ನ್ಯಾಷನಲ್ ಕ್ರಶ್ ರಶ್ಮಿಕಾ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಆಗಿ ರಾರಾಜಿಸುತ್ತಿದ್ದಾರೆ. ಅದಕ್ಕೆ ಸದ್ಯ ರಿಲೀಸ್ ಆಗಿರೋ ಥಮಾ ಹಾರರ್ ಫ್ಯಾಂಟಸಿ ಚಿತ್ರದ ಟೀಸರ್ ಹಾಗೂ ಆಕೆಯ ರೀಸೆಂಟ್ ಹಿಟ್ಸ್.

ಇದು ಥಮಾ ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ಕನ್ನಡತಿ, ನ್ಯಾಷನಲ್ ಕ್ರಶ್, ಪ್ಯಾನ್ ಇಂಡಿಯಾದ ಮೋಸ್ಟ್ ಡಿಮ್ಯಾಂಡಿಂಗ್ ನಟಿ ರಶ್ಮಿಕಾ ಮಂದಣ್ಣ ನಟನೆಯ ನೆಕ್ಸ್ಟ್‌ ಅಪ್‌ಕಮಿಂಗ್ ಎಂಟರ್‌‌ಟೈನರ್.  ಬಾಲಿವುಡ್‌‌ನಲ್ಲಿ ತಯಾರಾಗಿರುವ ಈ ಸಿನಿಮಾ ಸೈಲೆಂಟ್ ಆಗಿ ಶೂಟಿಂಗ್ ಮಾಡಿ ಮುಗಿಸಿದೆ. ದೆಹಲಿ, ಮುಂಬೈ ಹಾಗೂ ಊಟಿಯಲ್ಲಿ ಚಿತ್ರಿಕರಣಗೊಂಡಿರುವ ಈ ಸಿನಿಮಾ ಫ್ಯಾಂಟಸಿ ಜಾನರ್‌ಗೆ ಸೇರಿದ್ದು, ಹಾರರ್ ಕಾಮಿಡಿ ಎಂಟರ್‌‌ಟೈನರ್ ಆಗಿರಲಿದೆ.

ತಡಕ ಅನ್ನೋ ಪಾತ್ರದಲ್ಲಿ ರಶ್ಮಿಕಾ ಮಿಂಚಲಿದ್ದು, ದೆವ್ವ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದಿ ಬೆಸ್ಟ್ ಪರ್ಫಾಮರ್‌‌ಗಳಾದ ಆಯುಷ್ಮಾನ್ ಖುರಾನ, ನವಾಜುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಕ್ಟೋಬರ್ 17ಕ್ಕೆ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ. ಟೀಸರ್ ಮೂಲಕ ಪ್ರಮೋಷನ್ಸ್ ಕಿಕ್‌‌ಸ್ಟಾರ್ಟ್‌ ಮಾಡಿರುವ ಚಿತ್ರತಂಡ, ಆದಿತ್ಯ ಸರ್ಪೋಟ್ದಾರ್ ನಿರ್ದೇಶನದ ಥಮಾ ಒಂದಷ್ಟು ವಿಭಿನ್ನವಾಗಿ ತೆರೆಗೆ ಬರುವುದರಲ್ಲಿ ಸಂಶಯವಿಲ್ಲ.

ಸದಾ ಭಿನ್ನ ವಿಭಿನ್ನ ಪಾತ್ರಗಳಿಗಾಗಿ ಹಾತೊರೆಯುವ ರಶ್ಮಿಕಾ, ತಾನು ಎಲ್ಲಾ ಬಗೆಯ ಪಾತ್ರಗಳನ್ನು ನಿಭಾಯಿಸಬಲ್ಲೆ ಎಂಬ ಕಲಾವಿದೆ. ರಶ್ಮಿಕಾ ರೆಮ್ಯುನರೇಷನ್ ಕೂಡಾ ದಿನದಿಂದ ದಿನ ಏರುತ್ತಿದ್ದು, ಸಿನಿಮಾವೊಂದಕ್ಕೆ 10ರಿಂದ 12 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಒಟ್ಟಾರೆ ಕನ್ನಡದ ಬೆಡಗಿ ರಶ್ಮಿಕಾ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ