ಸರಸ್ವತಿ ಜಾಗೀರ್ದಾರ್*

ತನೀಷಾ ಅಂದ್ರೆ ಬೆಂಕಿ .. ಬೆಂಕಿ ಅಂದ್ರೆ ತನೀಷಾ ಎನ್ನುವಷ್ಟು ಫೇಮಸ್ ಆಗಿರೋ ಬಿಗ್ ಬಾಸ್ ಫೇಮ್,ನಟಿ, ಸೋಷಿಯಲ್ ಮೀಡಿಯಾ ಕ್ವೀನ್, ಉದ್ಯಮಿ,ನಿರ್ಮಾಪಕಿ ಹೀಗೆ ಆಲ್ ರೌಂಡರ್ ಆಗಿರೋ ತನೀಷಾ ಕುಪ್ಪಂಡ ಮಾತಿಗೆ ಸಿಕ್ಕಾಗ ಹೊರ ಬಂದ ಮಾತುಗಳು..

ನಿರ್ಮಾಪಕಿ ಆಗಲು ಡಿಸೈಡ್ ಮಾಡಿದ್ದೇಕೆ..?

ಮೇಡಂ ನಿಮಗೊತ್ತಾ ನಾಲ್ಕು ವರ್ಷದವಳಿದ್ದಾಗಲೇ ನಾನು ನಟಿಯಾಗ್ಬೇಕು ಅಂತ ಕನಸು ಕಂಡವಳು ..ಆದೆ ‌. ಅಂದು ಕೊಂಡದ್ದನ್ನ ಸಾಧಿಸೋದೆ ನನ್ನ ಜಾಯಮಾನ.. ನಾನೀಗ ಉದ್ಯಮಿ, ಜ್ಯುವೆಲರಿ ಶಾಪ್ ಓನರ್ ಇನ್ನೂ ಒಂದೆರಡು ಬ್ರಾಂಚ್ ಓಪನ್ ಮಾಡ್ತೀನಿ , ಸಿನಿಮಾ ನಿರ್ಮಾಣ ಮಾಡ್ಬೇಕು ಅನುಸ್ತು ಮಾಡ್ದೆ ನನ್ನ ಟೀಮ್ ಎಲ್ಲರಿಗೂ ಹೆಸರು ಮಾಡಬೇಕು ಒಳ್ಳೆ ರೀತಿಯಲ್ಲಿ ಎಂಬ ಹಸಿವು ಇದೆ..

ನಿರ್ಮಾಪಕಿಯಾಗಿ ನಿಮ್ಮ ತಂಡದ ಹೆಣ್ಣು ಮಕ್ಕಳು ಎಷ್ಟು ಸೇಫ್..ಏನೇನು ಮೆಷರ್ಸು ತಗೊಂಡಿದ್ದೀರಾ?

ನಮ್ ಟೀಮ್ ಬಹಳ ಶಿಸ್ತಿನಿಂದ ಕೆಲಸ ಮಾಡ್ತಾರೆ .. ವರ್ಕ್ ಈಸ್ ವರ್ಶಿಪ್ ಅಂತ ನಂಬಿದ್ದೀವಿ..ಸೆಟ್ಟಿನಿಂದಾಚೆ..ನಡೆಯೋದೇನು ಬೇಕಾಗಿಲ್ಲ ಎಲ್ಲವನ್ನೂ ಹೊರಗಿಟ್ಟು ..ಸೆಟ್ಟಿ ನೊಳಗೆ ಬರಬೇಕು ಅಷ್ಟೇ..ನಮ್ಮದು ಪ್ರೊಫೆಷನಲ್ ಟೀಂ ಇಲ್ಲಿ ಕೆಲಸ ಮಾಡೋರಿಗೆ ಮಾತ್ರ ವೆಲ್ ಕಮ್

ಮಹಿಳಾ ಸುರಕ್ಷತೆ ಬಗ್ಗೆ…!

ನೇರವಾಗಿ ಹೇಳ್ತೀನಿ .‌ಹಳೆಯ ವಿಷಯವನ್ನು ಕೆದಕೋದ್ರಲ್ಲಿ ಅರ್ಥವಿಲ್ಲ .. ನಿನ್ನೆ ನಡೀತಾ ಇವತ್ತೇ ಡಿಸೈಡ್ ಆಗ್ಬೇಕು.. ಇನ್ನೊಂದು ವಿಷಯ ಹೆಣ್ಣು ಮಕ್ಕಳು ಧೈರ್ಯದಿಂದ ಎದುರಿಸಬೇಕು ..ಡೊಮ್ಯಾಸ್ಟಿಕ್ ವಾಯಿಲೆನ್ಸ್ ಅಂತ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡೋದಿಲ್ವಾ ..ಹಾಗೆ ಕೊಡಬೇಕು. ಗಂಡ ,ಅತ್ತೆ,ಮಾವ ಕಿರಿಕ್ ಮಾಡಿದ್ರೇನೆ ಹೆಣ್ಣು ಮಕ್ಕಳು ಸುಮ್ನಿರೋದಿಲ್ಲ..ಯಾರೋ ಮೂರನೆಯವನ ಕಿರುಕುಳ ಕೊಟ್ರೆ ಏಕೆ ಸುಮ್ಮನೆ ಸಹಿಸಬೇಕು..ನನ್ನ ತಂಟೆಗೆ ಬಂದವನನ್ನು ನಾನೇ ಸರಿಯಾಗಿ ರಿಪೇರಿ ಮಾಡ್ದೆ ‌‌.. ಈಗಲೂ ಅಕಸ್ಮಾತ್ ಎದುರಿಗೆ ಬಂದರೆ ಮಾತಾಡ್ತೀನಿ. ದಿನಕ್ಕೆ ಮೂರ್ನಾಲ್ಕು ಇವೆಂಟ್ಸ್ ಅಟೆಂಡ್ ಮಾಡ್ತೀನಿ ‌.. ಮಹಿಳೆಯರ ಸಾಧನೆಯನ್ನು ಪ್ರೋತ್ಸಾಹಿಸ್ತೀನಿ , ಅವರ ಅನೇಕ ಇವೆಂಟ್ ಗಳಿಗೆ ಕರೆದಾಗ ಹಣ ಕೊಡಲಿ ಬಿಡಲಿ ಹೋಗುತ್ತೇನೆ . ರಾತ್ರಿ ತಡವಾದರೂ ಧೈರ್ಯದಿಂದ ಮನೆಗೆ ಒಬ್ಬಳೇ ಬರ್ತೀನಿ .. ಮೊದಲೆಲ್ಲ ಕೆಟ್ಟದಾಗಿ ಮೆಸೇಜ್ ಮಾಡಿ ಮೆಂಟಲ್ ಹಿಂಸೆ ಕೊಡೋರು ಅದೆಲ್ಲವನ್ನೂ ಬ್ಲಾಕ್ ಮಾಡಿದೆ..ಈಗಿಗ್ಗೆ ಅಂತೂ ಕೇರೇ ಮಾಡೋಲ್ಲ..

ನಾನು ಬ್ಯೂಟಿಫುಲ್..ದೇವರು ನನ್ನನ್ನು ಸೃಷ್ಟಿ ಮಾಡಿರೋದೆ ಹೀಗೆ ..ಸೋ ಐ ಆಮ್ ಹ್ಯಾಪಿ

ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂದು ಹೇಳೋದನ್ನ ತನೀಷಾ ಮರೆಯಲಿಲ್ಲ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ