1000421535

ಆರಂಭದ ಕೆರಿಯರ್

ವಿಧಾನಸೌಧದ ಕೆಲಸದಲ್ಲಿದ್ದ ಸಮಯದಲ್ಲಿ ಸ್ವಾತಿಗೆ ಒಂದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿತು. ಮಿಸೆಸ್‌ ಇಂಡಿಯಾ ಇಂಟರ್‌ ನ್ಯಾಷನಲ್ ಕ್ವೀನ್‌ ಎನ್ನುವ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ವಾತಿಗೆ, ನಟನೆಯೇ ತನ್ನ ವೃತ್ತಿಯಾಗಲಿದೆ ಎನ್ನುವುದರ ಬಗ್ಗೆ ಯಾವ ಸೂಚನೆಯೂ ಇರಲಿಲ್ಲ. ಆದರೆ ಉದ್ಯೋಗದಲ್ಲಿನ ಕೆಲವು ಅಡೆತಡೆಯ ಬಳಿಕ ಅವರು ನಟನೆಯತ್ತ ವಾಲಿದ್ದರು.

ಇದಕ್ಕಾಗಿ ಅವರು ಸಂತೋಷ್‌ ಮೈಮ್ ರ ಬಳಿ ತರಬೇತಿ ಪಡೆದುಕೊಂಡಿದ್ದು ಚಿತ್ರವೊಂದಕ್ಕೆ ಆಯ್ಕೆಯಾದ ನಂತರವೇ ಇವರು ನಟನಾ ತರಬೇತಿ ಪಡೆಯಲು ಪ್ರಾರಂಭಿಸಿದ್ದರೆನ್ನುವುದು ಮಹತ್ವದ ಸಂಗತಿಯಾಗಿದೆ.

swathi

``ನಾನು ಸಿನಿಮಾದಲ್ಲಿ ಅಭಿನಯಿಸುವುದರ ಬಗೆಗೆ ನನ್ನ ತಾಯಿ ತಂದೆಗೆ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಪತಿಗೆ ಇದರ ಬಗ್ಗೆ ತಿಳಿದಿದೆ. ಅವರ ಸಪೋರ್ಟ್‌ ನನಗೆ ಬಹಳ ಇದೆ. ಅವರ ಬೆಂಬಲದಿಂದಲೇ ನಾನು ನಟನಾ ಕ್ಷೇತ್ರಕ್ಕೆ ಬಂದಿರುವುದು,'' ಎಂದು ಸ್ವಾತಿ ಹೇಳುತ್ತಾರೆ.

20240103_155448

ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ

ಮಿಸೆಸ್‌ ಇಂಡಿಯಾ ಇಂಟರ್‌ ನ್ಯಾಷನಲ್ ಕ್ವೀನ್‌ ಸ್ಪರ್ಧೆಗೆ ಆಯ್ಕೆಯಾಗಿದ್ದ ಕುರಿತು ವಿವರಿಸಿರುವ ನಟಿ, ``ನಾನು ಆನ್‌ ಲೈನ್ ಆಡಿಷನ್‌ ತೆಗೆದುಕೊಂಡು ಸ್ಪರ್ಧೆಗೆ ಆಯ್ಕೆಯಾಗಿದ್ದೆ. ಆ ಸ್ಪರ್ಧೆಗಾಗಿ ನಾನು ಮೂರು ತಿಂಗಳ ಕಾಲ ತಯಾರಿ ನಡೆಸಿದ್ದೆ. ಅದರಲ್ಲಿ ಡ್ಯಾನ್ಸ್ ತರಬೇತಿ ಸಹ ಒಳಗೊಂಡಿತ್ತು, ಈ ಸ್ಪರ್ಧೆಯಲ್ಲಿ ನನಗೆ ಮಿಸೆಸ್‌ ಇಂಡಿಯಾ ಅಲ್ಲುರಿಂಗ್‌ ಎನ್ನುವ ಟೈಟಲ್ ಬಂದಿದೆ. ನಾಲ್ಕು ಸುತ್ತಿನ ಸ್ಪರ್ಧೆ ಇದಾಗಿದ್ದು, ಅದರಲ್ಲಿ ನನ್ನ ಪರಿಚಯ, ಬೌದ್ಧಿಕ ಸಾಮರ್ಥ್ಯ, ಆಂಗಿಕ ಅಭಿನಯ ಸೇರಿ ನಾನಾ ರೀತಿಯ ಪರೀಕ್ಷೆಗಳಿದ್ದವು,'' ಎಂದು ಅವರು ವಿವರಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ