ತಮ್ಮ ಯಶಸ್ವೀ ಚಿತ್ರ `ತ್ರೀ ಈಡಿಯಟ್ಸ್'ನ ಪ್ರಮೋಶನ್ಸ್ ಗಾಗಿ ಅಮೀರ್‌ ಖಾನ್‌ ಕರೀನಾ ವಿಶೇಷವಾಗಿ ಚಂದೇರಿಗೆ ಹೋಗುವುದು ದೊಡ್ಡ ವಿಷಯವಾಗಿತ್ತು. ಇದರಿಂದ ಕರೀನಾ ಅಲ್ಲಿನ ಸೀರೆಗಳನ್ನು ಎಷ್ಟು ಇಷ್ಟಪಡುತ್ತಾಳೆ ಎಂಬುದೂ ತಿಳಿದುಬಂತು. ಆಕೆ ಚಂದೇರಿಗೆ ಬಂದು ಕೆಲವು ವಿಶಿಷ್ಟ ಸೀರೆಗಳನ್ನು ಆರಿಸಿಕೊಂಡಿದ್ದೂ ಆಯ್ತು, ಅವು ಅಷ್ಟು ಖ್ಯಾತಿಗೊಂಡಿವೆ! ಮದುವೆಯಂಥ ಶುಭ ಸಮಾರಂಭಕ್ಕೆ ಚಂದೇರಿ ಸೀರೆಗಳನ್ನು ವಿಶೇಷವಾಗಿ ಆರಿಸುವುದು ಸಂಪ್ರದಾಯ. ಹಿಂದೆಲ್ಲ ರಾಜಮನೆತನದ ಮಹಿಳೆಯರಷ್ಟೇ ಚಂದೇರಿ ಸೀರೆಗಳನ್ನು ಉಡುತ್ತಿದ್ದರು. ಅದರಲ್ಲೂ ಈ ಚಿತ್ರದ ಮದುವೆಯ ದೃಶ್ಯಗಳಿಗಾಗಿ ಕರೀನಾ ಆರಿಸಿದ ಚಂದೇರಿ ಸೀರೆಗಳು ಈಗ ಅವಳ ಹೆಸರಿನಿಂದಲೇ ಖ್ಯಾತಿಗೊಂಡಿವೆ!

ಮಧ್ಯಪ್ರದೇಶದ ಚಿಕ್ಕ ಜಿಲ್ಲೆ ಅಶೋಕನಗರದ ಮುಖ್ಯ ತಾಲ್ಲೂಕು ಚಂದೇರಿ, ತನ್ನ ಐತಿಹಾಸಿಕ ಮಹತ್ವ ಮತ್ತು ವೈಭವಕ್ಕೆ ಪ್ರಸಿದ್ಧವಾಗಿದೆ. ಆದರೆ ಇಲ್ಲಿನ ಸೀರೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ, ನಮ್ಮ ರಾಷ್ಟ್ರೀಯ ಮಟ್ಟದಲ್ಲಂತೂ ಅತ್ಯುತ್ತಮ ಹೆಸರು ಗಳಿಸಿದೆ. ಚಂದೇರಿಯಲ್ಲಿ ಸೀರೆಗಳ ತಯಾರಿ 700 ವರ್ಷಗಳಷ್ಟು ಹಳೆಯದು. ಈ ಸೀರೆಗಳಿಗೆ ಆ ಕಾಲದಿಂದಲೂ ತಮ್ಮದೇ ಆದ ಐಡೆಂಟಿಟಿ ಇತ್ತು, ಆದರೆ ವ್ಯಾಪಾರದ ಇತಿಮಿತಿಯೂ ಇತ್ತು. ಸಿಂಧಿಯಾ ರಾಜಮನೆತನಕ್ಕೆ ಸೇರಿದ ಈ ಊರಿನ ಈ ಕಲೆಯ ಕುರಿತಾಗಿ ಆಡಳಿತಗಾರರು ವಿಶೇಷ ಗಮನಹರಿಸಿದರು. ನೇಕಾರರು, ಕುಶಲಕರ್ಮಿಗಳ ಪೂರೈಕೆಯೊಂದಿಗೆ, ಇದನ್ನು ದೊಡ್ಡ ಉದ್ಯಮವಾಗಿ ಬೆಳೆಸಲಾಯಿತು, ಸೀರೆಗಳ ವ್ಯಾಪಾರ ಜೋರಾಯಿತು.

ಚಂದೇರಿಯಲ್ಲಿ 4 ಸಾವಿರಕ್ಕೂ ಹೆಚ್ಚು ನೇಕಾರ ಕುಟುಂಬಗಳಿವೆ. ಇವರ ಮುಂಜಾನೆ ನೇಯ್ಗೆಯಿಂದ ಆರಂಭವಾದರೆ, ಮುದ್ರಣ ಬಣ್ಣ ಕಟ್ಟುವಿಕೆ ಸಂಜೆಯವರೆಗೂ ನಡೆಯುತ್ತದೆ. ಪರಿಶ್ರಮ, ಕಲ್ಪನೆ ಹಾಗೂ ಕಲೆ ಬಗ್ಗೆ ಚಂದೇರಿಯ ಭವ್ಯ ಸೀರೆಗಳನ್ನು ನೋಡುತ್ತಲೇ ತಿಳಿಯಬಹುದಾಗಿದೆ. ಇದು ಸಾಮಾನ್ಯರ ಊಹೆಗೂ ನಿಲುಕದ್ದು. ಇದಕ್ಕಾಗಿ ನೇಕಾರರ ಕಲೆ, ಕಲ್ಪನಾಶೀಲತೆ, ಅದಕ್ಕೂ ಮಿಗಿಲಾದ ಕಠಿಣ ಪರಿಶ್ರಮ ಎಷ್ಟೆಂಬುದು ಆ ಸೀರೆ ಕಂಡಾಗಲೇ ತಿಳಿಯುವುದು, ಹೀಗಾಗಿಯೇ ಇವು ತುಸು ದುಬಾರಿ.

ಚಂದೇರಿ ಸೀರೆಗಳಿಗಾಗಿ ಸಾಕಷ್ಟು ಕಚ್ಚಾ ಸಾಮಗ್ರಿಗಳು ಅಂದರೆ ರೇಷ್ಮೆ, ಹತ್ತಿ, ಜರಿಯ ಬಳಕೆಯಾಗುತ್ತದೆ. ಇದಕ್ಕಾಗಿ ಕೊರಿಯಾ ಚೀನಾದಿಂದ ರೇಷ್ಮೆ ತರಿಸಲಾಗುತ್ತದೆ ಹಾಗೂ ಮರ್ಸ್‌ ರೈಸ್ಡ್ ಕಾಟನ್‌ ಕೊಯಂಬತ್ತೂರಿನಿಂದ ಬರುತ್ತದೆ. ಒಡಲಿನ ಬುಟ್ಟಾಗಳಿಗಾಗಿ ಬಳಸಲಾಗುವ ಉತ್ಕೃಷ್ಟ ಗುಣಮಟ್ಟದ ಎಳೆಗಳಿಗಾಗಿ ಸೂರತ್‌ನಿಂದ ಹಾಗೂ ಆಕರ್ಷಕ ಬಾರ್ಡರ್‌ಗಾಗಿ ಪುಣೆಯಿಂದ ಸ್ಪೆಷಲ್ ಸಿಲ್ಕ್ ತರಿಸಲಾಗುತ್ತದೆ.

ಈಗೆಲ್ಲ ಬಣ್ಣದ ಬೆಡಗಿನ ಸೀರೆಗಳಿಗೆ ಬೇಡಿಕೆ ಹೆಚ್ಚು. ಇವುಗಳಿಗೆ ಬಣ್ಣಕಟ್ಟಲು 3 ಹಂತಗಳಿವೆ. ಇದಕ್ಕಾಗಿ ಬಿಡಿ ಎಳೆಗಳನ್ನು ಬಿಸಿ ನೀರಿನಲ್ಲಿ ಕುದಿಸಲಾಗುತ್ತದೆ. ನಂತರ ಬಣ್ಣಗಳನ್ನು ಕುದಿಸಿ, ಅದರಲ್ಲಿ ಬಿಸಿನೀರಿನಲ್ಲಿ ಕುದ್ದ ಎಳೆಗಳನ್ನು ಹಾಕಿ, ಕೊನೆಯಲ್ಲಿ ಬಣ್ಣ ಗಟ್ಟಿಯಾಗಿ ಹಿಡಿಯಿತೇ ಎಂದು ಖಾತ್ರಿಪಡಿಸಲು ಆ್ಯಸಿಡ್‌ ಬೆರೆಸುತ್ತಾರೆ.

ಚಂದೇರಿ ಸೀರೆ ತಯಾರಿಕೆಗಾಗಿ ಪರಂಪರಾಗತ ಉಪಕರಣಗಳ ಬಳಕೆಯಾಗುತ್ತದೆ. ಈ ಉಪಕರಣಗಳ ನೆರವಿನಿಂದಲೇ ಚಂದೇರಿ ಸೀರೆಗಳನ್ನು ನೋಡಿದಾಗ ಅಚ್ಚಳಿಯದ ಲುಕ್ಸ್ ಮನದಲ್ಲುಳಿಯುತ್ತವೆ. ಜೆಕಾರ್ಡ್‌, ಸ್ಪಿನ್ನಿಂಗ್‌, ರೀಲಿಂಗ್‌ ಡೈಯಿಂಗ್ ಸಾಮಗ್ರಿಗಳು ಎಷ್ಟು ಸ್ವಾರಸ್ಯಕರ ಎಂದರೆ ಈಗಲೂ ಚಂದೇರಿ ಸೀರೆಗಳಿಗಾಗಿ ಪ್ರಾಚೀನ ಕಾಲದ ಮಗ್ಗಗಳನ್ನೇ ಬಳಸುತ್ತಾರೆ. ಆದರೆ ಇತ್ತೀಚೆಗೆ ಅನುಕೂಲ ಹಾಗೂ ಬದಲಾವಣೆಗಾಗಿ, ಆಕರ್ಷಕ ಪ್ರಿಂಟ್ಸ್ ಗಾಗಿ ಮರದ ಕಬ್ಬಿಣದ ಫ್ರೇಮ್ ಲೂಮ್ಸ್ ಸಹ ಬಳಕೆಯಲ್ಲಿವೆ. ಡಿಸೈನ್ಸ್ ಪರ್ಫೆಕ್ಟ್ ಆಗಿರಲು ಜೆಕಾರ್ಡ್‌ ಹಾಗೂ ಡಾಮಿ ಯಂತ್ರಗಳನ್ನು ಬಳಸುತ್ತಾರೆ. ಇದಕ್ಕಾಗಿ ಬೆಂಗಳೂರು ಹಾಗೂ ಬನರಾಸ್ಸಿನ ಜೆಕಾರ್ಡ್‌ನ್ನೇ ಹೆಚ್ಚು ಬಳಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ