ಇತ್ತೀಚೆಗೆ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಇದು ಅಗತ್ಯ ಹೌದು. ನಮ್ಮ ದೇಶದಲ್ಲೂ ಸ್ಥೂಲಕಾಯರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಅನಿಯಮಿತ ದಿನಚರ್ಯೆ ಹಾಗೂ ಫಾಸ್ಟ್ ಫುಡ್‌ ಸೇವನೆ. ಹಿಂದೆಲ್ಲ ಅನೇಕ ಕಾಯಿಲೆಗಳು ವ್ಯಕ್ತಿಗೆ ವಯಸ್ಸಾದ ನಂತರವೇ ಬರುತ್ತಿತ್ತು, ಆದರೆ ಈಗ ಸಣ್ಣಪುಟ್ಟ ವಯಸ್ಸಿನವರಿಗೇ ಬರುತ್ತಿದೆ.  ಅಂದರೆ ಮಧುಮೇಹ, ಬಿ.ಪಿ., ಹೃದ್ರೋಗ, ಆರ್ಥರೈಟಿಸ್‌ ಇತ್ಯಾದಿ. ಹೀಗಾದಾಗ ವೈದ್ಯರು ಇಂಥವರಿಗೆ ಸತತ, ತೂಕ ಕಡಿಮೆ ಮಾಡಿ ಎಂದು ಹೇಳುತ್ತಲೇ ಇರುತ್ತಾರೆ. ಸಮಯಕ್ಕೆ  ಸರಿಯಾಗಿ ಲೋ ಕ್ಯಾಲೋರಿಯ ಆಹಾರವನ್ನೇ ಸೇವಿಸಬೇಕೆಂದು ಹೇಳುತ್ತಾರೆ. ಹುರಿದ ಕರಿದ ಪದಾರ್ಥ ಸ್ಥೂಲಕಾಯ ಹೆಚ್ಚಿಸುತ್ತವೆ. ಆದರೆ ಜನ ತಮ್ಮ ಆಹಾರದ ಬಗ್ಗೆ, ಹುರಿದಕರಿದ ಪದಾರ್ಥ ಗಳಿಲ್ಲದೆ ಕೇವಲ ಬೆಂದ ಆಹಾರ ಊಟ ಮಾಡಿದರೆ ಮನಸ್ಸಿಗೆ ತೃಪ್ತಿ ಇಲ್ಲ ಎನ್ನುತ್ತಾರೆ. ಯಾವುದೋ ರೀತಿಯಲ್ಲಿ ಬಲವಂತವಾಗಿ ಇಂಥ ಆಹಾರ ತಿನ್ನುತ್ತಾರೆ, ಬೇಸರಿಸುತ್ತಾರೆ. ಇನ್ನು ಚಿಂತೆ ಬಿಡಿ, ಇಂಥ ತಿನಿಸನ್ನು ರುಚಿಕರಗೊಳಿಸುವ ವಿಧಾನ ಇದೋ ಇಲ್ಲಿದೆ :

ಸುವಾಸನಾಭರಿತ ಮಸಾಲೆ  ಒಗ್ಗರಣೆ

ಸುವಾಸನಾಭರಿತ ಮಸಾಲೆ ಲವಂಗ, ಏಲಕ್ಕಿ, ದಾಲ್ಚಿನ್ನಿ, ಜೀರಿಗೆ, ಇಂಗು ಇತ್ಯಾದಿ ಬಳಸಿ ದಾಲ್, ಪಲ್ಯ ತಯಾರಿಸಿದರೆ ಬಲು ರುಚಿಕರ ಎನಿಸುತ್ತದೆ. ಬಿಸಿಯಾದ ದಾಲ್‌, ತೊವ್ವೆ ಸರ್ವ್ ಮಾಡುವ ಮೊದಲು ಸಣ್ಣ ಬಾಣಲೆಯಲ್ಲಿ ತುಸು ತುಪ್ಪ  ಬಿಸಿ ಮಾಡಿ, ಅದಕ್ಕೆ ಜೀರಿಗೆ, ಇಂಗು, ಲವಂಗ, ಇಡಿಯಾದ ಒಣ ಮೆಣಸಿನಕಾಯಿ, ಕರಿಬೇವಿನ ಒಗ್ಗರಣೆ ಕೊಟ್ಟು ನೋಡಿ. ಅದು ಸುವಾಸನೆಯಿಂದ ಘಂ ಎಂದಾಗ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ದಾಲ್ ಮಖನಿ, ರಾಜ್ಮಾ ಗ್ರೇವಿ ತಯಾರಿಸುವ ಸಮಯದಲ್ಲಿ ಅದು ಕುದಿಯುವ ಸ್ಥಿತಿ ಬಂದಾಗ, ಪಕ್ಕದ ಒಲೆಯಲ್ಲಿ ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೇಟೊ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಇತರ ಮಸಾಲೆ ಜೊತೆ ಕುದಿಸಿದರೆ (ತುಸು ಉಪ್ಪು ಸೇರಿಸಿ) ಅದರ ರುಚಿ ಹೆಚ್ಚುತ್ತದೆ, ಸುವಾಸನೆಯೂ ಕೂಡಿಕೊಳ್ಳುತ್ತದೆ. ಇದಾದ ಮೇಲೆ ಜೀರಿಗೆ, ಕಸೂರಿಮೇಥಿ, ಇಂಗು ಇತ್ಯಾದಿ  ಜಿಡ್ಡಿಲ್ಲದೆ ಲಘು ಹುರಿದು ಒಗ್ಗರಣೆ ಕೊಡಿ. ಇಂಥ ದಾಲ್‌, ರಾಜ್ಮಾ ರುಚಿ ಸವಿದ ಮೇಲೆ ನೀವೇ ಹೇಳಿ!

ಅಕ್ಕಿ ತೊಳೆದ ನೀರನ್ನು ಚೆಲ್ಲದೆ ಒಂದು ಬೇಸ್‌ನ್ನಿಗೆ ಹಾಕಿಡಿ. ಇದಕ್ಕೆ ಲವಂಗದ ಎಲೆ, ಮೊಗ್ಗು, ಪಲಾವ್ ಎಲೆ, ಲವಂಗ, ಚಕ್ಕೆ, ಏಲಕ್ಕಿ ಇತ್ಯಾದಿ ಸೇರಿಸಿ ಕುದಿಸಿರಿ. ಈ ಕುದಿವ ನೀರಿಗೆ ತೊಳೆದ ಅಕ್ಕಿ ಹಾಕಿ ಅನ್ನ ತಯಾರಿಸಿ. ಅನ್ನ ಬಲು ರುಚಿಕರ ಎನಿಸುತ್ತದೆ.

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಬಳಸುತ್ತಿರಿ

ಈರುಳ್ಳಿ, ಬೆಳ್ಳುಳ್ಳಿ, ಶುಂಠಿಗಳನ್ನು ಸಣ್ಣಗೆ ಹೆಚ್ಚಿ ತುಪ್ಪ, ಎಣ್ಣೆ ಜಿಡ್ಡಿಲ್ಲದೆ ಹುರಿದು ಪೇಸ್ಟ್ ಮಾಡಿದಾಗಲೂ ಸಹ ಗ್ರೇವಿ ಸಾಕಷ್ಟು ರುಚಿಕರ ಎನಿಸುತ್ತದೆ. ಆಹಾರ ತಜ್ಞರ ಸಲಹೆ ಪ್ರಕಾರ ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 3 ಚಮಚ ಎಣ್ಣೆ/ತುಪ್ಪ  ಬಳಸಬಹುದು, ಅದಕ್ಕಿಂತ ಹೆಚ್ಚಲ್ಲ ಎನ್ನುತ್ತಾರೆ. ಆದರೆ ತುಂಬಾ ಹೆಲ್ತ್ ಕಾನ್ಶಿಯಸ್‌ ಆಗಿದ್ದು ಇಷ್ಟು ಮಾತ್ರದ ಎಣ್ಣೆಯೂ ಬೇಡ ಎನ್ನುವವರಿಗೆ ಇವರ ಸಲಹೆ ಎಂದರೆ, ಇಂಥ ಹುರಿಯಬೇಕಾದ ಪದಾರ್ಥಗಳನ್ನು ದಪ್ಪಗೆ ಹೆಚ್ಚಿ, ತುಸು ಬಿಸಿ ನೀರಲ್ಲಿ ಬೇಯಿಸಿ, ಆರಿದ ನಂತರ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಗ್ರೇವಿಗೆ ಬೆರೆಸಿಕೊಳ್ಳಿ. ಒಣ ಮಸಾಲೆಗಳನ್ನು ಹಾಗೇ ಜಿಡ್ಡಿಲ್ಲದೆ ಹುರಿದು, ಪುಡಿ ಮಾಡಿ ಗ್ರೇವಿಗೆ ಬೆರೆಸಿ. ಎಣ್ಣೆ/ ತುಪ್ಪ ಇಲ್ಲದ ಗ್ರೇವಿ ರೆಡಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ