ತೆಲುಗು ಚಿತ್ರರಂಗದಲ್ಲೇ ಹಿಸ್ಟರಿ ಕ್ರಿಯೇಟ್ ಮಾಡ್ತಿರುವ ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕು ಮಹಾರಾಜ್’ ಸಿನಿಮಾದಲ್ಲಿ ಮೈಚಳಿ ಬಿಟ್ಟು ಹೆಜ್ಜೆ ಹಾಕಿ ಪಡ್ಡೆ ಹುಡುಗರ ಮೈಬೆಚ್ಚಗೆ ಮಾಡಿದ್ದರು. ‘ದಬಿಡಿ ದಿಬಿಡಿ’ ಅಂತಾ ಸೊಂಟ ಬಳುಕಿಸಿ ಬಿಲ್ಡಪ್ ಬಾಲಯ್ಯಗೇ ಸಖತ್ತಾಗೇ ಬಿಲ್ಡಪ್ ಕೊಟ್ಟಿದ್ದರು. ಆ ಹಾಡು ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ, ಯೂಟ್ಯೂಬ್​ನಲ್ಲಿಮಿಲಿಯನ್​ಗಟ್ಟಲೇ ವೀಕ್ಷಣೆ ಪಡೆದಿದೆ. ನಟ ಬಾಲಯ್ಯ ಕೂಡ ಈ ಹಾಡಿಗೆ ಸ್ಟೆಪ್ ಹಾಕೋ ಮೂಲಕ ಹೊಸ ಕಾಂಟ್ರವರ್ಸಿಗೂ ಕಾರಣವಾಗಿದ್ದರು. ಈ ವಯಸ್ಸಲ್ಲಿ ಇಂತಹ ಸ್ಟೆಪ್ ಬೇಕಿತ್ತಾ ಅಂತೆಲ್ಲಾ ಕಮೆಂಟ್ ಜೋರಾಗಿಯೇ ಇದ್ದವು. ಆದ್ರೆ, ಆ ಕಮೆಂಟ್ ಹಾಕೋ ಮಂದಿ ಮಾತ್ರ ಹಾಡನ್ನ ನೋಡದೇ ಇರ್ತಿಲ್ಲ. ಈ ಜಬರ್ದಸ್ತ್ ಹಾಡಿನಿಂದ ಹಾಗೂ ನಟ ಬಾಲಯ್ಯ ಬಿಲ್ಡಪ್ ಆಕ್ಟಿಂಗ್​ನಿಂದಲೇಡಾಕು ಮಹರಾಜ್ ಈಗಾಗಲೇ 150 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಅದೇನೇ ಇರ್ಲಿ.. ‘ಡಾಕು ಮಹಾರಾಜ್’ನ ‘ದಬಿಡಿ ದಿಬಿಡಿ’ ಹಾಡಿಗೆ ಸ್ಟೆಪ್ ಹಾಕಿದ್ದೇ ತಡ ಈ ಸುಂದರಿ ಈಗ ಸೋಷಿಯಲ್ ಮೀಡಿಯಾದಲ್ಲಿ ನಂಬರ್ ಒನ್ ಸೆಲಬ್ರಿಟಿ ಆಗಿಬಿಟ್ಟಿದ್ದಾರೆ. ನೀವು ನಂಬ್ತೀರೋ ಇಲ್ವೋ.. ನಟಿ ಊರ್ವಶಿ ರೌಟೇಲಾ ಖ್ಯಾತ ಕ್ರಿಕೆಟಿಗ, ಟೀಂ ಇಂಡಿಯಾದ ಎನರ್ಜಟಿಕ್ ಪ್ಲೇಯರ್ ವಿರಾಟ್ ಕೊಹ್ಲಿಯವರನ್ನೇ ಮೀರಿಸಿದ್ದಾರಂತೆ.ಅಷ್ಟೇ ಅಲ್ಲ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೇ ಹಿಂದಿಕ್ಕಿದ್ದಾರಂತೆ.

2025ನೇ ವರ್ಷದ ಪಾಪ್ಯುಲಾರಿಟಿಯಲ್ಲಿ ಸದ್ಯಕ್ಕೀಗ ಊರ್ವಶಿನೇ ನಂಬರ್ ಒನ್ ಆಗಿದ್ದಾರೆ. ಹಾಗಂತ ರಾಷ್ಟ್ರೀಯ ಮನರಂಜನಾ ವಾಹಿನಿ ಜೂಮ್ ಟಿವಿ, ಊರ್ವಶಿ ವಿಡಿಯೋ ಜೊತೆ ಒಂದು ಪೋಸ್ಟ್​ನ್ನಅಪ್ಲೋಡ್ ಮಾಡಿತ್ತು. ‘ನೋಡ್ತಾ ಇದ್ರೆ, ಈ ವರ್ಷ ನಿಮ್ಮದೇ ಅನ್ನಿಸುತ್ತಿದೆ ಊರ್ವಶಿ’ ಅಂತಾ ಪೋಸ್ಟ್ ಹಾಕಿತ್ತು. ಅದೇ ಪೋಸ್ಟ್​ನ್ನತಮ್ಮ ಇನ್​ಸ್ಟಾಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿರೋ ಊರ್ವಶಿ ರೌಟೇಲಾ, ಅದರ ಜೊತೆ ತಾವು ವಿರಾಟ್ ಕೊಹ್ಲಿಯನ್ನೇ ಸೋಲಿಸಿರೋದಾಗಿ ಹೇಳಿಕೊಂಡಿದ್ದಾರೆ. ‘ಜನವರಿ 2025ರಲ್ಲಿ ಊರ್ವಶಿ ರೌಟೇಲಾ ಅವರ ಜನಪ್ರಿಯತೆ ವಿರಾಟ್ ಕೊಹ್ಲಿ ಮತ್ತು ಪಿಎಂ ಮೋದಿಗಿಂತ ಹೆಚ್ಚಾಗಿದೆ’ ಎಂದು ಖುದ್ದು ಅವರೇ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಅಸಲಿಗೆ ಊರ್ವಶಿ ರೌಟೇಲಾ ನಟಿಯಾಗಿರುವುದರ ಜೊತೆಗೆ ದೊಡ್ಡ ಕ್ರಿಕೆಟ್ ಅಭಿಮಾನಿಯೂ ಕೂಡ ಆಗಿದ್ದಾರೆ. ಭಾರತ ತಂಡವನ್ನು ಬೆಂಬಲಿಸೋಕೆ ಆಗಾಗ್ಗೆ ಸ್ಟೇಡಿಯಂಗೂ ಕೂಡ ಆಗಮಿಸುತ್ತಾರೆ. ಅದೇನೇ ಇದ್ರೂ ಹಿಂಗೆಲ್ಲಾ ಬರೆದುಕೊಂಡ್ರೆ ಹೆಂಗೆ ಅಂತಾ ಕೊಹ್ಲಿ ಫ್ಯಾನ್ಸ್ ಊರ್ವಶಿ ಪೋಸ್ಟ್​​ಗೆಕಮೆಂಟ್ ಹಾಕ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ