ಸ್ಪೆಷಲ್ ಕಬಾಬ್
ಸಾಮಗ್ರಿ : ಚೆನ್ನಾಗಿ ಮಸೆದ 250 ಗ್ರಾಂ ಪನೀರ್, 5-6 ಬ್ರೆಡ್ ಸ್ಲೈಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಏಲಕ್ಕಿ ಪುಡಿ, ಹಾಲಲ್ಲಿ ನೆನೆದ ಕೇಸರಿ, ಹುರಿದ ರವೆ, ಎಳ್ಳು, ಗಸಗಸೆ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಅಖರೋಟ್ ಚೂರು, ಕರಿಯಲು ಎಣ್ಣೆ.
ವಿಧಾನ : ಬ್ರೆಡ್ ಸ್ಲೈಸ್‌ನ್ನು ನೀರಿನಲ್ಲಿ ಅದ್ದಿ ಹಿಂಡಿಕೊಂಡು ಅದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಪಕೋಡ ಹದಕ್ಕೆ ಕಲಸಿಡಿ. ಚಿತ್ರದಲ್ಲಿರುವಂತೆ ಇದನ್ನು ಉಂಡೆ ಮಾಡಿ ಚಪ್ಪಟೆ ತಟ್ಟಿಕೊಂಡು ಹುರಿದ ರವೆ, ಎಳ್ಳು, ಗಸಗಸೆಯಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ಸಾಸ್ ಜೊತೆ ಸವಿಯಲು ಕೊಡಿ.
ಕಾಶ್ಮೀರಿ ಪಲಾವ್
ಸಾಮಗ್ರಿ : 500 ಗ್ರಾಂ ಬಾಸಮತಿ ಅಕ್ಕಿ, 7-8 ಹೆಚ್ಚಿದ ಈರುಳ್ಳಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ (ಒಟ್ಟಾಗಿ 100 ಗ್ರಾಂ), 1 ದೊಡ್ಡ ಸೇಬು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ದಾಳಿಂಬೆ ಹರಳು, 2-3 ಲವಂಗದೆಲೆ, ತುಸು ಮೊಗ್ಗು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಕಾಳುಮೆಣಸು, ಜೀರಿಗೆ, ಸೋಂಪು, ರೀಫೈಂಡ್ ಆಯಿಲ್, ತುಪ್ಪ, ಕೇದಗೆ ಎಸೆನ್ಸ್, ಹಾಲಲ್ಲಿ ನೆನೆಸಿದ ಕೇಸರಿ, ಹೆಚ್ಚಿದ ಕೊ.ಸೊಪ್ಪು, ಅರಿಶಿನ.
ವಿಧಾನ : ಅಕ್ಕಿಯನ್ನು 2 ಗಂಟೆ ಕಾಲ ನೆನೆಹಾಕಿಡಿ. ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಇದರಲ್ಲಿ ಅರ್ಧದಷ್ಟು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ ಬೇರೆಯಾಗಿಡಿ. ಉಳಿದ ಎಣ್ಣೆಗೆ ತುಪ್ಪ ಬೆರೆಸಿ. ಇದಕ್ಕೆ ಚಕ್ಕೆ ಲವಂಗ ಇತ್ಯಾದಿ ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ದ್ರಾಕ್ಷಿ ಗೋಡಂಬಿ ಎಲ್ಲಾ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಮಸಾಲೆ ಎಲ್ಲಾ ಸೇರಿಸಿ ಕೆದಕಬೇಕು. ಆಮೇಲೆ ಇದಕ್ಕೆ ನೆನೆದ ಅಕ್ಕಿ, ಉದುರುದುರಾಗಿ ಬರುವಷ್ಟು ನೀರು, ಚಿಟಕಿ ಅರಿಶಿನ ಸೇರಿಸಿ. ನಂತರ ಇನ್ನಷ್ಟು ತುಪ್ಪ, ಕೇಸರಿ, ಕೇದಗೆ ಎಸೆನ್ಸ್ ಬೆರೆಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, 2 ಸೀಟಿ ಕೂಗಿಸಿ. ಆಮೇಲೆ ಮುಚ್ಚಳ ತೆರೆದು ಇದಕ್ಕೆ ದಾಳಿಂಬೆ ಹರಳು, ಹೆಚ್ಚಿದ ಸೇಬು, ಬಾಡಿಸಿದ ಈರುಳ್ಳಿ ಎಲ್ಲಾ ಸೇರಿಸಿ ಒಮ್ಮೆ ಕಲಸಿಕೊಂಡು, ಬಿಸಿ ಬಿಸಿಯಾಗಿ ಟೊಮೇಟೊ ರಾಯ್ತಾ ಜೊತೆ ಸವಿಯಲು ಕೊಡಿ.
ಪನೀರ್ ಸ್ಪೆಷಲ್
ಸಾಮಗ್ರಿ : 500 ಗ್ರಾಂ ಪನೀರ್ ಕ್ಯೂಬ್ಸ್, ಹೆಚ್ಚಿದ 5-6 ಈರುಳ್ಳಿ, ತುಸು ಶುಂಠಿ, ಬೆಳ್ಳುಳ್ಳಿ, ಕೊ.ಸೊಪ್ಪು, ಹಾಲಲ್ಲಿ ನೆನೆಸಿದ 100 ಗ್ರಾಂ ದ್ರಾಕ್ಷಿ, ಅರ್ಧ ಲೀ. ಕೆನೆಮೊಸರು, ತುಸು ಎಣ್ಣೆ, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಧನಿಯಾಪುಡಿ, ಜೀರಿಗೆ ಪುಡಿ, ಗರಂಮಸಾಲ, ಫ್ರೆಶ್ ಕ್ರೀಂ, ಕಾದಾರಿದ ಗಟ್ಟಿ ಹಾಲು, ಕಾರ್ನ್‌ಫ್ಲೋರ್, 2-2 ಲವಂಗ ಏಲಕ್ಕಿ, 1 ತುಂಡು ದಾಲ್ಚಿನ್ನಿ, ಸಕ್ಕರೆ.