ಒಂದು ಸರ್ವೇ ಪ್ರಕಾರ ಯಾವುದೇ ಆಹಾರ ಸಾಮಗ್ರಿಯನ್ನು ಸ್ವಾದಿಷ್ಟಗೊಳಿಸಲು, ಆ ತಿನಿಸಿನ ಬಣ್ಣ, ಅದಕ್ಕೆ ಹಾಕಿರುವ ಎಣ್ಣೆ, ಮಸಾಲೆ, ಉಪ್ಪು, ಹುಳಿ, ಸಿಹಿ ಇತ್ಯಾದಿ ಮುಖ್ಯವಾಗುತ್ತದೆ. ಇದರಲ್ಲಿ ತುಸು ಹೆಚ್ಚು ಕಡಿಮೆ ಆದರೂ ಆ ತಿನಿಸು ರುಚಿಕರವಲ್ಲ ಎನಿಸುತ್ತದೆ. ನೀವು ಸರಿಯಾದ ರೀತಿಯಲ್ಲಿ ಸಾಮಗ್ರಿಯನ್ನು ಸ್ಟೋರ್‌ ಮಾಡಿರದೆ ಇದ್ದರೆ, ಕೆಲವು ದಿನಗಳ ನಂತರ ಅದರ ಬಣ್ಣ, ರುಚಿ, ಪೋಷಾಕಾಂಶಗಳಲ್ಲಿ ಕೊರತೆ ಕಾಣಿಸುತ್ತದೆ. ಪರಿಣಾಮವಾಗಿ ನೀವು ಎಂಥ ರುಚಿಕರ ಆಹಾರ ತಯಾರಿಸ ಬಯಸುತ್ತೀರೋ ಹಾಗೆ ಅದು ಮೂಡಿಬರುವುದಿಲ್ಲ.

ಈ ಕುರಿತಾಗಿ ಮಹಾನಗರಗಳ ಪಾಕತಜ್ಞರು ಏನು ಹೇಳುತ್ತಾರೆ? ರುಚಿಕರ ತಿನಿಸನ್ನು ಕಷ್ಟಪಟ್ಟು ತಯಾರಿಸುವುದು ಹೆಚ್ಚಲ್ಲ, ಅದನ್ನು ಸ್ಟೋರ್‌ ಮಾಡುವುದರ ಕಡೆಯೂ ಗಮನ ಕೊಡಬೇಕು ಎನ್ನುತ್ತಾರೆ.

ಡಿಶ್‌ ಕಲರ್‌ಫುಲ್ ಆಗಿರಲಿ

ಮನೆಯಲ್ಲಿ ತಯಾರಾಗುವ ತಿನಿಸುಗಳ ಗುಣಮಟ್ಟ ಮತ್ತು ರುಚಿ ಎಲ್ಲಕ್ಕಿಂತ ಶ್ರೇಷ್ಠ ಎನ್ನಬಹುದು. ಆದರೆ ಮನೆಗೆ ಅಪರೂಪಕ್ಕೆ ಅತಿಥಿಗಳು ಬಂದಾಗ, ಅದನ್ನು ಹಾಗೇ ಆರ್ಡಿನರಿಯಾಗಿ ಪ್ರಸ್ತುತಪಡಿಸುವ ಬದಲು ಒಂದಿಷ್ಟು ಡೆಕೋರೇಟ್‌ ಮಾಡಿ ಸವಿಯಲು ನೀಡಿದರೆ ಇನ್ನಷ್ಟು ಮಜಾ ಎನಿಸುತ್ತದೆ. ಯಾವುದೇ ಡಿಶ್ಶನ್ನು ಸದಾ ಕಲರ್‌ಫುಲ್ ಆಗಿಸಲು ತುಸು ಸಹನೆ, ಕೆಲಸ ಆಗಬೇಕು. ಎಷ್ಟು ಆಕರ್ಷಕ ಬಣ್ಣಗಳನ್ನು ಹೊಂದಿರುತ್ತದೋ ಅದು ಅಷ್ಟೇ ಸಕ್ಸಸ್‌ ಎನಿಸುತ್ತದೆ. ಇದಕ್ಕಾಗಿ ತಾಜಾ ಕೊ.ಸೊಪ್ಪು, ಪುದೀನಾ, ಕರಿಬೇವು, ನಿಂಬೆರಸ, ಇತರ ಹರ್ಬ್ಸ್ ಗಳನ್ನು ಪ್ರಮಾಣಬದ್ಧವಾಗಿ ಬಳಸಿಕೊಳ್ಳಿ.

ಇದಕ್ಕಾಗಿ  ಈ ಕೆಳಗಿನ ಸಲಹೆ ಅನುಸರಿಸಿ :

- ಎಗ್‌, ಫಿಶ್‌, ಮಟನ್‌ ಇತ್ಯಾದಿಗಳನ್ನು ಫ್ರಿಜ್‌ನಲ್ಲಿ ಎಚ್ಚರಿಕೆಯಿಂದ ಸ್ಟೋರ್‌ ಮಾಡಬೇಕು. ಅದನ್ನು ಸಾಧಾರಣ ರೂಪದಲ್ಲಿ ಹಾಗೇ ಪ್ರೆಸೆಂಟ್‌ ಮಾಡುವ ಬದಲು, ತುಸು ಅಲಂಕರಿಸಿ ನೀಡುವುದೇ ಸರಿ. ಆಗ ಸಹಜವಾಗಿ ಅದರ ರುಚಿಯೂ ಹೆಚ್ಚುತ್ತದೆ. ನಾನ್‌ವೆಜ್‌ನ್ನು ಫ್ರಿಜ್‌ನಿಂದ ಹೊರತೆಗೆದ ಮೇಲೆ, ಅದು ತನ್ನ ಅಸಲಿ ರೂಪಕ್ಕೆ ಬಂದಾಗ, ತುಸು ದೊಡ್ಡ ಉರಿಯಲ್ಲಿ ಬೇಯಿಸಬೇಕು. ಹೀಗಾದಾದಾಗ ಅದು ಪಾತ್ರೆಯ ಅಡಿಭಾಗಕ್ಕೆ ಮೆತ್ತದೆ, ಅದರ ರುಚಿ, ಸುವಾಸನೆ ಹೆಚ್ಚುತ್ತದೆ. ಆದರೆ ಅದು ಸೀಯದಂತೆ ಎಚ್ಚರವಹಿಸಿ!

- ಗ್ರಿಲ್‌, ಟೋಸ್ಟ್ ಮಾಡಬೇಕಾದ ವ್ಯಂಜನಗಳನ್ನು ಸರಿಯಾದ ತಾಪಮಾನದಲ್ಲೇ ಇರಿಸಬೇಕು. ಅದರ ಮೇಲೆ ಆಗಾಗ ಎಣ್ಣೆಯಿಂದ ಬ್ರಶ್‌ ಮಾಡುತ್ತಿರಬೇಕು. ಆಗ ತಿನಿಸು ಒಣಗದೆ, ಸೀಯದೆ ಇರುತ್ತದೆ.

- ತುಸು ಸಕ್ಕರೆಯನ್ನು ಆಲಿವ್ ಆಯಿಲ್‌ನಲ್ಲಿ ಬೆರೆಸಿ ಕ್ಯಾರೆಮೈಲ್ ಮಾಡಿ. ಇದರಿಂದ ಯಾವುದೇ ಸಿಹಿ ತಿನಿಸಿನ ಬಣ್ಣ ಮತ್ತು ರುಚಿ ಹೆಚ್ಚುತ್ತದೆ.

- ಯಾವುದೇ ಫುಡ್‌ ಪ್ರಾಡಕ್ಟ್ ಖರೀದಿಸುವಾಗ, ಅದರ ಪ್ಯಾಕೇಜಿಂಗ್‌ ಮತ್ತು ಬಳಸಬಹುದಾದ ದಿನಾಂಕ ಗುರುತಿಸಲು ಮರೆಯದಿರಿ.

- ಹಸಿರು ತರಕಾರಿಯ ಬಣ್ಣ ಹಾಗೇ ಉಳಿಸಿಕೊಳ್ಳಲು, ಅವನ್ನು ಬೇಯಿಸುವಾಗ ತುಸು ಉಪ್ಪು ಹಾಕಿಡಿ. ಮೈಕ್ರೋವೇವ್‌ನಲ್ಲಿ ಬೇಯಿಸಿದರೆ ಬಣ್ಣ ಒರಿಜಿನಲ್ ಹಾಗೇ ಇರುತ್ತದೆ!

- ಆಹಾರವನ್ನು ಸ್ಟೋರ್‌ ಮಾಡುವ ಮುನ್ನ ಅದರ ಕಂಟೇನರ್‌ನ್ನು ಚೆನ್ನಾಗಿ ಶುಚಿಗೊಳಿಸಿ.

- ಆಹಾರದ ಗುಣಮಟ್ಟ ಕಾಯ್ದುಕೊಳ್ಳಲು, ಅಡುಗೆ ಮನೆಯ ಶುಚಿತ್ವ ಶುಭ್ರತೆಯ ಬಗೆಗೂ ಹೆಚ್ಚಿನ ಗಮನವಿರಲಿ. ಆಗಾಗ ಕಿಚನ್‌ಗೆ ಪೆಸ್ಟ್ ಕಂಟ್ರೋಲ್‌ ಮಾಡಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ