ಕುಕುಂಬರ್‌ ಯೋಗರ್ಟ್‌

ಸಾಮಗ್ರಿ:  1 ಕಪ್‌ ಮೊಸರು, 2-3 ಕಪ್‌ ಸೌತೆಹೋಳು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಫ್ಲಾಕ್‌ ಸೀಡ್ಸ್, ಒಂದಿಷ್ಟು ಪುದೀನಾ.

ವಿಧಾನ : ಮೇಲಿನ ಎಲ್ಲವನ್ನೂ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಂಡು, 1 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಕ್ಯಾಬೇಜ್‌ ಫ್ರೀಟರ್ಸ್‌

ಸಾಮಗ್ರಿ : ಅರ್ಧ ಕಪ್‌ ಕಡಲೆಹಿಟ್ಟು, ಅದರಲ್ಲಿ ಅರ್ಧ ಅಕ್ಕಿಹಿಟ್ಟು, ತುಸು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಶುಂಠಿ, ಪುದೀನಾ, 2 ಕಪ್‌ ಹೆಚ್ಚಿದ ಎಲೆಕೋಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, 2 ಚಿಟಕಿ ಅರಿಶಿನ, ಕರಿಯಲು ಎಣ್ಣೆ.

ವಿಧಾನ : ಒಂದು ಬಟ್ಟಲಿಗೆ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ, ನೀರು ಚಿಮುಕಿಸಿ, ಪಕೋಡ ಹದಕ್ಕೆ ಕಲಸಿ. ಕಾದ ಎಣ್ಣೆಯಲ್ಲಿ ಇದರಿಂದ ಪಕೋಡ ತಯಾರಿಸಿ ಕಾಯಿಚಟ್ನಿ ಜೊತೆ ಸವಿಯಲು ಕೊಡಿ.

ಪಂಪಕಿನ್‌ ಲಕ್ಸಾ

ಸಾಮಗ್ರಿ : 2-2 ಚಮಚ ಆಲಿವ್‌ ಎಣ್ಣೆ, ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಅರ್ಧರ್ಧ ಕಪ್‌ ಹೆಚ್ಚಿದ ಈರುಳ್ಳಿ ತೆನೆ, ಬ್ರೋಕ್ಲಿ, ತೆಂಗಿನ ಹಾಲು, ಹುರಿದ ಕಡಲೆಕಾಯಿಬೀಜ, ದಾಳಿಂಬೆ, 2-3 ಕಪ್‌ (ಸಿಪ್ಪೆ ಹೆರೆದ) ಸಿಹಿಗುಂಬಳ ಹೋಳು, ವೆಜಿಟೆಬಲ್ ಸ್ಟಾಕ್‌, ಹೆಚ್ಚಿದ ಅಣಬೆ, ನೂಡಲ್ಸ್, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಹಾಟ್‌ ಸಾಸ್‌, ಮೆಣಸು.

ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಶುಂಠಿ, ಹಸಿಮೆಣಸು ಹಾಕಿ ಬಾಡಿಸಿ. ಆಮೇಲೆ ಈರುಳ್ಳಿ ತೆನೆ ಸೇರಿಸಿ ಕೆದಕಬೇಕು. ನಂತರ ಕುಂಬಳ ಹೋಳು ಹಾಕಿ, ನೀರು ಚಿಮುಕಿಸಿ 3 ನಿಮಿಷ ಬೇಯಿಸಿ. ಆಮೇಲೆ ವೆಜ್‌ ಸ್ಟಾಕ್‌ ಬೆರೆಸಿ, ಮುಚ್ಚಳವಿರಿಸಿ ಮತ್ತಷ್ಟು ಹೊತ್ತು ಬೇಯಿಸಿ. ನಂತರ ಇದನ್ನು ಕೆಳಗಿಳಿಸಿ, ಆರಿದ ಮೇಲೆ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಅದನ್ನು ಬಾಣಲೆಗೆ ಹಾಕಿ ಮಂದ ಉರಿಯಲ್ಲಿ ಕೆದಕುತ್ತಾ ಕುದಿಸಬೇಕು. ಆಮೇಲೆ ಇದಕ್ಕೆ  ಬ್ರೋಕ್ಲಿ, ಅಣಬೆ ಹಾಕಿ ಮತ್ತೆ 10 ನಿಮಿಷ ಬೇಯಿಸಿ. ಮಂದ ಉರಿ ಮಾಡಿ ತೆಂಗಿನ ಹಾಲು ಬೆರೆಸಿ ಕುದಿಸಬೇಕು. ಆಮೇಲೆ ಉಪ್ಪು, ಮೆಣಸು, ಸಕ್ಕರೆ ಹಾಕಿ ಕೈಯಾಡಿಸಿ. 2 ನಿಮಿಷ ಬಿಟ್ಟು ಕೆಳಗಿಳಿಸಿ. ಒಂದು ಟ್ರೇನಲ್ಲಿ ಬೆಂದ ನೂಡಲ್ಸ್ ಹರಡಿ, ಜೊತೆಗೆ ಒಂದು ಬಟ್ಟಲಲ್ಲಿ ಗ್ರೇವಿ ಇಡಿ. ಆಮೇಲೆ ಚಿತ್ರದಲ್ಲಿರುವಂತೆ ಅದಕ್ಕೆ ಉಳಿದ ಸಾಮಗ್ರಿಗಳಿಂದ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.

ವಾಟರ್‌ಮೆಲನ್‌ ಗ್ಯಾಜ್‌ಪಾಚೋ

ಸಾಮಗ್ರಿ : 2-3 ಕಪ್‌ ಕಲ್ಲಂಗಡಿ ಹಣ್ಣಿನ ಹೋಳು (ಬೀಜ ತೆಗೆದುಬಿಡಿ), 2 ಕಪ್‌ ಟೊಮೇಟೊ ಜೂಸ್‌, 1 ಕಪ್‌ ಹೆಚ್ಚಿದ ಕ್ಯಾಪ್ಸಿಕಂ, ತುಸು ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಮೆಣಸು, ನೀರಲ್ಲಿ ನೆನೆಸಿದ ತುಂಡರಿಸಿದ ಬ್ರೆಡ್‌, ತುಸು ಎಕ್ಸ್ ಟ್ರಾ ವರ್ಜಿನ್‌ ಆಲಿವ್ ಆಯಿಲ್‌.

ವಿಧಾನ : ಎಣ್ಣೆ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿ ಒಟ್ಟಿಗೆ ಬ್ಲೆಂಡ್‌ ಮಾಡಿ. ಆಮೇಲೆ ಇದನ್ನು ಚಿತ್ರದಲ್ಲಿರುವಂತೆ ಗಾಜಿನ ಬೌಲ್‌ಗೆ ಹಾಕಿ, ಆಯಿಲ್‌ನಿಂದ ಗಾರ್ನಿಶ್‌ ಮಾಡಿ, ಅಲಂಕರಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ