ಕಲ್ಲಂಗಡಿ ಶರಬತ್ತು : ಈ ಹಣ್ಣಿನಲ್ಲಿ ವಿಟಮಿನ್‌, ಮೆಗ್ನಿಶಿಯಂ, ಪೊಟಾಶಿಯಂ ಮುಂತಾದ ಲಾಭಕಾರಿ ಪೋಷಕಾಂಶಗಳಿವೆ. ದೇಹದಲ್ಲಿನ ನೀರಿನಂಶದ ಕೊರತೆಯನ್ನು ಇದು ನೀಗಿಸುತ್ತದೆ. ಇದರಿಂದ ಜೂಸ್‌ ತಯಾರಿಸಲು ಸುಲಭ ವಿಧಾನ ಎಂದರೆ, ಕಲ್ಲಂಗಡಿ ಹಣ್ಣನ್ನು ಹೆಚ್ಚಿ ಹೋಳು ಮಾಡಿ. ಇದನ್ನು ಜೂಸರ್‌ ಜಾರ್‌ಗೆ ಹಾಕಿ ಲಘುವಾಗಿ ವಿಪ್‌ ಮಾಡುತ್ತಾ ಚಲಾಯಿಸಿ. ನಂತರ ಶೋಧಿಸಿದಾಗ ಅದರ ಬೀಜ ಬೇರ್ಪಡುತ್ತದೆ. ನಿಮ್ಮ ರುಚಿಗೆ ತಕ್ಕಂತೆ ಇದಕ್ಕೆ ಶುಗರ್‌ ಸಿರಪ್‌, ರಾಕ್‌ಸಾಲ್ಟ್, ಮೆಣಸು, ನಿಂಬೆರಸ, ಹೆಚ್ಚಿದ ಪುದೀನಾ ಎಲೆ ಸೇರಿಸಿ ಕ್ರಶ್ಡ್ ಲೆಮನ್‌ ಐಸ್‌ ಜೊತೆ ಇದನ್ನು ಸರ್ವ್ ಮಾಡಿ.

ಮತ್ತೊಂದು ವಿಧಾನ ಎಂದರೆ, ಹುರಿದ ಚಕ್ಕೆಯನ್ನು ಪುಡಿ ಮಾಡಿ. ಅರ್ಧ ಸಣ್ಣ ಚಮಚದ ಈ ಪುಡಿಗೆ ಬೀಜ ರಹಿತ ವಾಟರ್‌ಮೆಲನ್‌ ಜೂಸ್‌ ಬೆರೆಸಿರಿ. ನಂತರ ರುಚಿಗೆ ತಕ್ಕಷ್ಟು ಶುಗರ್‌ ಸಿರಪ್‌, ನಿಂಬೆರಸ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ಕ್ರಶ್ಡ್ ಐಸ್‌, ಪುದೀನಾ ಸೇರಿಸಿ ಸವಿಯಲು ಕೊಡಿ.

ಕುಕುಂಬರ್‌ ಮಿಂಟ್‌ ಜೂಸ್‌ : ಇದನ್ನು ತಯಾರಿಸುವುದಕ್ಕಾಗಿ 2 ಮಧ್ಯಮ ಗಾತ್ರದ ಎಳೇ ಸೌತೇಕಾಯಿ ಸಿಪ್ಪೆ ಹೆರೆದು, ಸಣ್ಣ ಹೋಳುಗಳಾಗಿಸಿ. ಒಂದು ಮಿಕ್ಸಿ ಜಾರ್‌ಗೆ ಸೌತೆ ಹೋಳು, 1 ನಿಂಬೆಯ ರಸ, ತುಸು ಪುದೀನಾ, ರಾಕ್‌ಸಾಲ್ಟ್, 2 ಚಮಚ ಶುಗರ್‌ ಸಿರಪ್‌, ಚಿಟಕಿ ಮೆಣಸು ಬೆರೆಸಿ ಮಿಕ್ಸಿ ಚಲಾಯಿಸಿ. ಇದಕ್ಕೆ 1 ಕಪ್‌ ತಣ್ಣೀರು ಬೆರೆಸಿ ಮತ್ತೆ ಚಲಾಯಿಸಿ. ಇದನ್ನು ಸೋಸಿಕೊಂಡು ಕ್ರಶ್ಡ್ ಐಸ್‌, ಪುದೀನಾ ಬೆರೆಸಿ ಗ್ಲಾಸ್‌ಗೆ ನಿಂಬೆ ಸ್ಲೈಸ್‌ ಸಿಗಿಸಿ ಇದನ್ನು ಸವಿಯಲು ಕೊಡಿ.

ಕೋಕೋನಟ್‌  ಕೂಲರ್‌ : ಎಳನೀರು ತರಿಸಿ ಸೇವಿಸಿ. ಅನಿವಾರ್ಯ ಕಾರಣಗಳಿಗೆ ಅದು ತಾಜಾ ಸಿಗದಿದ್ದರೆ, ಟೆಂಡರ್‌ ಕೋಕೋನಟ್‌ ವಾಟರ್‌ ಕ್ಯಾನ್‌ ಸಹ ರೆಡಿಮೇಡ್‌ ಪಡೆದು ಬಳಸಬಹುದು. ಇದಕ್ಕೆ ಹೆಚ್ಚಿದ ಪುದೀನಾ, 1 ಸಣ್ಣ ಹಸಿಮೆಣಸು, ನಿಂಬೆರಸ, ತುಸು ಶುಗರ್‌ ಸಿರಪ್‌, ಚಾಟ್‌ಮಸಾಲ ಸಹ ಸೇರಿಸಿ ಮಿಕ್ಸಿಯಲ್ಲಿ ವಿಪ್‌ ಮಾಡಿ ಸೇವಿಸಬಹುದು. ಅದೇ ರೀತಿ ಫ್ಲಾಕ್ಸ್ ಸೀಡ್ಸ್ ನ್ನು ಕೂಡ ಇದಕ್ಕಾಗಿ ಬಳಸಬಹುದು. ಕೋಕೋನಟ್‌ ಫ್ಲಾಕ್ಸ್ ಸೀಡ್‌ ಕೂಲರ್‌ ತಯಾರಿಸಲು, 1 ಕಪ್‌ ಎಳನೀರಿಗೆ 1 ಚಮಚ ಫ್ಲಾಕ್ಸ್ ಸೀಡ್ಸ್ ಬೆರೆಸಿ ಮಿಕ್ಸಿ ಚಲಾಯಿಸಿ. ನಂತರ ಇದನ್ನು ಸೋಸಿಕೊಂಡು ನಿಂಬೆರಸ, 2 ಕಪ್‌ ಎಳನೀರು, ಜಲಜೀರಾ ಪೌಡರ್‌ ಬೆರೆಸಿಕೊಳ್ಳಿ. ಇದಕ್ಕೆ ಲೆಮನ್‌ ಕ್ಯೂಬ್ಸ್ ನ್ನು ಕ್ರಶ್‌ ಮಾಡಿ ಹಾಕಬೇಕು. ಕೂಲ್‌ ಕೂಲ್‌ ಆಗಿ ಸರ್ವ್ ಮಾಡಿ.

ಮಾವಿನ ಪಾನಕ : ಮಾಗಿದ ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ? ಅದೇ ತರಹ ಹುಳಿಯಾದ ಮಾವಿನಕಾಯಿ ಸಹ ಅಷ್ಟೇ ರುಚಿಕರ. ಇದು ಕೇವಲ ಉಪ್ಪಿನಕಾಯಿ ಅಥವಾ ವ್ಯಂಜನಗಳಿಗೆ ಮಾತ್ರ ಸೀಮಿತವಲ್ಲ. ಇದು ಬೇಸಿಗೆಯ ದಿನಗಳ ದಾಹ ತಣಿಸುವ ಉತ್ತಮ ಪಾನಕಕ್ಕೂ ಮೂಲ! ಇದರ ಸಿಪ್ಪೆ ಹೆರೆದು, ಹೋಳು ಮಾಡಿ ಬೇಯಿಸಿ. ನಂತರ ಅದನ್ನು ಮಿಕ್ಸಿಗೆ ಹಾಕಿ, ಸಕ್ಕರೆ ಸಹಿತ ಮಿಕ್ಸಿಯಲ್ಲಿ ನೀಟಾಗಿ ತಿರುವಿಕೊಳ್ಳಿ. ನಂತರ ಸೋಸಿಕೊಂಡು, ತಂಪಾದ ಫ್ರಿಜ್‌ ನೀರು ಬೆರೆಸಿ, ಪುದೀನಾ ಸೇರಿಸಿ  ಪಾನಕ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ