ಬೇಸಿಗೆಯಲ್ಲಿ ಸ್ಟೈಲಿಶ್ಲುಕ್ಸ್ ಗಳಿಸಿ, ಪಾರ್ಟಿಗಳಲ್ಲಿ ಮಿರಿ ಮಿರಿ ಮಿಂಚ ಬೇಕೆಂದಿದ್ದರೆ, ಇಲ್ಲಿನ ಸಲಹೆಗಳನ್ನೂ ಅಗತ್ಯ ಅನುಸರಿಸಿ......!

ಬೇಸಿಗೆ ಶುರುವಾಗುತ್ತಿದ್ದಂತೆ ಎಲ್ಲರಿಗೂ ಏನಾದರೂ ಹೊಸ ಡಿಸೈನಿನ ಡ್ರೆಸ್‌ ಧರಿಸ ಬೇಕೆನಿಸುತ್ತದೆ. ಈ ನಿಟ್ಟಿನಲ್ಲಿ ನಿಮ್ಮ  ವಾರ್ಡ್‌ ರೋಬ್‌ ಕಲೆಕ್ಷನ್‌ ಹೀಗಿರಲಿ :

ಸೀಕ್ವೆನ್ಸ್ ವರ್ಕ್ನಿಂದ ಸುಸಜ್ಜಿತ ಡ್ರೆಸ್‌ : ಬೇಸಿಗೆಯಲ್ಲಿ ನಕ್ಷತ್ರ (ಸೀಕ್ವೆನ್ಸ್) ಡಿಸೈನಿನ ಶೈನಿಂಗ್‌ ಡ್ರೆಸ್‌ ಗೆ ಹೆಚ್ಚಿನ ಬೇಡಿಕೆ. ಇಂಥ ಟಾಪ್‌ ಯಾ ಲೆಗ್ಗಿಂಗ್ಸ್ ಯಾವ ಸಮಾರಂಭಕ್ಕಾದರೂ ಒಪ್ಪುತ್ತದೆ.

ಲೈನ್‌ ಸ್ಕರ್ಟ್‌ ಹೊರಗಿನ ಸುತ್ತಾಟಕ್ಕೆ ಸೂಕ್ತ. ಗೋಲ್ಡನ್‌ ಸಿಲ್ವರ್‌ ನಂಥ ಹೊಳೆ ಹೊಳೆಯುವ ಡ್ರೆಸ್‌ ಗಳ ಜೊತೆಯಲ್ಲಿ ನೀಲಿ, ಕೆಂಪು, ಕಪ್ಪು, ಆರೆಂಜ್‌, ಮೆಜೆಂತಾದಂಥ ಬೋಲ್ಡ್ ಬಣ್ಣಗಳನ್ನು ಬಳಸಿಕೊಳ್ಳಿ. ಇದರ ಜೊತೆ ಲೈಟ್‌ ಕಲರ್‌ ಸ್ಕಾರ್ಫ್‌ಯಾ ಜ್ಯಾಕೆಟ್‌ ಇರಲಿ.

ಪೇಸ್ಟಲ್ ಬಣ್ಣದ ಡ್ರೆಸೆಸ್‌ : ಈ ಸೀಸನ್‌ ನಲ್ಲಿ ಪೇಸ್ಟಲ್ ಯಾ ಲೈಟ್‌ ಕಲರ್‌ ಡ್ರೆಸೆಸ್‌ ನಿಮಗೆ ಬೆಸ್ಟ್ ಆಪ್ಶನ್‌ ಎನಿಸುತ್ತದೆ. ಹಳದಿ, ಪರ್ಪಲ್, ಲ್ಯಾವೆಂಡರ್‌, ಹಸಿರು, ಗುಲಾಬಿ, ಕಿತ್ತಳೆ ಬಣ್ಣದ ಡ್ರೆಸೆಸ್‌ ಆರಿಸಿ. ಬಿಳಿಯ ಬಣ್ಣವಂತೂ ಬೇಸಿಗೆಗೆ ಸರ್ಮಾನ್ಯ!

ವಿಂಟೇಜ್ಫ್ಲೇರ್ಸ್‌: ಇಂಥ ಡ್ರೆಸೆಸ್‌ ಟ್ರೆಂಡ್‌ 40-50ರ ದಶಕದಲ್ಲಿತ್ತು. ಇದೀಗ ಫ್ಯಾಷನ್‌ ನಲ್ಲಿ ಇವು ಮರಳಿ ಬಂದಿವೆ. ಪ್ಲೇರ್‌ಡಿಸೈನಿನ ಮ್ಯಾಕ್ಸಿ ಯಾ ಮಿಡೀ ಡ್ರೆಸ್‌ ಧರಿಸಿರಿ ಅಥವಾ ಪ್ಲೇರ್‌ ಟಾಪ್‌ ಜೊತೆ ಡೆನಿಂ ಜ್ಯಾಕೆಟ್‌ ಇರಲಿ. ಇಷ್ಟು ಮಾತ್ರವಲ್ಲದೆ, ಪ್ಲೇರ್‌ ಪ್ರಿಂಟಿನ ಸ್ಕಾರ್ಫ್‌, ಮೊಬೈಲ್ ‌ಕವರ್‌, ಬ್ಯಾಗ್ಸ್, ಸಾಕ್ಸ್ ಸಹ ಓಕೆ.

ಹೆರಿಟೇಜ್‌  ಚೆಕ್ಸ್ : ಬೇಸಿಗೆಯ ಫಾರ್ಮಲ್ ಡ್ರೆಸ್‌ ಗೆ ಇದು ಬೆಸ್ಟ್ ಆಯ್ಕೆ. ಹೆರಿಟೇಜ್‌ ಚೆಕ್ಸ್ ಪ್ಯಾಟರ್ನಿನ ಫ್ಯಾಟಿ ಫೆಮಿನೈನ್‌ ಬಿಸ್ ನೆಸ್‌ ಸೂಟ್‌ ಸಹ ಬಳಸಿರಿ. ಅಫಿಶಿಯಲ್ ಮೀಟಿಂಗ್ಸ್ ಗೆ ಇದು ಉತ್ತಮ. ಪ್ಲೇನ್‌ಪೆನ್ಸಿಲ್ ‌ಸ್ಕರ್ಟ್‌ ಯಾ ಟ್ರೌಸರ್ಸ್‌ ಜೊತೆ ಲಿನೆನ್‌ ಶರ್ಟ್‌ ಧರಿಸಿರಿ. ಇಂಥವನ್ನು ಡೇಲಿ ಆಫೀಸ್‌ ವೇರ್‌ ಆಗಿಯೂ ಬಳಸಿಕೊಳ್ಳಿ.

ಫ್ರಿಂಝಿ (ನೆಟೆಡ್‌) ಡ್ರೆಸ್‌ : ಸಂಜೆ ಪಾರ್ಟಿ ಅಥವಾ ಡಿನ್ನರ್‌ ಗಾಗಿ ಇಂಥ ಫ್ರಿಂಝಿ ಸ್ಕರ್ಟ್‌ ಉತ್ತಮ. ಇದರ ಜೊತೆ ಹೈ ಹೀಲ್ಸ್ ಇರಲಿ. ಕಾಕ್‌ ಟೇಲ್ ‌ರಿಂಗ್‌ ಯಾ  ರೌಂಡ್‌ ಇಯರ್‌ ರಿಂಗ್‌ಜೊತೆಗಿದ್ದರೆ ಚೆಂದ.

ಲೈಲಾಕ್ಕಲರ್‌ (ಲೈಟ್ಪರ್ಪಲ್) : ಲೈಲಾಕ್‌ ಕಲರ್‌ ಬೇಸಿಗೆಗೆ ಚೆನ್ನಾಗಿ ಒಪ್ಪುತ್ತದೆ. ಲ್ಯಾವೆಂಡರ್‌ ಶೇಡ್‌ ಅಂತೂ ಹಲವು ವಿಧದಲ್ಲಿ ಲಭ್ಯ. ಲೈಲಾಕ್‌ ಟಾಪ್‌ಬ್ಲೌಸ್‌ ನಿಂದ ಹಿಡಿದು, ಟ್ರೌಸರ್‌ ಸ್ಕರ್ಟ್‌ ವರೆಗೂ ಬಳಸಿಕೊಳ್ಳಿ. ಇಂಥನ್ನು ಡಾರ್ಕ್‌ ಲೈಟ್ ಎರಡೂ ರೀತಿಯಲ್ಲಿ ಬಳಸಬಹುದು.

ಪೆನ್ಸಿಲ್ ಸ್ಕರ್ಟ್‌ : ಬೇಸಿಗೆಗೆ ಮಾತ್ರವಲ್ಲದೆ, ಈ ಪೆನ್ಸಿಲ್ ಸ್ಕರ್ಟ್‌ ಎಲ್ಲಾ ಸೀಸನ್‌ ಗೂ ಒಪ್ಪುತ್ತದೆ. ಇದೆಂದೂ ಔಟ್‌ ಆಫ್‌ ಫ್ಯಾಷನ್ ಆಗಲ್ಲ. ಇದನ್ನು ನೀವು ಪೇಪ್ಲಂ ಟಾಪ್‌, ರಫ್ಡ್‌ ಸ್ಲೀವ್ ‌ಬ್ಲೌಸ್‌ ಯಾ ಶರ್ಟ್‌ ಜೊತೆ ಬಳಸಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ