ಮೊಸರವಲಕ್ಕಿ
ಬೇಕಾಗುವ ಸಾಮಗ್ರಿ
ಮೀಡಿಯಂ ಅವಲಕ್ಕಿ ೧ ಕಪ್, ಮೊಸರು ೧ ಕಪ್, ಕಾಯಿಸಿ ಆರಿಸಿದ ಹಾಲು ೧/೪ ಕಪ್, ಸಕ್ಕರೆ ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ತುರಿದ ಶುಂಠಿ ೧/೨ ಚಮಚ, ಇಂಗು ಚಿಟಿಕೆ, ಸಾಸಿವೆ ೧/೨ ಚಮಚ, ಕರಿಬೇವು ಸ್ವಲ್ಪ, ಹುರಿದ ಗೋಡಂಬಿ - ದ್ರಾಕ್ಷಿ ೬-೮ .
ಮಾಡುವ ವಿಧಾನ
ಒಂದು ಬೌಲ್ ನಲ್ಲಿ ಅವಲಕ್ಕಿಯನ್ನು ೨ ನಿಮಿಷ ನೀರಿನಲ್ಲಿ ನೆನೆಸಿ, ಬಸಿದಿಟ್ಟುಕೊಳ್ಳಿ. ಅದಕ್ಕೆ ಮೊಸರು, ಹಾಲು , ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಡಿ. ನಂತರ ಒಂದು ಸಣ್ಣ ಬಾಂಡಲೆಯಲ್ಲಿ ಒಗ್ಗರಣೆಗೆ ೨ ಚಮಚ ಎಣ್ಣೆ , ಸಾಸಿವೆ ಸಿಡಿಸಿ ಉರಿ ಆರಿಸಿ. ಅದಕ್ಕೆ ತುರಿದ ಶುಂಠಿ, ಇಂಗು , ಕರಿಬೇವು, ಹಾಕಿ ಬಾಡಿಸಿ, ದ್ರಾಕ್ಷಿ ಗೋಡಂಬಿಯೊಂದಿಗೆ ಅವಲಕ್ಕಿ ಮಿಶ್ರಣದ ಜೊತೆ ಚೆನ್ನಾಗಿ ಬೆರೆಸಿಡಿ. ಮಿಶ್ರಣ ಗಟ್ಟಿ ಅನ್ನಿಸಿದರೆ ಅರ್ಧ ಸೌಟು ಮೊಸರು ಸೇರಿಸಿ ಕಲೆಸಿ.
- ಕಾವ್ಯಾ ಭಾರದ್ವಜ್

आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





