ಆಲಿವ್ ಪಿಕಲ್

ಸಾಮಗ್ರಿ : ಗ್ರೀನ್‌/ಬ್ಲ್ಯಾಕ್‌ ಆಲಿ‌ವ್ (ತಲಾ 100 ಗ್ರಾಂ), 50 ಗ್ರಾಂ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಕ್ಕರೆ, ವಿನಿಗರ್‌, ಇಂಗು, ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಮೆಂತ್ಯ, ಅರ್ಧ ಸೌಟು ಆಲಿವ್‌ ಎಣ್ಣೆ, 2 ಚಿಟಕಿ ಅರಿಶಿನ.

ವಿಧಾನ : ಎಣ್ಣೆ ಬಿಸಿ ಮಾಡಿ. ಸಾಸುವೆ, ಜೀರಿಗೆ, ಇಂಗು, ಮೆಂತ್ಯ ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಬಾಡಿಸಿ. ಇದಕ್ಕೆ ಆಲಿವ್, ಉಳಿದ ಮಸಾಲೆ ಪೂರ್ತಿ ಬೆರೆಸಿ ಮಂದ ಉರಿಯಲ್ಲಿ 10 ನಿಮಿಷ ಚೆನ್ನಾಗಿ ಕೆದಕಬೇಕು. ನಂತರ ಬಾಟಲಿಗೆ ತುಂಬಿಸಿ 1 ದಿನವಿಡೀ ಹಾಗೇ ಬಿಡಿ. ಮಾರನೇ ದಿನ ಸವಿಯಲು ಕೊಡಿ.

ಹೆಲ್ದಿ ಜಿಂಜರ್‌ ಪಿಕಲ್

ಸಾಮಗ್ರಿ : 200 ಗ್ರಾಂ ತಾಜಾ ಹಸಿಶುಂಠಿ, ಅರ್ಧರ್ಧ ಚಮಚ ಓಮ, ಮೆಂತ್ಯ, ಜೀರಿಗೆ, ಸಾಸುವೆ, ಸೋಂಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಪುಡಿ ಮಾಡಿದ ಬೆಲ್ಲ, ಅರ್ಧ ಸೌಟು ಎಣ್ಣೆ, 2 ಚಿಟಕಿ ಅರಿಶಿನ.

ವಿಧಾನ : ಶುಂಠಿ ತೊಳೆದು, ಒರೆಸಿ, ಒಣಗಿಸಿ. ಸಿಪ್ಪೆ ಹೆರೆಯದೆ ಅದನ್ನು ಚಿತ್ರದಲ್ಲಿರುವಂತೆ ಉದ್ದುದ್ದಕ್ಕೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇದನ್ನು ಹಾಕಿ. ಜೊತೆಗೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಹದನಾಗಿ ಬಾಡಿಸಿ. ಮಂದ ಉರಿ ಇರಲಿ. ನಂತರ ಕೆಳಗಿಳಿಸಿ ನಿಂಬೆಹಣ್ಣು ಹಿಂಡಿಕೊಳ್ಳಿ. 1-2 ತಾಸು ನೆನೆಯಲು ಬಿಟ್ಟು ನಂತರ ಸವಿಯಲು ಕೊಡಿ.

ಪಿಕಲ್ ಬ್ರೆಡ್‌ ರೋಲ್

ಸಾಮಗ್ರಿ : 4-5 ಬ್ರೆಡ್‌ ಸ್ಲೈಸ್‌, ತುಸು ಬ್ರೆಡ್‌ ಕ್ರಂಬ್ಸ್, ಎಳ್ಳು, ಕರಿಯಲು ಎಣ್ಣೆ, 2 ಬೆಂದ ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಮಾವಿನ ಉಪ್ಪಿನಕಾಯಿ ಮಸಾಲೆ, ಗರಂಮಸಾಲ, ಚಾಟ್‌ ಮಸಾಲ, ಹೆಚ್ಚಿದ ಹಸಿ ಶುಂಠಿ, ಕೊ.ಸೊಪ್ಪು, ಹಸಿಮೆಣಸು.

ವಿಧಾನ : ಬೆಂದ ಆಲೂ ಮಸೆದಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಶುಂಠಿ, ಮೆಣಸು, ಆಲೂ ಹಾಕಿ ಬಾಡಿಸಿ. ನಂತರ ಉಪ್ಪು, ಡ್ರೈ ಮಸಾಲೆ, ಉಪ್ಪಿನಕಾಯಿ ಮಸಾಲೆ ಹಾಕಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಒಲೆಯಿಂದ ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಬ್ರೆಡ್‌ ಸ್ಲೈಸ್‌ಗಳನ್ನು ಮಸೆದು, ಲಟ್ಟಣಿಗೆಯಿಂದ ಲಘುವಾಗಿ ಒತ್ತುತ್ತಾ, ಇದಕ್ಕೆ ಆಲೂ ಮಿಶ್ರಣ ತುಂಬಿಸಿ, ಚಿತ್ರದಲ್ಲಿರುವಂತೆ ಸುರುಳಿ ಮಾಡಿಕೊಳ್ಳಿ. ಅಂಚು ಬಿಡದಂತೆ ಒದ್ದೆ ಕೈಯಿಂದ ಅಂಟಿಸಿಬಿಡಿ. ನಂತರ ಬ್ರೆಡ್‌ ಕ್ರಂಬ್ಸ್, ಎಳ್ಳಿನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಬಿಸಿಯಾಗಿ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಪಿಕಲ್ ರೊಟ್ಟಿ ರೋಲ್

ಸಾಮಗ್ರಿ : 100 ಗ್ರಾಂ ತುರಿದ ಪನೀರ್‌, 1 ಕಪ್‌ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, 2 ಈರುಳ್ಳಿ, ತುಸು ಉಪ್ಪಿನಕಾಯಿ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ಮಸಾಲ, ಜೀರಿಗೆ ಪುಡಿ, ನಿಂಬೆರಸ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಒಂದಿಷ್ಟು ಚಪಾತಿ, ರೆಡಿಮೇಡ್‌ ರೋಲ್‌ ರಾಪ್ಸ್.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ