ಹೂಕೋಸಿನ ಪಡ್ಡು

ಸಾಮಗ್ರಿ : ಅರ್ಧ ಕಪ್‌ (ಲೈಟ್‌ ಬ್ಲಾಂಚ್ಡ್) ತುರಿದ ಹೂಕೋಸು, 1-2 ಈರುಳ್ಳಿ, 2-3 ಹಸಿ ಮೆಣಸು, ಹೆಚ್ಚಿದ ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ (ಒಟ್ಟಾಗಿ ಅರ್ಧ ಕಪ್‌), ಒಂದಿಷ್ಟು ಹೆಚ್ಚಿದ  ಕೊ.ಸೊಪ್ಪು, 2 ಕಪ್‌ ಹುಳಿ ಬಂದ ಇಡ್ಲಿ ಹಿಟ್ಟು, ತುಸು ಉಪ್ಪು, ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಪದಾರ್ಥಗಳನ್ನು ಹೆಚ್ಚಿ ಒಂದು ಬಾಣಲೆಯಲ್ಲಿ ಎಣ್ಣೆ ಸಹಿತ ಲಘು ಬಾಡಿಸಿ. ಇದನ್ನು ಕೊ.ಸೊಪ್ಪಿನ ಜೊತೆ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಡ್ಡು ತವಾಗೆ ಎಣ್ಣೆ ಹಾಕಿ ಅರ್ಧರ್ಧ ಭಾಗ ಹಿಟ್ಟು ಹಾಕಿ ಬೇಯಿಸಿ. ಎಣ್ಣೆ ಹಾಕಿ ತಿರುವಿ ಹಾಕಬೇಕು. ಹಬೆಯಾಡುವ ಈ ಪಡ್ಡುಗಳಿಗೆ ತುಪ್ಪ ಹಾಕಿ ಟೊಮೇಟೊ ಚಟ್ನಿ ಜೊತೆ ಸವಿಯಲು ಕೊಡಿ.

ಕ್ಯಾರೆಟ್‌ ಸಾಟೆ

ಸಾಮಗ್ರಿ : 500 ಗ್ರಾಂ ಮಧ್ಯಮ ಆಕಾರದ ಕ್ಯಾರೆಟ್‌ (ಕೆಂಪು/ಕೇಸರಿ), ರುಚಿಗೆ ತಕ್ಕಷ್ಟು  ಉಪ್ಪು, ಮೆಣಸು, ಚಾಟ್‌ಮಸಾಲ, ಕಸೂರಿ ಮೇಥಿ, ಇಂಗು, ನಿಂಬೆರಸ, ತುಸು ಎಣ್ಣೆ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಕ್ಯಾರೆಟ್‌ ಶುಚಿಗೊಳಿಸಿ, ಸಿಪ್ಪೆ ಹೆರೆದು, ಫಿಂಗರ್‌ ಚಿಪ್ಸ್ ತರಹ ಉದ್ದಕ್ಕೆ ಸೀಳಿಕೊಳ್ಳಿ. ಒಂದು ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಇಂಗಿನ ಒಗ್ಗರಣೆ ಕೊಡಿ. ಅದಕ್ಕೆ ಈ ಕ್ಯಾರೆಟ್‌ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ನಂತರ ಒಂದೊಂದಾಗಿ ಉಪ್ಪು, ಉಳಿದೆಲ್ಲ ಮಸಾಲೆ ಉದುರಿಸಿ. ಹೊರತೆಗೆದು ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಸವಿಯಲು ಕೊಡಿ.

ವೆಜ್‌ ಗೋಲ್ಡ್ ಕಾಯಿನ್‌

ಸಾಮಗ್ರಿ : 1 ಪ್ಯಾಕೆಟ್‌ ಮೊನಾಕೊ ಸಾಲ್ಟ್ ಬಿಸ್ಕೆಟ್‌, 1 ಕಪ್‌ ತುರಿದ ಹೂಕೋಸು, ಅರ್ಧ ಕಪ್‌ ಬೇಯಿಸಿ ಮಸೆದ ಆಲೂ, 1 ಸಣ್ಣ ಚಮಚ ಹೆಚ್ಚಿದ ಶುಂಠಿ ಹಸಿಮೆಣಸು, 2 ಈರುಳ್ಳಿ, ತುಸು ತುಪ್ಪ, ಅರಿಶಿನ, ಜೀರಿಗೆ, 4 ಎಸಳು ಬೆಳ್ಳುಳ್ಳಿ, 4 ಚಮಚ ನೈಲಾನ್‌ ಎಳ್ಳು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಕರಿಯಲು ರೀಫೈಂಡ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ಮಸಾಲ.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಆಮೇಲೆ ಈರುಳ್ಳಿ ಹಾಕಿ ಬಾಡಿಸಬೇಕು. ನಂತರ ಹೂಕೋಸು ಹಾಕಿ ಕೆದಕಿ ಉಪ್ಪು, ಅರಿಶಿನ ಸೇರಿಸಿ. ಕೊನೆಯಲ್ಲಿ ಮಸೆದ ಆಲೂ ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ. ಮಿಶ್ರಣ ಡ್ರೈ ಆಗಿರಲಿ. ಒಂದು ಪ್ಲೇಟ್‌ನಲ್ಲಿ ಎಳ್ಳು ಉದುರಿಸಿ. 2 ಬಿಸ್ಕೆಟ್‌ಗಳ ಮಧ್ಯೆ ಈ ಮಿಶ್ರಣವನ್ನು ಗುಂಡಗೆ ತಟ್ಟಿ, ಎಳ್ಳಿನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಡೀಪ್‌ಫ್ರೈ ಮಾಡಿ ಸವಿಯಲು ಕೊಡಿ.

ಹೂಕೋಸಿನ ಸ್ಪೆಷಲ್ ಕೋಫ್ತಾ

ಮೂಲ ಸಾಮಗ್ರಿ :  1 ದೊಡ್ಡ ಹೂಕೋಸು (ನೀಟಾಗಿ ತುರಿದಿಡಿ), ಅರ್ಧ ಕಪ್‌ ಪನೀರ್‌, 1 ದೊಡ್ಡ ಕಪ್‌ (ತುಪ್ಪದಲ್ಲಿ ಹುರಿದು) ಪುಡಿ ಮಾಡಿದ ಗೋಡಂಬಿ, ಅರ್ಧ ಕಪ್‌ ಕಡಲೆಹಿಟ್ಟು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಚನಾ ಮಸಾಲ, ಹೆಚ್ಚಿದ ಕೊ.ಸೊಪ್ಪು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ