- ರಾಘವೇಂದ್ರ ಅಡಿಗ ಎಚ್ಚೆನ್.

ಸ್ಯಾಂಡಲ್ವುಡ್ನ ಶೋಕ್ದಾರ್ ಧನ್ವೀರ್ ನಟನೆಯ ಬಹುನಿರೀಕ್ಷಿತ ಚಿತ್ರ “ವಾಮನ” ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದ್ದು, ಚಿತ್ರ ರಿಲೀಸ್ ಆದ ಮೊದಲ ದಿನವೇ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಧನ್ವೀರ್ ಮಾಸ್ ಹಾಗೂ ಕ್ಲಾಸ್ ಅವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದು, “ವಾಮನ”ನನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಹಲವು ವಿಚಾರಗಳಲ್ಲಿ ವಾಮನ ಚಿತ್ರ ಸ್ಯಾಂಡಲ್ವುಡ್ನ ಹಳೆಯ ದಾಖಲೆಗಳನ್ನು ಪುಡಿ ಮಾಡಿದೆ.

ಸೊರಗಿ ಹೋಗಿದ್ದ ಸ್ಯಾಂಡಲ್ವುಡ್ಗೆ ವಾಮನ ಜೀವ ತುಂಬಿದೆ. ಈಗಾಗಲೇ ಸಿನಿಮಾದ ಹಾಡುಗಳು ಹಾಗೂ ಟೀಸರ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು, ಪಕ್ಕಾ ಮಾಸ್ ಹಾಗೂ ಕ್ಲಾಸ್ ಅಂಶಗಳಿರುವ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

WhatsApp-Image-2025-04-10-at-2.53.19-PM-768x438

ಚಿತ್ರದಲ್ಲಿ ನಾಯಕನ ಗುಣ ನೀರು ಇದ್ದಂತೆ. ರಾವಣ, ದುರ್ಯೋಧನ ಇಬ್ಬರನ್ನೂ ವಾಮನ ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಲ್ಕು ಭರ್ಜರಿ ಆ್ಯಕ್ಷನ್ ದೃಶ್ಯಗಳಿವೆ. ಮಾಸ್ ಆಡಿಯನ್ಸ್‌ಗೆ ಬೇಕಾದ ಅಂಶಗಳು ಕೂಡ ಚಿತ್ರದಲ್ಲಿವೆ. ಚಿತ್ರದ ಕಥೆಯಲ್ಲಿ ನಾಯಕ ನಟನ ಪಾತ್ರವನ್ನು ಒಂದಿಷ್ಟು ಜನ ಕಡೆಗಣಿಸುತ್ತಾರೆ. ಅವರಿಗೆ ನಾಯಕನ ಏಳಿಗೆ ಇಷ್ಟವಿರುವುದಿಲ್ಲ. ಆದರೆ ಎಲ್ಲರ ಊಹೆಗೂ ನಿಲುಕದ ಹಾಗೆ ನಾಯಕ ಬೆಳೆಯುತ್ತೇನೆ. ಕೇವಲ ಆ್ಯಕ್ಷನ್ ಸನ್ನಿವೇಶಗಳಿಂದ ನಾಯಕ ದೊಡ್ಡವನಾಗಿ ಕಾಣಿಸುವುದಿಲ್ಲ. ಬದಲಾಗಿ ಆತ ಏಕೆ ಹೊಡೆದಾಡುತ್ತಾನೆ ಎಂಬುದು ಮುಖ್ಯವಾಗಿದೆ. ಅದುವೇ ಕಥೆಯ ಸಾರವಾಗಿದೆ.

WhatsApp-Image-2025-04-10-at-2.53.17-PM-1

ನಟ ದರ್ಶನ್, ಚಿಕ್ಕಣ್ಣ ಸೇರಿದಂತೆ ಆಪ್ತರು ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ಆಗಮಿಸಿ ಧನ್ವೀರ್ಗೆ ಸಾಥ್ ನೀಡಿದ್ದರು. ಇನ್ನು ಈ ಹಿಂದೆ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ದರ್ಶನ್ ವಿಜಯಲಕ್ಷ್ಮೀ ಬೆಂಬಲ ನೀಡಿದ್ದರು.

ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈ ನ್ವೆಂಟ್ ಲಾಂಛನದಡಿ ಚೇತನ್ ಗೌಡ “ವಾಮನ’ ಚಿತ್ರಕ್ಕೆ ಹಣ ಹೂಡಿದ್ದು, ಶಂಕರ್ ರಾಮನ್ ಅವರ ಮೊದಲ ನಿರ್ದೇಶನದ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಧನ್ವೀರ್ಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್. ಪೇಟೆ, ಕಾಕ್ರೋಚ್ ಸುಧಿ ಚಿತ್ರದ ತಾರಾಗಣದಲ್ಲಿದ್ದಾರೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ, ಭೂಷಣ್ ನೃತ್ಯ ಸಂಯೋಜನೆ, ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ.

WhatsApp-Image-2025-04-10-at-3.55.08-PM-682x1024

ಈ ವಾಮನ ಚಿತ್ರರಂಗದಲ್ಲಿ ಒಂದು ಕಾಲಿಡೋದಕ್ಕೆ ಜಾಗ ಕೇಳ್ತಿದ್ದಾನೆ: ದರ್ಶನ್
ನಟ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಅಭಿನಯದ ವಾಮನ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಗೆಳೆಯನ ಸಿನಿಮಾಗೆ ದರ್ಶನ್ ಸಾಥ್ ನೀಡಿದ್ದು, ತೀವ್ರ ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ನಿನ್ನೆ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದಾರೆ. ನಟ ದರ್ಶನ್, ಚಿಕ್ಕಣ್ಣ ಸೇರಿದಂತೆ ಆಪ್ತರು ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ಆಗಮಿಸಿ ಧನ್ವೀರ್ಗೆ ಸಾಥ್ ನೀಡಿದ್ದಾರೆ.

WhatsApp-Image-2025-04-10-at-7.05.29-AM-768x432

ಸಿನಿಮಾ ನೋಡಿದ ಬಳಿಕ ಮಾತನಾಡಿದ ನಟ ದರ್ಶನ್, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಟ್ರೈಲರ್ ನೋಡಿದಾಗ ಮಾಸ್ ಸಿನಿಮಾ ಅಂದುಕೊಳ್ಳುತ್ತಾರೆ. ಆದ್ರೆ ಮದರ್ ಸೆಂಟಿಮೆಂಟ್ ತುಂಬಾ ಚೆನ್ನಾಗಿದೆ. ಫಸ್ಟ್ ಆಫ್ ಮುಗಿದ ಮೇಲೆ ಇನ್ನೊಂದು ತರ ಇದೆ. ತುಂಬಾ ಚೆನ್ನಾಗಿ ಬಂದಿದೆ. ನನಗೆ ತುಂಬಾ ಇಷ್ಟ ಆಗಿದೆ. ಫೈಟ್ಗಳು ತುಂಬಾ ಚೆನ್ನಾಗಿ ಮಾಡಿದ್ದಾರೆ. ಒಳ್ಳೆ ಸಾಂಗ್ಗಳಿದೆ. ಧನ್ವೀರ್ ಚೆನ್ನಾಗಿ ಗ್ರೋನ್ ಅಪ್ ಆಗಿದ್ದಾರೆ. ಎಲ್ಲ ಕರ್ನಾಟಕದ ಜನತೆ ಈ ಸಿನಿಮಾ ನೋಡಿ ಎಂದು ದರ್ಶನ್ ಕೇಳಿಕೊಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ