ಹವಾಮಾನ ಬದಲಾಗುತ್ತಿದ್ದಂತೆ ಕೆಲವರು ಋತುಮಾನದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಶೀತನೆಗಡಿ, ಜ್ವರ ಅವರನ್ನು ಬಹುಬೇಗ ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳುತ್ತವೆ. ಇಂತಹ ಸ್ಥಿತಿಯಲ್ಲಿ ಅವರು ನಮಗೇ ಏಕೆ ಹೀಗಾಗುತ್ತಿದೆ ಎಂದು ಯೋಚಿಸುತ್ತಾರೆ. ನಮ್ಮ ಡಯೆಟ್ ಚೆನ್ನಾಗಿದ್ದರೂ ಹೀಗೇಕಾಗುತ್ತಿದೆ ಎನ್ನುವುದು ಅವರ ಪ್ರಶ್ನೆ. ಕೇವಲ ತಿಂದರಷ್ಟೇ ಸಾಲದು, ಆರೋಗ್ಯಕರ ಪದಾರ್ಥಗಳನ್ನು ನಿಮ್ಮ ಡಯೆಟ್ ನಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಏಕೆಂದರೆ ನಿಮ್ಮ ರೋಗ ನಿರೋಧಕ ಶಕ್ತಿ ವರ್ಧಿಸಬೇಕು.
ನಿಮ್ಮ ರೋಗ ನಿರೋಧಕ ಶಕ್ತಿ ಬಲವಾಗಿದ್ದರೆ, ನೀವು ರೋಗಗಳೊಂದಿಗೆ ಹೋರಾಡಲು ಸಮರ್ಥರಾಗುವಿರಿ. ಅದಕ್ಕಾಗಿ ನೀವು ನಿಮ್ಮ ಡಯೆಟ್ ನಲ್ಲಿ ಜೂಸ್ ಸೇರ್ಪಡೆ ಮಾಡಿಕೊಳ್ಳಿ. ಅದು ನಿಮ್ಮನ್ನು ಫಿಟ್ ಆಗಿಡುವುದರ ಜೊತೆ ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನೂ ಇನ್ನಷ್ಟು ಹೆಚ್ಚಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೂಸ್ ಗಳ ಬಗ್ಗೆ ತಿಳಿದುಕೊಳ್ಳಿ.
ವೆಜಿಟೆಬಲ್/ ಫ್ರೂಟ್ ಜೂಸ್
`ನನಗೆ ಹಣ್ಣು ಹಾಗೂ ತರಕಾರಿಗಳು ಇಷ್ಟವಿಲ್ಲ,' ಎಂದು ಹೇಳುವುದನ್ನು ನೀವು ಅನೇಕ ಮನೆಗಳಲ್ಲಿ ಕೇಳಿರಬಹುದು. `ನನಗೆ ಹೊರಗಿನ ಅದರಲ್ಲೂ ಫಾಸ್ಟ್ ಫುಡ್ ತಿನ್ನುವುದೆಂದರೆ ಬಹಳ ಇಷ್ಟ,' ಎನ್ನುವುದನ್ನು ಸಹ ಕೇಳಿರಬಹುದು. ಇಂತಹ ಸ್ಥಿತಿಯಲ್ಲಿ ಅಂಥವರಿಗೆ ವೆಜಿಟೆಬಲ್ ಹಾಗೂ ಫ್ರೂಟ್ ಜೂಸ್ ಉತ್ತಮ ಆಯ್ಕೆ. ಏಕೆಂದರೆ ಅವರಿಗೆ ಜೂಸ್ ನ ಮುಖಾಂತರ ಹಣ್ಣುಗಳು ಹಾಗೂ ತರಕಾರಿಗಳು ಕೂಡ ದೊರಕುತ್ತವೆ. ಅದರಿಂದಾಗಿ ಅವರಿಗೆ ಅತ್ಯವಶ್ಯ ಪೋಷಕಾಂಶಗಳು ದೊರಕುವುದರ ಜೊತೆ ಜೊತೆಗೆ ಅವರ ರೋಗ ನಿರೋಧಕ ಶಕ್ತಿಯೂ ವರ್ಧಿಸುತ್ತದೆ.
ಈ ಜೂಸ್ ನಿಮ್ಮ ಹೊಟ್ಟೆಯನ್ನು ಹೆಚ್ಚು ಹೊತ್ತಿನ ತನಕ ತುಂಬಿಡುವಂತಿರುತ್ತದೆ. ಇದರಿಂದಾಗಿ ಹೊಟ್ಟೆಯ ಆರೋಗ್ಯದ ಜೊತೆ ಜೊತೆಗೆ ನಿಮ್ಮ ಸಂಪೂರ್ಣ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಇದು ಪ್ರತಿಯೊಂದು ವಯಸ್ಸಿನವರಿಗೂ ಪರ್ಫೆಕ್ಟ್ ಆಗಿರುತ್ತದೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗಂತೂ ತುಂಬಾ ಒಳ್ಳೆಯದು. ಏಕೆಂದರೆ ಪೋಷಕರು, ತಮ್ಮ ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸುವುದು ಬಹಳ ಕಷ್ಟಕರವಾಗಿ ಪರಿಣಮಿಸಿದೆ. ಇಂಥದರಲ್ಲಿ ಜೂಸ್ ರುಚಿಕರ ಆಗಿರುವ ಕಾರಣದಿಂದ ಅವರು, ವಿಟಮಿನ್ ಹಾಗೂ ಮಿನರಲ್ ಗಳ ಕೊರತೆಯನ್ನು ನೀಗಿಸಿ ಅವರನ್ನು ಆರೋಗ್ಯದಿಂದಿಡುವ ಕೆಲಸ ಮಾಡುತ್ತದೆ. ಇವು ಆ್ಯಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಕಾರಣದಿಂದ ಅವರಲ್ಲಿ ಇಡೀ ದಿನ ಶಕ್ತಿ ಸ್ಛೂರ್ತಿ ತುಂಬುತ್ತವೆ.
ಅವುಗಳಿಂದ ಕರುಳು ಸ್ವಚ್ಛವಾಗುವುದರ ಜೊತೆಗೆ ದೇಹವನ್ನು ಡೀಟಾಕ್ಸ್ ಮಾಡುವ ಕೆಲಸ ಮಾಡುತ್ತವೆ. ಅದರಿಂದ ದೇಹ ಆಂತರಿಕವಾಗಿ ಆರೋಗ್ಯದಿಂದ ಇರುವುದರ ಮೂಲಕ ನಿಮ್ಮನ್ನು ರೋಗಗಳಿಂದ ಕಾಪಾಡುತ್ತದೆ. ಇವು ನಿಮ್ಮ ಅನಾರೋಗ್ಯಕರ ಸ್ನ್ಯಾಕ್ಸ್ ಚಟವನ್ನು ಬಿಡಿಸಿ, ನಿಮಗೆ ಇಡೀ ದಿನ ಹಗುರವಾಗಿರುವ ಅನುಭವ ದೊರಕಿಸಿಕೊಡುತ್ತವೆ.
ಇಮ್ಯುನಿಟಿ ಬೂಸ್ಟರ್ ಜೂಸ್ ಬಗ್ಗೆ ಅರಿಯಿರಿ :
ಟೊಮೇಟೊ ಜೂಸ್
ಟೊಮೇಟೊ ಲೈಕೊಪಿನ್ ಎಂಬ ಆ್ಯಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಕಾರಣದಿಂದ ರೋಗ ನಿರೋಧಕ ಶಕ್ತಿಯನ್ನು ಬೂಸ್ಟ್ ಮಾಡುವುದರ ಜೊತೆಗೆ, ನಿಮ್ಮ ಆರೋಗ್ಯಕ್ಕೂ ಚಮತ್ಕಾರಿ ರೀತಿಯಲ್ಲಿ ಕೆಲಸ ಮಾಡುತ್ತದೆ.