ಪುರುಷರು ಹಾಗೂ ಮಹಿಳೆಯರಲ್ಲಿ ಸ್ಟೈಲ್ ಮತ್ತು ಫ್ಯಾಷನ್‌ನ ಟ್ರೆಂಡ್‌ ವಿಶ್ವ ಮಟ್ಟದಲ್ಲಿ ಹೆಚ್ಚುತ್ತಿರುವುದನ್ನು ಕಂಡು `ಪಿ ಅಂಡ್‌ ಜಿ ಫ್ಯೂಚರ್‌ ಫ್ಯಾಬ್ರಿಕ್‌ ಈವೆಂಟ್‌’ನ್ನು ಸ್ಪೇನ್‌ನ ಬಾರ್ಸಿಲೋನಾ ನಗರದಲ್ಲಿ ಆಯೋಜಿಸಲಾಗಿತ್ತು. ಈ ಈವೆಂಟ್‌ನ್ನು ಪಿ ಅಂಡ್‌ ಜಿಯ ಬ್ರ್ಯಾಂಡ್‌ ಏರಿಯಲ್ ಮ್ಯಾಟಿಕ್‌ ಮೂಲಕ ಆಯೋಜಿಸಲಾಗಿತ್ತು.

ಭೂಮಧ್ಯದ ಸಮುದ್ರದ ದಡದಲ್ಲಿರುವ ಈ ನಗರ ತನ್ನ ಸೌಂದರ್ಯಕ್ಕೆ ಪ್ರಸಿದ್ಧವಾಗಿದೆ. 16 ಕೋಟಿ ಜನಸಂಖ್ಯೆಯುಳ್ಳ ಈ ನಗರದಲ್ಲಿ ಸ್ಪ್ಯಾನಿಶ್‌ ಮತ್ತು ಇಂಗ್ಲಿಷ್‌ ಭಾಷೆ ಮಾತಾಡುತ್ತಾರೆ. ಈ ಈವೆಂಟ್‌ನಲ್ಲಿ ಅನೇಕ ದೇಶಗಳಿಂದ ಬಂದ ರಿಸರ್ಚ್‌ ಸೈಂಟಿಸ್ಟ್ ಗಳು, ಮನೋವಿಜ್ಞಾನಿಗಳು, ಡಿಸೈನರ್‌ಗಳು, ಮಾಡೆಲ್‌ಗಳು ಇತ್ಯಾದಿ ಪಾಲ್ಗೊಂಡರು. ಜೊತೆಗೆ ಮುಂದಡಿ ಇಡುತ್ತಿರುವ ಫ್ಯಾಷನ್‌ನ ಹೆಜ್ಜೆಗಳು ಮತ್ತು ಗ್ಲೋಬಲೈಸೇಷನ್‌ ವ್ಯಕ್ತಿಯ ಇಷ್ಟವನ್ನು ಬದಲಾಯಿಸಿವೆ ಎಂದು ಅರಿತರು. ಈಗ ಜನ ಫ್ಯಾಷನ್‌ ಮತ್ತು ಸ್ಟೈಲ್ ನೊಂದಿಗೆ ಆರಾಮವಾಗಿರುವ, ಬೇರೆಯೇ ಆದ ಸ್ಟೈಲ್‌, ಬಾಳಿಕೆ, ಬಣ್ಣ ಮತ್ತು ಫಿಟ್‌ನೆಸ್‌ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಆದ್ದರಿಂದ ಅವರು ಆ್ಯಥ್ಲೇಝರ್‌ ಉಡುಪುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅದೇ ನಮ್ಮ ಫ್ಯೂಚರ್‌ ಫ್ಯಾಬ್ರಿಕ್‌ ಅನ್ನಿಸುತ್ತದೆ.

ಫ್ಯಾಷನ್‌ ಕೂಡ ಕಂಫರ್ಟ್‌ ಕೂಡ

ಈ ಸಂದರ್ಭದಲ್ಲಿ `ಪಿ ಅಂಡ್‌ ಜಿ’ ಫ್ಯಾಬ್ರಿಕ್‌ಕೇರ್‌ ಗ್ಲೋಬಲ್ ಫ್ಯಾಷನ್‌ ಕನ್ಸಲ್ಟೆಂಟ್‌ ಜಾಯಿ್ಸ್‌ ಡೆಕನ್‌ ಹೇಳುವುದೇನೆಂದರೆ ಯಾರು ಆತ್ಮವಿಶ್ವಾಸದಿಂದ ಉಡುಪನ್ನು ಧರಿಸುತ್ತಾರೋ ಆ ಮಹಿಳೆಯರಿಂದ ನಾನು ಪ್ರೇರಿತನಾಗಿದ್ದೇನೆ. ಅದೇ ಅವರ ಸ್ಟೈಲ್‌ ಮತ್ತು ಫ್ಯಾಷನ್‌ ಆಗಿರುತ್ತದೆ. ಆದರೆ ಅಂತಹ ಉಡುಪುಗಳನ್ನು ಒಗೆಯುವುದು ಅವರಿಗೊಂದು ಸವಾಲಾಗಿರುತ್ತದೆ. ಏಕೆಂದರೆ ಅವನ್ನು ಅವರು ಯಾವಾಗಲೂ ಒರಿಜಿನಲ್ ಶೇಪ್‌ನಲ್ಲಿ ನೋಡಲು ಬಯಸುತ್ತಾರೆ.

ಇಂತಹ ಆರಾಮದಾಯಕ ಹಾಗೂ ಆ್ಯಥ್ಲೆಟಿಕ್‌ ಉಡುಪುಗಳು ವ್ಯಕ್ತಿಯ ಶಕ್ತಿ ಹೆಚ್ಚಿಸುವ ಜೊತೆ ಜೊತೆಗೆ ಉತ್ಸಾಹಿಯನ್ನಾಗಿ ಮಾಡುತ್ತವೆ. ಅದನ್ನು ಧರಿಸಿ ಇಂದಿನ ಮಹಿಳೆ ಆರಾಮದ ಅನುಭವ ಪಡೆಯುತ್ತಾಳೆ ಮತ್ತು ಯಾವಾಗಲೂ ಒಳ್ಳೆಯ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾಳೆ. ಅಂದಹಾಗೆ ಫ್ಯಾಷನ್‌ಲೋಕ ಹಾಗೂ ಅದರ ಟ್ರೆಂಡ್‌ ಸತತವಾಗಿ ಬದಲಾಗುತ್ತಿರುತ್ತದೆ. ಹೀಗಾಗಿ ಡಿಸೈನರ್‌ಗಳು ಯಾವಾಗಲೂ ಈ ವಿಷಯವನ್ನು ಗಮನದಲ್ಲಿಡುತ್ತಾರೆ. ಸ್ಪೋರ್ಟ್ಸ್ ಉಡುಪುಗಳನ್ನು ನೀವು ಬೇಕೆಂದಾಗ, ಬೇಕಾದ ಕಡೆ ಧರಿಸಿ ಹೋಗಬಹುದು. ಈ ಉಡುಪುಗಳು `ರೆಡಿ ಟು ವೇರ್‌’ನ ಶ್ರೇಣಿಯಲ್ಲಿ ಬರುತ್ತವೆ. ಇವುಗಳ ಕ್ರೇಝ್ ಗಮನಿಸಿ ಡಿಸೈನರ್‌ಗಳು ಈಗೀಗ ಇವಕ್ಕೆ ಹೊಸದಾದ ಹಾಗೂ ಆಕರ್ಷಕ ಹೊಳೆಯುವ ಬಣ್ಣಗಳನ್ನು ಕೊಡುತ್ತಿದ್ದಾರೆ.

ಒಂದು ಸಮೀಕ್ಷೆಯಿಂದ ತಿಳಿದುಬಂದಿದ್ದೇನೆಂದರೆ ಆ್ಯಥ್ಲೇಝರ್‌ ಉಡುಪು ಸುಮಾರು ಶೇ.71ರಷ್ಟು ಜನರ ಡೇಲಿವೇರ್‌ನಲ್ಲಿ ಸೇರಿದೆ. ಶೇ.27ರಷ್ಟು ಮಹಿಳೆಯರು ಇದರ ಲೆಗ್ಗಿಂಗ್‌ ಗಳು ಅವರ ಇಷ್ಟದ ಉಡುಪಾಗಿದೆ. ಶೇ.56ರಷ್ಟು ಜನ ಇದನ್ನು ರನ್ನಿಂಗ್‌ಗೆ, ಶೇ.47ರಷ್ಟು ಜನ ಟ್ರಾವೆಲ್‌ಗೆ, ಶೇ.41ರಷ್ಟು ಶಾಪಿಂಗ್‌ಗೆ ಮತ್ತು ಶೇ.16ರಷ್ಟು ಜನ ಊಟ ಮಾಡುವಾಗ ಧರಿಸುತ್ತಾರೆ.

ಬ್ರಿಟಿಷ್‌ ಫ್ಯಾಷನ್‌ ಬ್ಲಾಗರ್‌ ಮತ್ತು ಮಾಡೆಲ್‌ ಸೂಜೀ ಬಬ್‌ ಹೀಗೆ ಹೇಳುತ್ತಾರೆ, “ನಾನು ದಿನ ಬೇರೆ ಬೇರೆ ಉಡುಪುಗಳನ್ನು ಧರಿಸುತ್ತೇನೆ. ಅವನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ. ನಾನು ನನ್ನ ಬ್ಲಾಗ್‌ `ಸ್ಟೈಲ್ ಬಬ್‌’ ಆರಂಭಿಸಿದಾಗ ನನಗೆ ಎಲ್ಲಕ್ಕಿಂತ ಹೆಚ್ಚಾಗಿ ಬಟ್ಟೆಗಳ ಸುರಕ್ಷತೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಯಿತು. ಈಗ ನನಗೆ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ ಎನ್ನುವುದೇ ಸಂತೋಷ.”

ನೀವು ಎಂತಹ ಉಡುಪು ಧರಿಸುತ್ತೀರೋ ಹಾಗೆಯೇ ಯೋಚಿಸತೊಡಗುತ್ತೀರಿ. ಒಂದು ಪ್ರಯೋಗದಲ್ಲಿ ಒಬ್ಬ ಡಾಕ್ಟರ್‌ ಮತ್ತು ಒಬ್ಬ ಕಾರ್ಪೆಂಟರ್‌ನ ಏಪ್ರನ್‌ಗಳನ್ನು 2 ಬೇರೆ ಬೇರೆ ವ್ಯಕ್ತಿಗಳಿಗೆ ಧರಿಸುವಂತೆ ಹೇಳಲಾಯಿತು. ಡಾಕ್ಟರ್‌ರ ಏಪ್ರನ್‌ ಧರಿಸಿದ ವ್ಯಕ್ತಿ ಡಾಕ್ಟರ್‌ರಂತೆ ಪ್ರಯೋಗಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡ, ಆದರೆ ಕಾರ್ಪೆಂಟರ್‌ನ ಏಪ್ರನ್‌ ಧರಿಸಿದವ ಸೃಜನಾತ್ಮಕ ಆಲೋಚನೆ ಇಟ್ಟುಕೊಂಡಿದ್ದ. ವಿಶ್ವದ ಟ್ರೆಂಡ್‌ ಎಕ್ಸ್ ಪರ್ಟ್‌ ಸೆಬಿನ್‌ ಸೆಟ್‌ಲಿಯ ಹೀಗೆ ಹೇಳುತ್ತಾರೆ, “ಭವಿಷ್ಯದಲ್ಲಿ `ಸೆನ್ಸೋರಿಯಲ್ ಫ್ಯಾಷನ್‌’ನ ಪ್ರಾಬಲ್ಯ ಇರುತ್ತದೆ. ಅದರಲ್ಲಿ ಒಳ್ಳೆಯ ಫೈಬರ್‌ ಇರುವ ಬಟ್ಟೆಗಳ ಜೊತೆಗೆ ಚರ್ಮ, ಫರ್‌ ಇತ್ಯಾದಿ ಹೆಚ್ಚಾಗಿರುತ್ತದೆ.”

ಈ ಬದಲಾವಣೆ ಕಳೆದ 10 ವರ್ಷಗಳಿಗೆ ಹೋಲಿಸಿದರೆ ಹೆಚ್ಚು ಆಕರ್ಷಕವಾಗಿರುತ್ತದೆ. ಏಕೆಂದರೆ ಇಂದಿನ ಯುವ ಪೀಳಿಗೆ ಬರೀ ಸ್ಟೈಲ್ ಅಷ್ಟೇ ಅಲ್ಲ, ಆರಾಮದಾಯಕವಾಗಿರಲೂ ಪ್ರಾಧಾನ್ಯತೆ ನೀಡುತ್ತಾರೆ.

– ಜಿ. ಸುಮನಾ

ಹೀಗೆ ಸಂರಕ್ಷಿಸಿರಿ

ಆ್ಯಥ್ಲೇಝರ್‌ ಉಡುಪುಗಳ ಸಂರಕ್ಷಣೆಗೆ ವಿಷಯಗಳನ್ನು ಗಮನಿಸುವುದು ಬಹಳ ಅಗತ್ಯ.

– ಅವನ್ನು ಅವುಗಳ ಝಿಪ್‌, ಹುಕ್‌ ಅಥವಾ ಬಟನ್‌ ಹಾಕಿ ಮೆಷಿನ್‌ನಲ್ಲಿ ಹಾಕಿ.

– ಒಗೆದ ನಂತರ ಅವನ್ನು ಬಿಸಿಲಿನಲ್ಲಿ ಒಣಗಲು ಹಾಕದೆ ನೆರಳು, ಗಾಳಿಯಲ್ಲಿ ಒಣಗಿಸಿ.

– ಯಾವಾಗಲೂ ಒಳ್ಳೆಯ ಡಿಟರ್ಜೆಂಟ್‌ ನಿಂದಲೇ ಆ್ಯಥ್ಲೇಝರ್‌  ಬಟ್ಟೆಗಳನ್ನು ಒಗೆಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ