ನೀವು ಯಾವುದೇ ಆಫೀಸ್‌ಗೆ ಹೋಗಿ ಗಮನಿಸಿದರೂ, ಯಾವ ಹೆಂಗಸರು ಉತ್ತಮ ರೀತಿಯಲ್ಲಿ ಡ್ರೆಸ್‌ ಅಪ್‌ ಮಾಡಿಕೊಂಡು ಬಂದಿರುತ್ತಾರೋ, ಕೆಲಸ ಮಾಡುವಲ್ಲಿ ಅವರ ಉತ್ಸಾಹ ಹಾಗೂ ಚಾರ್ಮ್ ಉತ್ತಮ ಮಟ್ಟದ್ದಾಗಿರುತ್ತದೆ. ಅವರು ಸಾಕಷ್ಟು ಕಾನ್ಛಿಡೆನ್ಸ್ ಹೊಂದಿರುತ್ತಾರೆ. ಇವರು ಥಟ್‌ ಅಂತ ಎಲ್ಲಕ್ಕೂ ಉತ್ತರ ನೀಡುವವರಾಗಿರುತ್ತಾರೆ, ಹಿಂಜರಿತ ಸಂಕೋಚ ಇರುವುದಿಲ್ಲ.

ಅದೇ ಸಾಧಾರಣ ವೇಷಭೂಷಣ ಧರಿಸಿ ಬಂದವರನ್ನು ಗಮನಿಸಿ, ಅವರುಗಳು ಆಫೀಸಿನ ಮೂಲೆ ಜಾಗ ಹಿಡಿದು, ತಲೆ ತಗ್ಗಿಸಿಕೊಂಡು ತಂತಮ್ಮ ಕೆಲಸಗಳನ್ನು ಬೇಗ ಬೇಗ ಮುಗಿಸುವ ಧಾವಂತದಲ್ಲಿರುತ್ತಾರೆ. ಇವರುಗಳು ಬೇರೆಯವರ ಜೊತೆ ಹೆಚ್ಚು ಬೆರೆಯುವುದೂ ಇಲ್ಲ, ಅಥವಾ ಹೆಚ್ಚಿಗೆ ಮಾತನಾಡುವುದೂ ಇಲ್ಲ. ಅಷ್ಟು ಮಾತ್ರವಲ್ಲ, ಲಂಚ್‌ ಟೈಮಿನಲ್ಲಿ ಒಂದು ಮೂಲೆ ಜಾಗ ಹಿಡಿದು ತಮ್ಮ ಪಾಡಿಗೆ ಟಿಫನ್‌ ಬಾಕ್ಸ್ ತೆರೆದು ಊಟ ಮಾಡುತ್ತಾರೆ. ಇಂಥ ಹೆಂಗಸರು ತಮ್ಮ ಕೆಲಸದಲ್ಲಿ ಚುರುಕಾಗಿದ್ದರೂ, ಎಲ್ಲರ ಜೊತೆ ಅಂಟಿಯೂ ಅಂಟದಂತಿರುತ್ತಾರೆ. ತಮ್ಮ ಸುತ್ತಲೂ ಒಂದು ಅದೃಶ್ಯ ಪರದೆ ನಿರ್ಮಿಸಿಕೊಂಡಿರುತ್ತಾರೆ.

ಅಸಲಿಗೆ ನಮ್ಮ ದೇಶದಲ್ಲಿ 30-35 ವರ್ಷ ತಲುಪಿದ ಹೆಂಗಸರು ತಮ್ಮ ಉಡುಗೆ ತೊಡುಗೆ ಕುರಿತು ಬಹಳ ನಿರ್ಲಕ್ಷ್ಯ ವಹಿಸುತ್ತಾರೆ, ಆದರೆ ಇದು ತಪ್ಪು. ಸಾಮಾನ್ಯವಾಗಿ 60ರವರೆಗಿನ ಮಹಿಳೆ ಸಹ ಫ್ಯಾಷನ್‌, ಆಧುನಿಕತೆ ಅನುಸರಿಸುತ್ತಾ ಜೀವನೋತ್ಸಾಹದಿಂದ ತುಂಬಿರಬೇಕು, ಇಂಥವರಿಗೇನೂ ಕೊರತೆ ಇಲ್ಲ. ಇವರುಗಳೂ ಸಹ ತುಟಿಗೆ ಲಿಪ್‌ಸ್ಟಿಕ್‌, ಹೈ ಹೀಲ್ಸ್, ಸುಂದರ ಪರ್ಸ್‌, ಕೂದಲಿಗೆ ಹೇರ್‌ ಡೈ, ಮುಖಕ್ಕೆ ಮೇಕಪ್‌ ಮಾಡಿಕೊಂಡು ಹೊಸ ಹುರುಪು ಗಳಿಸಬಹುದು.

office-wear

ನೀವು ಉದ್ಯೋಗಸ್ಥ ವನಿತೆ ಆಗಿದ್ದರೆ, ಕೆಲಸದ ಜೊತೆ ಜೊತೆಗೆ, ನೀವು ನಿಮ್ಮ ವ್ಯಕ್ತಿತ್ವದ ಕಡೆಯೂ ಜಾಗೃತರಾಗಿರಬೇಕು. ಆಫೀಸ್‌ಎಂದರೆ ಕೇವಲ ಒಂದಿಷ್ಟು ಕೆಲಸ ಮುಗಿಸಿ ಬರುವ ಜಾಗ ಮಾತ್ರವಲ್ಲ, ನೀವು ಇಲ್ಲಿ ಬೇರೆ ಬೇರೆ ಜನರೊಂದಿಗೆ 8-10 ಗಂಟೆಗಳ ಕಾಲ ಕಳೆಯುತ್ತೀರಿ. ನೀವು ನೀಟಾಗಿ, ಡೀಸೆಂಟಾಗಿ ಡ್ರೆಸ್‌ ಮಾಡಿಕೊಂಡು ಆಫೀಸಿಗೆ ಬಂದರೆ, ನಿಮಗೆ ಗೌರವಾದರಗಳು ಸಿಗುವುದು ಮಾತ್ರವಲ್ಲ, ಕೆಲಸ ಮಾಡಲು ನಿಮಗೆ ಹೆಚ್ಚಿನ ಹುರುಪು, ಉತ್ಸಾಹ ಹೊಮ್ಮುತ್ತದೆ.

ಆಫೀಸ್‌ ಕೇವಲ ವರ್ಕಿಂಗ್‌ ಪ್ಲೇಸ್‌ ಅಲ್ಲ ಕೆಲವರಿಗೆ ಆಫೀಸ್‌ ಎಂದರೆ ಕೇವಲ ಕೆಲಸ ಮುಗಿಸಿ ಬರುವ ಒಂದು ಜಾಗವಾಗಿರುತ್ತದಷ್ಟೆ. ಅವರಿಗೆ ತಾವು ಬಂದಿರುವುದು ಕೇವಲ ಕೆಲಸ ಮುಗಿಸಲು ತಾನೇ ಎನಿಸುತ್ತದೆ. ಹೀಗಾಗಿ ಏನೋ ಒಂದನ್ನು ಧರಿಸಿದರಾಯಿತು, ವ್ಯತ್ಯಾಸವೇನಿದೆ ಎನಿಸುತ್ತದೆ. ನೀವೂ ಹೀಗೆ ಯೋಚಿಸುತ್ತೀರಾ? ಅದು ತಪ್ಪು! ಆಫೀಸಿನಲ್ಲಿ ದಿನ ನೀವು 8-10 ಗಂಟೆ ಕಾಲ ಕಳೆಯಬೇಕಿರುವುದರಿಂದ, ಅದನ್ನು ಕೇವಲ ಕೆಲಸ ಮುಗಿಸಿ ಹೊರಡುವ ಜಾಗ ಎಂದು ಭಾವಿಸುವುದು ಕಾಟಾಚಾರವಾಗುತ್ತದೆ, ಸರಿಯಲ್ಲ. ಇಲ್ಲಿ ನೀವು ಕುಳಿತೇಳುವ ಶೈಲಿ, ಡ್ರೆಸ್‌, ಸ್ಟೈಲ್, ಮಾತನಾಡುವ ರೀತಿ.... ಎಲ್ಲವೂ ಮುಖ್ಯವಾಗುತ್ತದೆ. ತುಸು ಸುಂದರವಾಗಿ ಕಾಣಿಸಿಕೊಂಡು, ಶಿಸ್ತು, ಸಂಯಮ ಪಾಲಿಸುತ್ತಾ ಅಚ್ಚುಕಟ್ಟಾಗಿ ಕೆಲಸ ಮಾಡುವುದರಿಂದ ಆಫೀಸಿನ ವಾತಾವರಣ ಶೋಭಾಯಮಾನ ಎನಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ