ಕಾಲ ಬದಲಾದಂತೆ  ನವೀನ ಮಾದರಿಯಲ್ಲಿ  ಬದಲಾವಣೆಯ ರೂಪು ರೇಷುಗಳನ್ನು  ನೋಡಬಹುದು. ಹಳೆಯ ಟ್ರೆಂಡ್ ಕೂಡ ಹೊಸ ಟ್ರೆಂಡ್ ಆಗಿ ನಿಲ್ಲಬಹುದು.  ಹೊಸ ಟ್ರೆಂಡ್ ಕೂಡ ಹಳೆಯದಾಗಿ ಮತ್ತೊಂದು ಹೊಸ ಟ್ರೆಂಡ್ ಮಿಂಚಿ ಮರೆಯಾಗುತ್ತದೆ ಅದಕ್ಕೆ ಸಜ್ಜುಗೊಳ್ಳಲು ಸಿದ್ದರಾಗುತ್ತೇವೆ. ಧರಿಸುವ ಬಟ್ಟೆ  ತಾಜಾ ಸ್ಪರ್ಶತೆ ಯನ್ನು ನೀಡುತ್ತದೆ. ಅದಕ್ಕೆ ಬಟ್ಟೆಯ ಆಯ್ಕೆಯ ಗುಣ ಮಟ್ಟ ಉತ್ತಮವಾಗಿರಲಿ

ಎಲ್ಲ ಹಂಗಳೆಯರ ಆಸೆ ಇದ್ದೆ ಇರುತ್ತೆ ಫ್ಯಾಷನಬಲ್ ಮತ್ತು ಸ್ಟೈಲಿಶ್  ಲುಕ್ ನಲ್ಲಿ ರಾರಾಜಿಸಬೇಕು, ಸುಂದರವಾಗಿ ಕಾಣಬೇಕು, ಎಲ್ಲರನ್ನು ಸೆಳೆಯಬೇಕು ಮತ್ತು ಆಕರ್ಷಕವಾಗಿ ಕಾಣಬೇಕು  ಹೇಗೆ ಅಂದ್ರೆ ? ಲುಕಿಂಗ್ ಲೈಕ್ ಎ ವಾವ್!  ಅನ್ನೋ ಹಾಗೆ. ಹೆಣ್ಣುಮಕ್ಕಳ ಸೌಂದರ್ಯಕ್ಕೆ  ಶೋಭೆ ತರುವುದೆ ಅವಳು ತೊಡುವ ಉಡುಗೆಗಳಿಂದಲೇ, ಕೂದಲಿನ ಶೈಲಿ ಜೊತೆಗೆ ಡ್ರೆಸ್ ಗೆ ತಕ್ಕಂತೆ ಒಪ್ಪುವ ಆಭರಣಗಳು ಕೂಡ ಅವಳ ಅಂದ- ಚಂದ ವನ್ನು ಹೆಚ್ಚಿಸುತ್ತದೆ. ಉಡುಪಿನ ಶೈಲಿಗೆ ಒಪ್ಪುವ ಪಾದರಕ್ಷೆಗಳ ಆಯ್ಕೆಯು ಕೂಡ ಅದ್ಭುತವಾಗಿರಲಿ.

girl 1

ನೆನಪಿರಲಿ ಅತಿಯಾದ ಅಲಂಕಾರ ಕೂಡ ಅಂದವನ್ನು ಕೆಡಿಸುತ್ತದೆ.

ಹೆಣ್ಣು ಮಕ್ಕಳಿಗೆ ಅವರು ತೊಡುವ ಉಡುಗೆಗಳಿಂದ   ಖುಷಿಯಾಗಿ ಮತ್ತು ತಾಜಾವೇನಿಸುವಂತಹ ವಾತಾವರಣ ಜೀವಿಸುವಂತೆ  ಮಾಡುತ್ತದೆ  ಮತ್ತು ಅವರ ತನ ಹಾಗೂ ಆತ್ಮ ವಿಶ್ವಾಸವನ್ನು ಹಿಮ್ಮಡಿಗೊಳಿಸುತ್ತದೆ.

ಹಂಗಳೆಯರ ವಾಲ್ ಡ್ರೋಬ್ ನಲ್ಲಿ ಅದೆಷ್ಟು ಬಟ್ಟೆಗಳಿದ್ದರೂ , ಫ್ಲೋರಲ್ ಪ್ರಿಂಟ್ ವಿನ್ಯಾಸದ ಡ್ರೆಸ್ ಗಳು ಇಲ್ಲದೆ ಹೋದರೆ ಅದಕ್ಕೆ ಮೆರುಗು ಇಲ್ಲದಂತೆ,  ಅಷ್ಟೊಂದು ಬಟ್ಟೆ ಗಳಿದ್ದರೂ  ಹಳೆಯ ಫ್ಯಾಷನ್  ಆಗಿದೆ, ಹೊಸ ಟ್ರೆಂಡ್ ಗೆ ತಕ್ಕಂತೆ ಉಡುಪು ತೆಗೆದುಕೊಳ್ಳಬೇಕು ಅನ್ನಿಸುವುದು ಸಹಜವೇ.

girl

ಇಂದಿನ ದಿನಗಳಲ್ಲಿ ಅಂದಿನ ದಿನಗಳಿಂದ ಹೆಚ್ಚು ಟ್ರೆಂಡ್ ನಲ್ಲಿ ರುವ ಫ್ಲೋರಲ್ ಪ್ರಿಂಟ್ ಫ್ಯಾಬ್ರಿಕ್ ಡ್ರೆಸ್ ಗಳು ಬಹು ಆಕಾರ ಕಾಲಾತೀತ ಹಚ್ಚಗಿರುವ ಸಣ್ಣ ಸಣ್ಣ ಹೂ ಗಳ ಚಿತ್ತಾರಗಳಿಂದ  ಚಿತ್ತಾಕರ್ಷಕವಾಗಿ  ಕಂಗೊಳಿಸುವ ಡ್ರೆಸ್ ಗಳು ಹೆಣ್ಣುಮಕ್ಕಳ ಕಣ್ಣಿಗೆ ಮತ್ತು ಮನಸಿಗೆ ಅಚ್ಚು ಮೆಚ್ಚು ಅಂದರೆ ತಪಿಲ್ಲ. ಎಲ್ಲ ಕಾಲಕ್ಕೂ  ಸೂಕ್ತವೇನಿಸುವ  ಫ್ಲೋರಲ್ ಪ್ರಿಂಟ್  ಉಡುಗೆಗಳು. ಮಲ್ ಮಲ್, ಕಾಟನ್ ಹಾಗೂ ಲೆನಿನ್ ಫ್ಯಾಬ್ರಿಕ್ ಡ್ರೆಸ್ ಗಳು ಕೂಡ ಸ್ಟೈಲಿಶ್ ಲುಕ್ ಕೊಡುತ್ತದೆ.  ಸಣ್ಣ ಸಣ್ಣ ಹೂಗಳಿರುವ  ಟಾಪ್,  ಗೌನ್ ಲೆಹಂಗಾವನ್ನು ಹೆಚ್ಚಾಗಿ  ನೋಡಬಹುದು.  ನಾವು ಧರಿಸುವ ಉಡುಪುಗಳಿಂದ  ಸುಂದವಾಗಿ ಕಾಣುವಂತೆ ಆಯ್ಕೆ ಮಾಡಿಕೊಳ್ಳುವುದು  ಕೂಡ ಒಂದು ದೊಡ್ಡ ಟಾಸ್ಕ್ ಅನ್ನಬಹುದು.  ಪ್ರಥಮ ಸಾಲಿನ ಆಯ್ಕೆಯಲ್ಲಿ  ನವನವೀನತೆ ಯನ್ನು ಕೊಡುವ ಫ್ಲೋರಲ್ ಪ್ರಿಂಟ್ ಫ್ಯಾಬ್ರಿಕ್ ಡ್ರೆಸ್ ಗಳು ಇದೆ ಅಂದರೆ ಒಪ್ಪುವ ಮಾತು.

girl 2

ಪ್ಲೈನ್ ಸೀರೆಗಳ ಮೇಲೆ ಫ್ಲೋರಲ್ ಪ್ರಿಂಟ್ ಇರುವ ವಿನ್ಯಾಸವು ಕೂಡ  ಗಮನ ಸೆಳೆಯುತ್ತದೆ. ಸಿಂಪಲ್ ಸ್ಟೋನ್ ಆಭರಣಗಳನ್ನು ತೊಟ್ಟರೆ ಇನ್ನು ಚನ್ನಾಗಿ ಒಪ್ಪುತ್ತದೆ. ಫ್ಲೋರಲ್ ಪ್ರಿಂಟ್  ಲೆಹಂಗಾವನ್ನು ಮದುವೆ, ಅರತಕ್ಷತೆ  ಸಮಾರಂಭಗಳಲ್ಲಿ ಧರಿಸುವುದರಿಂದ ಬೆಸ್ಟ್ ಲುಕ್ ಕೊಡುತ್ತದೆ  ಜೊತೆಗೆ ಪ್ರತಿಯೊಬ್ಬರ ಗಮನ ಸೆಳೆಯುತ್ತದೆ.  ಫ್ಲೋರಲ್ ಪ್ರಿಂಟ್ ಇರುವ ಕ್ಯಾಶುಯಲ್ ವೇರ್  ಬಟ್ಟೆ ಗಳು ಕೂಡ ಪಾರ್ಟಿ ಗೆ ಒಪ್ಪುತ್ತದೆ.  ಬೇಸಿಗೆಕಾಲದಲ್ಲಿ  ಫ್ಲೋರಲ್ ಪ್ರಿಂಟ್ ಇರುವ ಕುರ್ತಾ ಗಳು ಆಫೀಸ್ ಹಾಗೂ ಕಾಲೇಜು ಗಳಿಗೆ ಕಂಫರ್ಟಬಲ್  ಫೀಲ್ ಕೊಡುತ್ತದೆ. ಫ್ಲೋರಲ್ ಪ್ರಿಂಟ್  ಬ್ಲೇಝರ್ ಮತ್ತು ಜಂಪ್ ಸೂಟ್ ಕೂಡ ಅತ್ಯಕರ್ಷಕ  ಸುಂದರ ಲುಕ್ ಕೊಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ