ಇಲ್ಲಿನ ತುಸು ದುಬಾರಿ ಬ್ಯಾಗ್ಸ್ ನ್ನು ಸೂಕ್ಷ್ಮವಾಗಿ ಗಮನಿಸಿ, ಈ ಆಧುನಿಕ ಸ್ಟೈಲಿಶ್ ಬ್ಯಾಗುಗಳ ಬೆಲೆ ಲಕ್ಷಗಳಿಂದ ಆರಂಭವಾಗಿ ಕೋಟಿ ದಾಟುತ್ತವೆ......!
ಭಾರತದ ಅತಿ ಶ್ರೀಮಂತ ವಾಣಿಜ್ಯೋದ್ಯಮಿ ಮುಕೇಶ್ ಅಂಬಾನಿಯವರ ಸೊಸೆ ರಾಧಿಕಾ ಮರ್ಚೆಂಟ್ ಲಗ್ಶುರಿ ಲೈಪ್ ಸ್ಟೈಲ್ ಹೊಂದಿದ್ದಾರೆ. ಈಕೆ ವೀರೇನ್ ಮರ್ಜೆಂಟ್ ರ ಮಗಳು. ಇವರು `ಎನ್ ರೋಲ್ ಹೆಲ್ತ್ ಕೇರ್' ಕಂಪನಿಯ ಸಿಇಓ. ಹೀಗೆ ಒಮ್ಮೆ ಮದುವೆಗೆ ಮುಂಚೆ ಗೆಳತಿಯ ಬರ್ತ್ ಡೇ ಪಾರ್ಟಿಗೆ ಬಂದಿದ್ದ ರಾಧಿಕಾ, ಬಿಳಿ ಬಣ್ಣದ ಪ್ಲೇವರ್ ಪ್ರಿಂಟೆಡ್ ಶಾರ್ಟ್ ಡ್ರೆಸ್ ಧರಿಸಿದ್ದಳು, ಕೈಗೊಂದು ನೀಲಿ ಬಣ್ಣದ ಹ್ಯಾಂಡ್ ಬ್ಯಾಗ್ ಇತ್ತು.
ಸೈಜ್‌ನಲ್ಲಿ ತುಸು ಚಿಕ್ಕದಾದ ಈ ಬ್ಯಾಗ್ `ಹರ್ಮಿನ್ಸ್ ಬಿರ್ಕಿನ್' ಬ್ರಾಂಡ್ ನದಾಗಿದ್ದು, ಅದರ ಬೆಲೆ ಕೇವಲ ರೂ.16 ಲಕ್ಷ ಆಗಿತ್ತು! ಅದರ ಮೇಲೆ ಯಾವ ಡಿಸೈನೂ ಇರಲಿಲ್ಲ. ಮುಂಭಾಗದಲ್ಲಿ ಒಂದು ಸಣ್ಣ ಬಕ್ ಮಾತ್ರ ಇತ್ತು.
ಇದರರ್ಥ, 16 ಲಕ್ಷ ಬೆಲೆ ಬಾಳುವ ಈ `ಭಾರಿ' ಬ್ಯಾಗಿನಲ್ಲಿ ಹೆಚ್ಚಿನ ಪದಾರ್ಥ ಇಡಲಾಗದು ಎಂಬುದೇ ಸತ್ಯ. ಅದೇನೇ ಇರಲಿ, ನಿಮ್ಮದು ಎಂಥ ಉನ್ನತ ಲೈಫ್ ಸ್ಟೈಲ್ ಎಂಬುದು ಈ ಬ್ಯಾಗುಗಳಿಂದ ತಿಳಿಯುತ್ತದೆ.
ಬೋರಿನಿ ವಿಲನೇಸಿ, ಮೇಲಾ ಬೋರಿನಿ ಮಿಲನೇಸಿಯ ಮೇಲಾಗೆ 2020ರಲ್ಲಿ ವಿಶ್ವದ ಅತಿ ದುಬಾರಿ ಬ್ಯಾಗ್ ಎಂಬ ಶ್ರೇಷ್ಠ ಪಟ್ಟ ಸಿಕ್ಕಿತು. ಈ ಬ್ಯಾಗ್ ನ್ನು ಓಶನ್ ಥೀಂ ಆಧರಿಸಿ ರೂಪಿಸಲಾಗಿದೆ. ಈ ಬ್ಯಾಗ್ ನೀರಿನ ಹಲವು ರೂಪಗಳನ್ನು ಪ್ರದರ್ಶಿಸುತ್ತದೆ, ರತ್ನಗಳಿಂದ ಸುಸಜ್ಜಿತ ಗೊಳಿಸಲಾಗಿದೆ. ಈ ಬ್ಯಾಗಿನ ಬ್ಯೂಟಿ ಇರುವುದೇ ಇದರ ತಯಾರಿಕೆಯಲ್ಲಿ. ಅದಕ್ಕಾಗಿ ಮೊಸಳೆಯ ಚರ್ಮದಲ್ಲಿ ವಜ್ರ, ವೈಢೂರ್ಯ ಹುದುಗಿಸಲಾಗುತ್ತದೆ. ಇದರ ಬೆಲೆ ಕೇವಲ 45 ಕೋಟಿ ರೂ.ಗಳಷ್ಟೆ! ಸರ್ಟಿಫಿಕೇಶನ್ ಜೊತೆ ಈ ಬ್ಯಾಗ್ ನ್ನು ನೀಡುತ್ತಾರೆ, ಏಕೆಂದರೆ ವಿಶ್ವಾದ್ಯಂತ ಇದರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ!
ಮೌಲಾದ್ 1001 ನೈಟ್ ಡೈಮಂಡ್ ಬ್ಯಾಗ್
ಹೃದಯದ ಆಕಾರದಲ್ಲಿರುವ ಈ ಹ್ಯಾಂಡ್ ಬ್ಯಾಗ್, (ಇದನ್ನು ಪರ್ಸ್ ಎಂದರೆ ಲೇಸು) ನೋಡಲು ಬಲು ಅನನ್ಯ, ಅನುಪಮ, ಅತ್ಯಾಕರ್ಷಕ! 2011ರಲ್ಲಿ ಇದು ಬಹಳ ಚರ್ಚೆಯಲ್ಲಿತ್ತು. ಈ ಪರ್ಸ್ ನ್ನು ತಯಾರಿಸಲು 18 ಕ್ಯಾರೆಟ್ ಗೋಲ್ಡ್, 43-56 ಕಲರ್ ಲೆಸ್ ಡೈಮಂಡ್, 56 ಗುಲಾಬಿ ವಜ್ರ ಮಿಳಿತಗೊಂಡಿವೆ. ಇದು ವಿಶ್ವದ ಅತಿ ದುಬಾರಿ ಪರ್ಸುಗಳಲ್ಲಿ ಒಂದು. ಇದರ ಬೆಲೆ ಕೇವಲ 32 ಕೋಟಿ ರೂ. ಅಷ್ಟೆ!

ಹರ್ಮಿಸ್ ಬಿರ್ಕಿನ್ ಬ್ಯಾಗ್
ಬಿರ್ಕಿನ್ ಕಂಪನಿಯ ಕಲೆಕ್ಷನ್ ನಲ್ಲಿ ಇದು ಎರಡನೇ ಬ್ಯಾಗು, ಇದೂ ಸಹ ವಿಶ್ವದ ದುಬಾರಿ ಬ್ಯಾಗುಗಳಲ್ಲೊಂದು. ಇದನ್ನು ತಯಾರಿಸಲು 2000 ಡೈಮಂಡ್, ಪ್ಲಾಟಿನಮ್ ಗಳ ಬಳಕೆಯಾಗಿದೆ. ಈ ಬ್ಯಾಗ್ ನಲ್ಲಿ ವಜ್ರಖಚಿತ ಸ್ಟ್ರಾಪ್ ಇದ್ದು, ಅದನ್ನು ಕಳಚಿದ ನಂತರ, ಅದು ಕ್ಲಚ್ ನ ಕೆಲಸವನ್ನೂ ಮಾಡುತ್ತದೆ.





