- ರಾಘವೇಂದ್ರ ಅಡಿಗ ಎಚ್ಚೆನ್.
ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ಅರ್ಜುನ್ ಯೋಗಿ ಇದೀಗ ಪೂರ್ಣ ಪ್ರಮಾಣದ ಕಮರ್ಷಿಯಲ್ ಸಿನಿಮಾ “ವರ್ಣ” ಮೂಲಕ ಒಬ್ಬ ಮಾಸ್ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ.
ಪೂರ್ಣವಾಗಿ ಪಾವಗಡ ತಾಲ್ಲೂಕಿನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು ಗ್ರಾಮೀಣ ಹಿನ್ನಲೆಯಲ್ಲಿ ನಡೆಯುವ ಒಂದು ಪ್ರೇಮಕಥೆಗೆ ಎಲ್ಲ ಮಾಸ್ ಎಲಿಮೆಂಟ್ಸ್ ಸೇರಿಸಿ ಒಂದು ಪೂರ್ಣ ಪ್ರಮಾಣದ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ ಮಾಡಲು ಮುಂದಾಗಿದೆ “ವರ್ಣ” ಚಿತ್ರತಂಡ.
ಇಸಿರಿ ಇನ್ಫ್ರಾ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಿತವಾಗಿರುವ “ವರ್ಣ”ಸಿನಿಮಾದಲ್ಲಿ ಭವ್ಯಾ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶನ ವಹಿಸಿರುವವರು ದೇವು ಶರ್ಮಾ, ನಿರ್ಮಾಪಕರು ನವೀನ್ ಕುಮಾರ್ ಎಂ ಎಲ್. ಛಾಯಾಗ್ರಹಣವನ್ನು ಗೌರಿ ವೆಂಕಟೇಶ್, ಸಂಗೀತವನ್ನು ರಮೇಶ್ ಕೃಷ್ಣ, ಸಾಹಸ ದೃಶ್ಯಗಳನ್ನು ಸಾಗರ್ ನಿರ್ದೇಶಿಸಿದ್ದಾರೆ.
ಇತ್ತೀಚಿಗೆ ಡಾಲಿ ಧನಂಜಯ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.