ಮ್ಯಾಂಗೋ ಗ್ರೇಪ್ಸ್ ಶಾರ್ಟ್

ಸಾಮಗ್ರಿ : 1 ಕಪ್‌ ಕಪ್ಪು ದ್ರಾಕ್ಷಿಯ ಹುಳಿಸಿಹಿ ಜೂಸ್‌, 1 ಸ್ಕೂಪ್‌ ಮ್ಯಾಂಗೋ ಐಸ್‌ ಕ್ರೀಂ, 2 ಚಮಚ ಪಿಸ್ತಾ ಚೂರು, ತುಸು ಕ್ರಶ್ಡ್ ಸ್ಟ್ರಾಬೆರಿ.

ವಿಧಾನ : ಮೊದಲು ಸಣ್ಣ ಗ್ಲಾಸುಗಳನ್ನು ಫ್ರಿಜ್‌ನಲ್ಲಿರಿಸಿ ಕೂಲ್ ‌ಮಾಡಿ. ಆವು ಕೋಲ್ಡ್ ಗ್ಲಾಸುಗಳಿಗೆ ಮೊದಲು ಕೋಲ್ಡ್ ಗ್ರೇಪ್ ಜೂಸ್‌ ಹಾಕಿಡಿ. ಇದರ ಮೇಲೆ ಮ್ಯಾಂಗೋ ಐಸ್‌ಕ್ರೀಂ ಹಾಕಿ, ಪಿಸ್ತಾ ಉದುರಿಸಿ. ಅದರ ಮೇಲೆ ಸ್ಟ್ರಾಬೆರಿ ಉದುರಿಸಿ ಸವಿಯಲು ಕೊಡಿ.

ಮಾವಿನ ಅನಾರ್ಕಲಿ

ಸಾಮಗ್ರಿ : 2 ಕಪ್‌ ಕೋಲ್ಡ್ ಹಾಲು, 2 ಚಮಚ ಫ್ರೆಶ್‌ ಕ್ರೀಂ, ಅರ್ಧ ಕಪ್‌ ದಾಳಿಂಬೆ ಜೂಸ್‌, 2 ಕಪ್‌ ಮಾಗಿದ ಮಾವಿನ ತಿರುಳು, 2 ಚಮಚ ಸಕ್ಕರೆ, 2-3 ಚಮಚ ಸೀಡ್ಲೆಸ್‌ ದಾಳಿಂಬೆ ಹರಳು, 3-4 ಚಮಚ ಮಿಕ್ಸ್ಡ್ ಫ್ರೂಟ್‌ ಜ್ಯಾಂ, 1 ಚಮಚ ಪಿಸ್ತಾ ಚೂರು.

ವಿಧಾನ : ಉದ್ದನೇ ಗ್ಲಾಸುಗಳ ಅಂಚಿಗೆ ಫ್ರೂಟ್‌ ಜ್ಯಾಂ ಸವರಿಡಿ. 10-15 ನಿಮಿಷ ಇದನ್ನು ಫ್ರಿಜ್‌ ನಲ್ಲಿರಿಸಿ. ಒಂದು ಬಟ್ಟಲಿಗೆ ಹಾಲು ಬಗ್ಗಿಸಿ, ಅದಕ್ಕೆ ದಾಳಿಂಬೆ ಜೂಸ್‌, ಅರ್ಧದಷ್ಟು ಮಾವಿನ ತಿರುಳು, ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಇದಕ್ಕೆ ಫ್ರೆಶ್‌ ಕ್ರೀಂ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ನಂತರ ಫ್ರಿಜ್‌ ನಿಂದ ಹೊರತೆಗೆದ ಗ್ಲಾಸುಗಳಿಗೆ ಸಮನಾಗಿ ಸುರಿಯಿರಿ. ಇದರ ಮೇಲೆ ಉಳಿದ ಮಾವಿನ ತಿರುಳು, ದಾಳಿಂಬೆ ಹರಳು, ಪಿಸ್ತಾ ಉದುರಿಸಿ ತಣ್ಣಗೆ ಸವಿಯಲು ಕೊಡಿ.

ಮ್ಯಾಂಗೋ ಸ್ಟ್ರಾಬೆರಿ ಶೇಕ್

ಸಾಮಗ್ರಿ : 4 ಕಪ್‌ ಮಾಗಿದ ಮಾವಿನ ತಿರುಳು, 1 ಕಪ್‌ ಸ್ಟ್ರಾಬೆರಿ ಸಿರಪ್‌, ಅರ್ಧ ಲೀ. ಗಟ್ಟಿ ಕೆನೆಭರಿತ ಹಾಲು, ಅರ್ಧ ಕಪ್‌ ಪುಡಿ ಸಕ್ಕರೆ, 3-4 ಚಮಚ ಪಿಸ್ತಾ ಚೂರು, 1 ಕಪ್‌ ಪುಡಿ ಐಸ್‌.

ವಿಧಾನ : ಒಂದು ಬಟ್ಟಲಿಗೆ ಮಾವಿನ ತಿರುಳು, ಕಾದಾರಿದ ಹಾಲು, ಪುಡಿ ಸಕ್ಕರೆ ಸೇರಿಸಿ ಕದಡಿಕೊಂಡು, ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಇದಕ್ಕೆ ಪುಡಿ ಐಸ್‌ ಹಾಕಿ ಮತ್ತೆ ಚಲಾಯಿಸಿ. ಈ ಮಿಶ್ರಣವನ್ನು ಗ್ಲಾಸುಗಳಿಗೆ ಅರ್ಧರ್ಧ ಬರುವಂತೆ ಬಗ್ಗಿಸಿ. ಇದಕ್ಕೆ 1-1 ಚಮಚ ಸ್ಟ್ರಾಬೆರಿ ಸಿರಪ್‌ ಬೆರೆಸಿರಿ. ಇದರ ಮೇಲೆ ಉಳಿದ ಮಾವಿನ ಮಿಶ್ರಣ ಸುರಿಯಿರಿ. ಇದರ ಮೇಲೆ ಪಿಸ್ತಾ ಉದುರಿಸಿ ಸವಿಯಲು ಕೊಡಿ.

ಕಿವೀ ಮ್ಯಾಂಗೋ ಲೆಮೋನೇಡ್

ಸಾಮಗ್ರಿ : 1 ದೊಡ್ಡ ಮಾಗಿದ ಮಲಗೋವಾ ಮಾವು, ಅರ್ಧ ಕಪ್‌ ಕಿವೀ ಕ್ರಶ್‌, 4 ಚಮಚ ಪುಡಿ ಸಕ್ಕರೆ, 1 ಚಮಚ ನಿಂಬೆರಸ, 1 ಕಪ್‌ ಪುಡಿ ಐಸ್‌.

ವಿಧಾನ : ಮಾವಿನ ಸಿಪ್ಪೆ ಹೆರೆದು ತಿರುಳು ಬೇರ್ಪಡಿಸಿ. ಇದರ ಸ್ವಲ್ಪ ಭಾಗ ಉಳಿಸಿಕೊಂಡು, ಉಳಿದಿದ್ದನ್ನು ಮಿಕ್ಸಿಗೆ ಹಾಕಿ. ಜೊತೆಗೆ ಅರ್ಧದಷ್ಟು ಸಕ್ಕರೆ, ಏಲಕ್ಕಿಪುಡಿ ಸೇರಿಸಿ ತಿರುವಿಕೊಳ್ಳಿ. ಇದನ್ನು ಒಂದು ಬಟ್ಟಲಿಗೆ ಸುರಿದು ಅದೇ ಮಿಕ್ಸಿಗೆ ಕಿವೀ ಕ್ರಶ್‌, ಉಳಿದ ಸಕ್ಕರೆ, ನಿಂಬೆರಸ, ತುಸು ಪುಡಿ ಐಸ್‌ ಬೆರೆಸಿ ನೀಟಾಗಿ ತಿರುವಿಕೊಳ್ಳಿ. ಈಗ ಉದ್ದನೇ ಗ್ಲಾಸುಗಳಿಗೆ ಮೊದಲು ಮಾವಿನ ಮಿಶ್ರಣ, ಇದರ ಮೇಲೆ ಕಿವೀ ಮಿಶ್ರಣ, ಅದರ ಮೇಲೆ ಪುಡಿ ಐಸ್‌..... ಹೀಗೆ ಮತ್ತೆ ರಿಪೀಟ್‌ ಮಾಡಿ. ಹೀಗೆ ಭರ್ತಿಯಾದ ಗ್ಲಾಸನ್ನು ಟ್ರೇನಲ್ಲಿರಿಸಿ, ಮನೆಗೆ ಬಂದ ಅತಿಥಿಗಳಿಗೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ