ಝುಕೀನೀ ಪ್ಯಾರ್‌ಮೆಸನ್‌ ಚೀಸ್‌ ಪಾಸ್ತಾ

ಸಾಮಗ್ರಿ : ನೂಡಲ್ಸ್ ಶೇಪ್‌ನಲ್ಲಿ ಕತ್ತರಿಸಲಾದ 4 ಝುಕೀನೀ, 7-8 ಬಾದಾಮಿ (ಚೂರು ಮಾಡಿ), 4-5 ಎಸಳು ಬೆಳ್ಳುಳ್ಳಿ, 2 ಚಮಚ ಬೆಣ್ಣೆ, ಒಂದಿಷ್ಟು ಹೆಚ್ಚಿದ ತುಳಸಿ ಎಲೆ, 4 ಚಮಚ ತುರಿದ ಪ್ಯಾರ್‌ಮೆಸನ್‌ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ನಿಂಬೆ ಸಿಪ್ಪೆಯ ತುರಿ.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ಬೆಣ್ಣೆ ಜೊತೆ ತುಸು ರೀಫೈಂಡ್‌ ಆಯಿಲ್‌ ಬೆರೆಸಿ ಬಿಸಿ ಮಾಡಿ. ಇದಕ್ಕೆ ಜಜ್ಜಿದ ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಬಾದಾಮಿ ಚೂರು ಹಾಕಿ ಕೆದಕಬೇಕು. ನಂತರ ಇದಕ್ಕೆ ನೂಡಲ್ಸ್ ಆಕಾರದ ಝುಕೀನೀ ಹಾಕಿ ಬೇಗ ಬೇಗ ಕೈಯಾಡಿಸಿ. ನಂತರ ಉಪ್ಪು, ಖಾರ, ನಿಂಬೆ ಸಿಪ್ಪೆ ತುರಿ ಹಾಕಿ ಕೆದಕಬೇಕು. ಹೀಗೆ 2 ನಿಮಿಷ ಚೆನ್ನಾಗಿ ಬೆರೆತುಕೊಳ್ಳುವಂತೆ ಬಾಡಿಸಿ ಕೆಳಗಿಳಿಸಿ. ಇದರ ಮೇಲೆ ತುಳಸಿ ಎಲೆ, ತುರಿದ ಚೀಸ್‌ ಉದುರಿಸಿ, ಒಮ್ಮೆ ಬೆರೆತುಕೊಳ್ಳುವಂತೆ ಕೈಯಾಡಿಸಿ. ನಿಂಬೆ ರಸ ಹಿಂಡಿಕೊಳ್ಳಿ. ಹಬ್ಬದಡುಗೆ ಜೊತೆ ನೆಂಚಿಕೊಳ್ಳಲು ಬಡಿಸಿ.

ಕೊಬ್ಬರಿ ಮಿಠಾಯಿ ವಿತ್‌ ಡ್ರೈ ಫ್ರೂಟ್ಸ್

ಸಾಮಗ್ರಿ : 1 ಕಪ್‌ ತೆಂಗಿನ ತುರಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್‌), ಅರ್ಧ ಕಪ್‌ ತುರಿದ ವೈಟ್‌ ಚಾಕಲೇಟ್‌, ರುಚಿಗೆ ತಕ್ಕಷ್ಟು ಬೆಣ್ಣೆ, ಏಲಕ್ಕಿ ಪುಡಿ, ಸಕ್ಕರೆ.

ವಿಧಾನ : ಒಂದು ಬಟ್ಟಲಿಗೆ ಬೆಣ್ಣೆ ಹಾಕಿ ಅದರ ಮೇಲೆ ಚಾಕಲೇಟ್‌ ಹಾಕಿ, ಕುದಿ ನೀರಿನ ಬಾಣಲೆಯಲ್ಲಿರಿಸಿ ಕರಗಿಸಿ. ನಂತರ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ತೆಂಗಿನ ತುರಿ, ಏಲಕ್ಕಿ ಪುಡಿಯನ್ನು ಇದಕ್ಕೆ ಸೇರಿಸಿ. ಚೆನ್ನಾಗಿ ಬೆರೆತ ನಂತರ, ಬರ್ಫಿಗಳಾಗಿ ಮಾಡಿ. ಇದನ್ನು  ತುಪ್ಪ ಸವರಿದ ಅಲ್ಯುಮಿನಿಯಂ ಟಿನ್‌ಗೆ ಹಾಕಿಡಿ. ಇದನ್ನು ಪ್ರೀಹೀಟ್‌ ಮಾಡಿದ ಓವನ್ನಿನಲ್ಲಿ 2-3 ನಿಮಿಷ ಬೇಕ್‌ ಮಾಡಿ ಹೊರತೆಗೆಯಿರಿ. ನಂತರ ಹೊರಗೆ ಆರಲು ಬಿಟ್ಟು, ಚಿತ್ರದಲ್ಲಿರುವಂತೆ ಬರ್ಫಿಗಳಾಗಿ ಕತ್ತರಿಸಿ. ಇದೀಗ ಬರ್ಫಿ ಸವಿಯಲು ರೆಡಿ! ಅಗತ್ಯವೆನಿಸಿದರೆ ಇದನ್ನು ಏರ್‌ಟೈಟ್‌ ಡಬ್ಬಿಗಳಲ್ಲಿ ತುಂಬಿಸಿಟ್ಟು, ಅತಿಥಿಗಳು ಬಂದಾಗ ಸವಿಯಲು ಕೊಡಿ.

ಬ್ರೋಕ್ಲಿ ಬೈಟ್ಸ್

ಸಾಮಗ್ರಿ : 1 ಕಪ್‌ ಬೇಯಿಸಿ, ಆರಿದ ನಂತರ ತುರಿದ ಬ್ರೋಕ್ಲಿ, 2 ಕಪ್‌ ಬೇಯಿಸಿ ಮಸೆದ ಸಿಹಿಗೆಣಸು, ಅರ್ಧ ಸಣ್ಣ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್‌ ತುರಿದ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಚಿಲೀ ಫ್ಲೇಕ್ಸ್ ನಿಂಬೆ ರಸ, ಹೊರಗಿನ ಕೋಟಿಂಗ್‌ಗಾಗಿ ತುಸು ಹುರಿದ ರವೆ, ರೋಸ್ಟ್ ಮಾಡಿ ತರಿಯಾಗಿಸಿದ ಕಡಲೆಬೀಜ, ಕರಿಯಲು ಎಣ್ಣೆ.

ವಿಧಾನ : ಚೀಸ್‌ ಹೊರತುಪಡಿಸಿ ಬಾಕಿ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿಡಿ. ಇದಕ್ಕೆ ತುಸು ನೀರು ಚಿಮುಕಿಸುತ್ತಾ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಇದರ ಮಧ್ಯೆ ರಂಧ್ರ ಮಾಡಿ, ತುಸು ಚೀಸ್‌ ತುಂಬಿಸಿ ಮತ್ತೆ ಉಂಡೆ ಕಟ್ಟಬೇಕು. ಈಗ ಕೋಟಿಂಗ್‌ ಸಾಮಗ್ರಿ ಬೆರೆಸಿ ಪ್ಲೇಟ್‌ನಲ್ಲಿ ಹರಡಿರಿ. ಅದರಲ್ಲಿ ಈ ಸಣ್ಣ ಉಂಡೆಗಳನ್ನು ಚೆನ್ನಾಗಿ ಹೊರಳಿಸಿ, ಪ್ರೀಹೀಟೆಡ್‌ ಓವನ್ನಿನಲ್ಲಿ  200 ಡಿಗ್ರಿ ಶಾಖದಲ್ಲಿ 10 ನಿಮಿಷ ಬೇಕ್‌ ಮಾಡಿ ಅಥವಾ ಎಣ್ಣೆಯಲ್ಲಿ  ಹೊಂಬಣ್ಣ ಬರುವಂತೆ ಕರಿಯಿರಿ. ಶೇಝ್ ವಾನ್‌ ಚಟ್ನಿ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ