ಚಿತ್ರ: ವಿದ್ಯಾಪತಿ
ನಿರ್ದೇಶಕ : ಎಶಾಮ್,ಹಸೀನ್
ನಿರ್ಮಾಣ: ಧನಂಜಯ್.
ತಾರಾಂಗಣ: ನಾಗಭೂಷಣ, ಮಲೈಕಾ ವಸುಪಾಲ್, ಧನಂಜಯ್, ರಾಮಚಂದ್ರ ರಾಜು ಮುಂತಾದವರು.
ರೇಟಿಂಗ್: 3.5/5

- ರಾಘವೇಂದ್ರ ಅಡಿಗ ಎಚ್ಚೆನ್.

ಯಾವ ಜವಾಬ್ದಾರಿಯೂ ಇಲ್ಲದೆ ತಾನು ತನ್ನ ಪಾಡಿಗಿದ್ದು ಹೊತ್ತು ಹೊತ್ತಿಗೆ ಸರಿಯಾಗಿ ಉಂಡು ತಿಂದು ಸಿರಿವಂತಿಕೆಯ ಜೀವನ ನಡೆಸಬೇಕೆನ್ನುವ ಆಸೆ ಹೊಂದಿರುವ ಸಿದ್ದು (ನಾಗಭೂಷಣ) ಓರ್ವ ಮದ್ಯಮ ವರ್ಗದ ಕುಟುಂಬದಿಂದ ಬಂದವನು. ಅವನಿಗೆ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ವಿದ್ಯಾ (ಮಲೈಕಾ ವಸುಪಾಲ್) ಮೇಲೆ ಲವ್ ಆಗುತ್ತದೆ. ಅವಳನ್ನು ತನ್ನತ್ತ ಸೆಳೆಯಲು ಸುಳ್ಳಿನ ಸರಮಾಲೆ ಕಟ್ಟಿಕೊಳ್ಳುತ್ತಾನೆ ಆಕೆ ಅದನ್ನು ನಂಬಿ ಅವನನ್ನೇ ಮದುವೆ ಆಗುತ್ತಾಳೆ.

ಬಳಿಕ ಅವನು ತನ್ನ ಕುಟುಂಬ, ಗೆಳೆಯರನ್ನು ತೊರೆದು ಪತ್ನಿಯ ಹಣದಿಂದಲೇ ರಾಯಲ್ ಬದುಕು ಸಾಗಿಸುತ್ತಿರುತ್ತಾನೆ. ಆದರೆ ಈ ಸುಳ್ಳಿನ ಬದುಕು ಹೆಚ್ಚು ದಿನ ನಡೆಯುವುದಿಲ್ಲ. ಅವನ ಜೀವನದಲ್ಲಿ ಜಗ್ಗು (ಗರುಡ ರಾಮ್)! ಆಗಮನವಾಗುತ್ತದೆ. ಸಿದ್ದುವಿನ ಸುಳ್ಳಿನ ಮುಖವಾಡ ಕಳಚುತ್ತದೆ. ಮುಂದೆ ಜಗ್ಗುವನ್ನು ಸಿದ್ದು ಹೇಗೆ ಎದುರಿಸುತ್ತಾನೆ? ಸಮಸ್ಯೆಗಳಿಗೆ ಬೆನ್ನು ಹಾಕಿ ಓಡುವ ಸಿದ್ದುವಿನ ಬದುಕು ಹೇಗೆ ಸಾಗುತ್ತದೆ?ಅವನು ಜೀವನದಲ್ಲಿ ಗೆಲ್ಲುತ್ತಾನಾ? ಇದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.

 

image-18

ಇಲ್ಲಿ ನಿರ್ದೇಶಕರು ಕಥೆಯನ್ನು ಹಾಸ್ಯಮಯವಾಗಿ ತೋರಿಸಲು ಪ್ರಯತ್ನಿಸಿದ್ದಾರೆ ಕೊವಿಡ್ ಸಮಯದಲ್ಲಿ ‘ಇಕ್ಕಟ್’ ಹೆಸರಿನ ಸಿನಿಮಾ ಮಾಡಿದ್ದ ಹಸೀನ್ ಖಾನ್-ಇಶಾಮ್ ಖಾನ್ ಅವರಿಗಿದು ಎರಡನೇ ಚಿತ್ರ. ಅದರಲ್ಲಿಯೂ ನಾಗಭೂಷಣ ಅವರು ಮುಖ್ಯ ಪಾತ್ರದಲ್ಲಿದ್ದರು.

ಇಲ್ಲಿಯೂ ಅವರಿದ್ದಾರೆ. ಚಿತ್ರದಲ್ಲಿ ಹಾಸ್ಯವೇ ಹೈಲೈಟ್ ಸಿದ್ದು ಸಂಕಟ ಪಡುವಾಗ, ಸಂತೋಷ ಪಡುವಾಗ ಎಲ್ಲಾ ಸಮಯದಲ್ಲಿಯೂ ಪ್ರೇಕ್ಷಕನಿಗೆ ಹಾಸ್ಯ, ನಗುವಿಗೆ ಯಾವ ಕೊರತೆ ಇರುವುದಿಲ್ಲ. ಹಾಗೆ ಚಿತ್ರದ ನಿರೂಪಣೆ ಲವಲವಿಕೆಯಿಂದ ಸಾಗುತ್ತದೆ ಇದರೊಂದಿಗೆ ತಂದೆ ಮಗನ ಸೆಂಟಿಮೆಂಟ್‌ ನಂತಹಾ ಭಾವನಾತ್ಮಕ ದೃಶ್ಯಗಳೂ ಇದೆ.

image-19

ಪಾತ್ರದ ವಿಷಯಕ್ಕೆ ಬಂದರೆ ಸಿದ್ದು ಪಾತ್ರಧಾರಿ ನಾಗಭೂಷಣ ನಟನೆಯ ಮೂಲಕ ಮೆಚ್ಚುಗೆ ಗಳಿಸುತ್ತಾರೆ. ಕಾಮಿಡಿಯನ್ ಆಗಿ, ಮಗನಾಗಿ, ಪತಿಯಾಗಿ, ಅಣ್ಣನಾಗಿ, ಮಲ ಮಗನಾಗಿ, ಗೆಳೆಯನಾಗಿ ಹತ್ತು ಹಲವು ಪ್ರಕಾರಗಳಲ್ಲಿ ನಾಗಭೂಷಣ್ ಇಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಇನ್ನು ವಿದ್ಯಾ ಪಾತ್ರದಲ್ಲಿ ಮಲೈಕಾ ಅಲ್ಲಲ್ಲಿ ಬಂದು ಮಾಯವಾಗುತ್ತಾರೆ. ಅವರಿಗೆ ಚಿತ್ರದಲ್ಲಿ ತಕ್ಕಷ್ಟು ಸ್ಕ್ರೀನ್ಸ್ಪೇಸ್ ಸಿಕ್ಕಿಲ್ಲ ಎನ್ನಬಹುದು. ಸಿಕ್ಕ ಅವಕಾಶದಲ್ಲೇ ನಟಿ ತಮ್ಮ ಛಾಪು ಮೂಡಿಸಿದ್ದಾರೆ. ಇನ್ನು ಸಿನಿಮಾದ ಮತ್ತೊಂದು ಹೈಲೈಟ್ ಗರುಡ ರಾಮ್.

image-17

ಈವರೆಗೂ ಮಾಡಿರದಂತಹ ಡಿಫರೆಂಟ್ ಪಾತ್ರವನ್ನ ರಾಮ್ ಮಾಡಿದ್ದಾರೆ. ಜಗ್ಗು ಪಾತ್ರದಲ್ಲಿ ಖಡಕ್ ಆಗಿ ಮಿಂಚಿದ್ದಾರೆ.ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ಶ್ರೀವತ್ಸ ಶ್ಯಾಮ್ ಮೆಚ್ಚುಗೆ ಗಳಿಸಿಕೊಳ್ಳುತ್ತಾರೆ. ಅನಕೊಂಡ ಆಗಿ ಬರುವ ಧನಂಜಯ್ ಪಾತ್ರ ಸೀಮಿತ ಅವಧಿಯದ್ದಾಗಿಯೂ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

image-16

ಸಿದ್ದು ಹಾಗೂ ಜಗ್ಗುವಿನ ಮುಖಾಮುಖಿಯು ‘ಚೆನ್ನೈ ಎಕ್ಸ್ಪ್ರೆಸ್ನತಂಗಬಲಿ ಹಾಗೂ ರಾಹುಲ್ ಮುಖಾಮುಖಿಯನ್ನು ನೆನಪಿಸುವಂತಿದೆ. ಸಂಭಾಷಣೆ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರದ ಇನ್ನೊಂದು ಮೇಜರ್ ಹೈಲೈಟ್. ಸಿನಿಮಾ ಅವಧಿ ಎರಡು ಗಂಟೆಯಷ್ಟಿದ್ದು ಮೊದಲ ಅರ್ಧ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕೆಲವಷ್ಟು ಭಾಗ ಎಳೆದಂತೆ ಕಂಡರೂ ಒಟ್ಟಾರೆ ಚಿತ್ರ ಫ್ಯಾಮಿಲಿ ಎಂಟರ್ಟೇನರ್ ಆಗಿ ಇಷ್ಟ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ