ಆಧುನಿಕ ಕಾಲಕ್ಕೆ ತಕ್ಕಂತೆ ಮಾಡರ್ನ್ ಸ್ಟೈಲ್ ನಲ್ಲಿ ಸೀರೆ ಡ್ರೇಪಿಂಗ್ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಪೂರ್ಣವಾಗಿ ತಿಳಿಯೋಣವೇ……?

ಪಾರಂಪರಿಕ ಸೀರೆಯನ್ನು ಆಧುನಿಕ ಶೈಲಿಯಲ್ಲಿ ಅಮೋಘವಾಗಿ ಉಟ್ಟು ಅದನ್ನು ಹೀಗೆ ಆಧುನಿಕವಾಗಿಸಿ...

ಭಾರತೀಯ ಮಹಿಳೆಯ ಅಚ್ಚುಮೆಚ್ಚಿನ ಉಡುಗೆ ಸೀರೆ! ಸೀರೆಯನ್ನು ಅಧಿಕ ಆಕರ್ಷಕಗೊಳಿಸುವ ವಿಧಾನ ಇಲ್ಲಿದೆ :

ಪ್ಯಾಂಟ್‌ ಸ್ಟೈಲ್ ಡ್ರೇಪಿಂಗ್‌

ಪಾದಗಳವರೆಗೂ ಉದ್ದಕ್ಕಿರುವ ಟ್ರೌಸರ್ಸ್‌ನ ಒಂದು ನಮೂನೆಯನ್ನು ಸೀರೆಯ ಜೊತೆ ಹೀಗೆ ಹೊಂದಿಸಿ. ನೀವು ಇದರ ಅಡಿಭಾಗವನ್ನು 2 ಸಲ ಮಡಿಚಿ, ಉದ್ದ ಕಡಿಮೆ ಮಾಡಬಹುದು. ಸೆರಗನ್ನು ನಿಮ್ಮ ಹೆಗಲ ಬದಿ ಇಳಿಬಿಡಿ. ಈ ಔಟ್‌ಫಿಟ್‌ ಉಡಲು ಸರಳ ಎನಿಸಿದರೂ, ಹೊಸಬರಿಗೆ ವಿಚಿತ್ರ ಎನಿಸುತ್ತದೆ.

ಧೋತಿ ಸ್ಟೈಲ್ ಡ್ರೇಪಿಂಗ್

12 ಗಜಗಳ ಈ ಸೀರೆಯನ್ನು ಧೋತಿಯಾಗಿ ಮಹಾರಾಷ್ಟ್ರಿಯನ್‌ ಶೈಲಿಯಲ್ಲಿ ಉಟ್ಟು, ಈ ಡ್ರೇಪಿಂಗ್‌ನ್ನು ಇನ್ನೊಂದು ಎತ್ತರದ ಸ್ತರಕ್ಕೆ ಒಯ್ಯಬಹುದಾಗಿದೆ. ಸೀರೆಯನ್ನು ಕಚ್ಚೆ ಹಾಕಿ ಉಡುವುದೇ ವಿಶೇಷ. ಇದನ್ನು ಫ್ರೀ ಫಾಲ್ ಡೈರೆಕ್ಷನ್‌ನಲ್ಲಿ ನಿಮ್ಮ ಹೆಗಲಿನಿಂದ ಇಳಿಬಿಡಿ. ಇದನ್ನು ಬ್ಲಿಂಗಿ ಅಲಂಕಾರದಿಂದ ಬಿಗ್‌ ಸ್ಲೀವ್ ಲೆ‌ಸ್‌ ಬ್ಲೌಸ್‌ ಜೊತೆ ಆಕಾರ ನೀಡಿ.

 

ಕ್ರಾಪ್‌ ಸ್ಟೈಲ್ ಡ್ರೇಪಿಂಗ್‌

ಸಾಂಪ್ರದಾಯಿಕ ಬ್ಲೌಸ್‌ ಬದಲಿಗೆ ಸೀರೆಯ ಜೊತೆ ಒಂದು ಕ್ರಾಪ್‌ ಟಾಪ್‌ ಜೋಡಿ ಮಾಡಬಹುದು. ಪರಿಣಾಮವಾಗಿ ಒಂದು ಸುಂದರ ಆಕೃತಿ ಮೂಡುತ್ತದೆ. ಇದರಿಂದ ಸೀರೆಗೆ ಹೊಸ ಸ್ವರೂಪ ಸಿಗಲಿದೆ.

ಹಾಲ್ಟರ್‌ ಸ್ಟೈಲ್ ಡ್ರೇಪಿಂಗ್‌

ಹಾಲ್ಟರ್‌ ಟಾಪ್ಸ್ ಒಂದು ಸಾಂಪ್ರದಾಯಿಕ ಸೀರೆಗೆ ಅತಿ ಸೂಕ್ತ ಬ್ಲೌಸ್‌ ಆಗಲಿದೆ. ನಿಮ್ಮ ಸೀರೆ ಒಂದು ಹ್ಯಾಂಡ್‌ಲೂಂ ಪಿಕ್‌ ಅಥವಾ ಅತ್ಯಧಿಕ ಇಂಡೀ ಸಮಾನ ಆದರೇನಂತೆ? ಒಂದು ಸುಂದರ ಇಂಡೀ ಚಿಕ್‌ ಲುಕ್‌ಗಾಗಿ ಇದನ್ನು ಹಾಲ್ಟರ್‌ ಜೋಡಿ ಹೊಂದಿಸಿ ನೋಡಿ!

ವೆಯ್ಸ್ಟ್ ಸ್ಟೈಲ್‌ ಡ್ರೇಪಿಂಗ್‌

ನಿಮ್ಮಲ್ಲಿ ಅಡಗಿರುವ ವಿಲಕ್ಷಣ ದಿವಾಳನ್ನು ಪ್ರಕಟಿಸುವ ಸಲುವಾಗಿ ಹೀಗೆ ಸೀರೆ ಉಟ್ಟು ನೋಡಿ. ನಡು ಬಿಗಿತಕ್ಕೆ ಬೆಲ್ಟ್ ಧರಿಸುವಿಕೆ ಅತ್ಯಂತ ಹಳೆಯ ಶೈಲಿ. ಅದನ್ನೇ ಕಸೂತಿಗೊಳಿಸಿದ ಸೆರಗಿನಲ್ಲಿ ನಡುವಿಗೆ ಬರುವಂತೆ ಮಾಡಿದರೆ.... ವಿಚಿತ್ರ ಅನಿಸುವುದೇ ಫ್ಯಾಷನ್‌ ಅಲ್ಲವೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ