ಮಳೆಯಿಂದ ನಿಮ್ಮನ್ನು ರಕ್ಷಿಸುವ ಛತ್ರಿಗಳು ಯಾವ ರೀತಿ ನಿಮಗೆ ಫ್ಯಾಷನೆಬಲ್ ಲುಕ್ಸ್ ನೀಡಿ ನಿಮಗೆ ಅನುಕೂಲಕರವಾಗಲಿದೆ ಎಂದು ಸಂಪೂರ್ಣವಾಗಿ ತಿಳಿಯೋಣವೇ?

ಮಳೆ ಹನಿಗಳು ಬೀಳತೊಡಗಿದಂತೆ ಮನೆಯ ಮೂಲೆ ಮೂಲೆಗಳಲ್ಲಿ ಅಡಗಿರುವ ಛತ್ರಿಗಳು ಹೊರಗೆ ಇಣುಕುತ್ತವೆ. ಸಾದಾ ಕಪ್ಪು ಕೊಡೆ ಹಳೆಯ ಕಾಲಕ್ಕಾಯಿತು, ಈಗೆಲ್ಲ ಬಣ್ಣ ಬಣ್ಣದ ಚಿಟ್ಟೆಗಳಂತೆ ಛತ್ರಿಗಳು ಎಲ್ಲೆಲ್ಲೂ ರಾರಾಜಿಸುತ್ತವೆ.

ಮಳೆಗಾಲ ಆಧುನಿಕ ಯವಜನರಿಗೆ ಎಷ್ಟು ಇಷ್ಟವೋ, ಹುಡುಗಿಯರಿಗೆ ಈ ಕಾಲದಲ್ಲಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟಕರ ಎನಿಸುತ್ತದೆ. ತಾವು ಮಾಡಿಕೊಂಡ ಹೇರ್‌ಸ್ಟೈಲ್ ಎಲ್ಲಿ ಕೆಡುತ್ತದೋ, ಮೇಕಪ್‌ ಎಲ್ಲಿ ಹಾಳಾಗುವುದೋ ಎಂಬ ಚಿಂತೆ ಕಾಡುತ್ತಿರುತ್ತದೆ. ಈ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತರಾಗಲು ಇರುವ ಏಕೈಕ ಉಪಾಯ ಎಂದರೆ ಛತ್ರಿ.

ಆದರೆ ಇಂದಿನ ಆಧುನಿಕ ತರುಣಿಯರು ಛತ್ರಿ ಎಂದರೆ ಕೇವಲ ತಮ್ಮನ್ನು ಮಳೆಯಿಂದ ರಕ್ಷಿಸುವಂಥ ಸಾಧನವಷ್ಟೇ ಎಂದು ಭಾವಿಸುವುದಿಲ್ಲ. ಇಂದಿನ ಫ್ಯಾಷನ್‌ಪ್ರಿಯ ಯುವ ಜನತೆ ವಿಭಿನ್ನ ಬಗೆಯ ಡಿಸೈನಿನ ಛತ್ರಿಗಳನ್ನು ಕೊಳ್ಳಬಯಸುತ್ತಾರೆ.

ಛತ್ರಿಗಳಲ್ಲಿ ಇದೆಂಥ ಫ್ಯಾಷನ್‌ ಅಂದುಕೊಂಡಿರಾ? ಕೊಡೆ ತೆರೆದು ಮಳೆ ಬಿಸಿಲಿಗೆ ಹಿಡಿದು ಹೊರಟರೆ ಆಯ್ತಪ್ಪ ಎನ್ನುವಿರಿ. ಆದರೆ ಇಂದಿನ ಹುಡುಗಿಯರು ಅಗತ್ಯಕ್ಕಿಂತಲೂ ಹೆಚ್ಚು ಫ್ಯಾಷನೆಬಲ್, ಹೀಗಾಗಿ ಇಂದಿನ ಮಾರ್ಕೆಟ್‌ನಲ್ಲಿ ಎಲ್ಲೆಲ್ಲೂ ಫ್ಯಾಷನೆಬಲ್ ಫತ್ರಿಗಳೇ ತುಂಬಿವೆ.

ಸಿಂಪಲ್ ಪ್ಲೇನ್‌ ಕಲರ್ಡ್‌ ಛತ್ರಿ : ನಿಮ್ಮ ಡ್ರೆಸ್‌ಗೆ ಮ್ಯಾಚಿಂಗ್‌ ಅಥವಾ ಕಾಂಟ್ರಾಸ್ಟ್ ಆಗಿರುವ ಛತ್ರಿ ಬಳಸುವುದರಿಂದ, ನಿಮ್ಮ ಲುಕ್ಸ್ ಇನ್ನಷ್ಟು ಹೆಚ್ಚಿನ ಬೆಡಗು ಪಡೆಯುತ್ತದೆ.

ಯು ಹ್ಯಾಂಡ್‌ವುಳ್ಳ ಲಾಂಗ್‌ ಹ್ಯಾಂಡಲ್ ಛತ್ರಿ : ಈ ಛತ್ರಿ ಮಳೆಯಲ್ಲಿ ಸುಂದರವಾಗಿ ಕಾಣುವುದು ಮಾತ್ರವಲ್ಲದೆ, ಮಳೆ ಇಲ್ಲದಿದ್ದಾಗ ನೀವು ಇದನ್ನು ಹಿಡಿದು ಹೊರಗೆ ನಿಂತಿದ್ದರೆ ಅಥವಾ ಎಲ್ಲಿಗಾದರೂ ಹೊರಟರೆ, ಹೆಗಲಿಗೆ ಇಳಿಬಿಟ್ಟ ಹ್ಯಾಂಡ್‌ಬ್ಯಾಗ್‌, ಒಂದು ಕೈಲಿ ಲಗೇಜ್‌ ಮತ್ತೊಂದರಲ್ಲಿ ಈ ಛತ್ರಿ ಇದ್ದರೆ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಕಳೆ ಬರುತ್ತದೆ.

ಲೇಸ್‌ವುಳ್ಳ ಛತ್ರಿ : ನೆರಿಗೆಗಳುಳ್ಳ ವಿಶಿಷ್ಟ ಡಿಸೈನಿನ ಫ್ರಾಕ್‌ ಅಥವಾ ಸ್ಕರ್ಟ್‌ ಜೊತೆ ಬಣ್ಣಬಣ್ಣದ ಅಥವಾ ಪ್ರಿಂಟೆಡ್‌ ಹಾಗೂ ಅಂಚಿನಲ್ಲಿ ಲೇಸ್‌ವುಳ್ಳ ಛತ್ರಿ ಹಿಡಿದು ಹೊರಟರೆ, ವಿಭಿನ್ನ ಕಾಂಬಿನೇಷನ್‌ ನಿಮ್ಮ ಗ್ಲಾಮರ್‌ ಹೆಚ್ಚಿಸಬಲ್ಲದು.

ಸ್ಟ್ರೈಪ್ಡ್ ಅಂಬ್ರೆಲಾ : ಗುಂಡಗಿನ, ಎಲ್ಲಾ ಮೂಲೆಗಳಿಂದಲೂ ಯೂ ಕಟ್‌ವುಳ್ಳ ಹಾಗೂ ಸುಂದರ ಲೇಸ್‌ನಿಂದ ಸುಸಜ್ಜಿತ ಸ್ಪ್ರೈಪ್ಡ್ ಅಂಬ್ರೆಲಾ ಕಾಲೇಜು ಕಿಶೋರಿಯರಿಗೆ ಹೆಚ್ಚು ಒಪ್ಪುತ್ತದೆ.

ಡಬಲ್ ಟ್ರಿಪಲ್ ಫ್ರಿಲ್ ಛತ್ರಿ :  ಹಲವು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುವ ಪ್ರಿಂಟೆಡ್‌ ಅಥವಾ ಪ್ಲೇನ್‌, ಡಬಲ್ ಯಾ ಟ್ರಿಪಲ್ ಫ್ರಿಲ್‌ನ ಛತ್ರಿಗಳು ವೆಸ್ಟರ್ನ್‌ ಡ್ರೆಸ್‌ಗೆ ಚೆನ್ನಾಗಿ ಹೊಂದುತ್ತವೆ.

ಕ್ಲೌಡ್ಸ್ ರೇನ್‌ ಡ್ರಾಪ್‌ ಅಂಬ್ರೆಲಾ : ಆಕಾಶ ಮೋಡಗಳಿಂದ ಕವಿದಿದ್ದು, ನಿಧಾನವಾಗಿ ಮಳೆ ಹನಿಯಲಾರಂಭಿಸಿದರೆ ಸಂಗಾತಿ ಎಂಬಂತೆ  ಕ್ಲೌಡ್ಸ್ ಛತ್ರಿ ಹಾಗೂ ತುಂತುರು ಮಳೆಗೆ ಸಂಗಾತಿಯಾಗಿ ರೇನ್‌ ಡ್ರಾಪ್‌ ಛತ್ರಿ ನಿಮ್ಮ ಜೊತೆಗಿದ್ದರೆ, ಎಲ್ಲರೂ ನಿಮ್ಮನ್ಮು ನೋಡಿ `ಯಾರೇ ನೀನು ಚೆಲುವೆ...,' ಎಂದು ತಮ್ಮಷ್ಟಕ್ಕೆ ಗುನುಗದೇ ಇರಲಾರರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ