ನಾವು ಸಾಧಾರಣ ಮೊಸರನ್ನ, ರೊಟ್ಟಿ, ಚಪಾತಿ, ದೋಸೆ, ಇಡ್ಲಿ..... ಯಾವುದೇ ಇರಲಿ, ಉಪ್ಪಿನಕಾಯಿ ಇಲ್ಲದೆ ತಿನ್ನುವವರಲ್ಲ. ಇದು ನಮ್ಮ ದೈನಂದಿನ ಆಹಾರವನ್ನು ಇನ್ನಷ್ಟು ರುಚಿಕರವಾಗಿಸುತ್ತದೆ. ಸಾಮಾನ್ಯವಾಗಿ ನಾವು ಬಳಸುವ ಸಾಂಪ್ರದಾಯಿಕ ಉಪ್ಪಿನಕಾಯಿಯಲ್ಲಿ ಹೆಚ್ಚು ಉಪ್ಪು, ಮಸಾಲೆ, ಎಣ್ಣೆ ಇರುತ್ತದೆ. ಇದು ರುಚಿಯನ್ನೇನೋ ಹೆಚ್ಚಿಸುತ್ತದೆ, ಆದರೆ ಅದು ನಮ್ಮ ಆರೋಗ್ಯಕ್ಕೆ ಹಾನಿಯನ್ನೂ ಮಾಡುತ್ತದೆ. ಆದರೆ ಇಲ್ಲಿ ತಿಳಿಸಲಾಗಿರುವ ಹಲವು ಉಪ್ಪಿನಕಾಯಿಗಳು, ನಿಮ್ಮ ಆಹಾರದ ರುಚಿ ಮಾತ್ರ ಹೆಚ್ಚಿಸುವುದಲ್ಲದೆ, ನಿಮ್ಮ ಆರೋಗ್ಯಕ್ಕೂ ಪೂರಕ.

ತರಕಾರಿ ಉಪ್ಪಿನಕಾಯಿ

91EdPVzD99L._SL1500_

ಉಪ್ಪಿನಕಾಯಿ ಅಂದ ತಕ್ಷಣ ಕೇವಲ ಮಾವು, ನಿಂಬೆ, ನೆಲ್ಲಿ, ಮೆಣಸಿನಕಾಯಿ ಎಂದುಕೊಳ್ಳಬೇಡಿ. ಇವೆಲ್ಲ ಎಣ್ಣೆಯಲ್ಲಿ ತೇಲುವುದರಿಂದಲೇ ಉಪ್ಪಿನಕಾಯಿ ಆಗುವುದು ಅಂತಲೂ ಅಲ್ಲ. ಇವೆಲ್ಲ ನಮ್ಮ ಸಾಂಪ್ರದಾಯಿಕ ಉಪ್ಪಿನಕಾಯಿಗಳಲ್ಲಿ ಮಾಮೂಲಿ. ಎಲೆಕೋಸು, ಕ್ಯಾರೆಟ್‌, ಸೌತೆ, ಬೀನ್ಸ್, ಮೂಲಂಗಿ, ಟರ್ನಿಪ್‌, ಹೂಕೋಸು, ಸ್ವೀಟ್‌ ಆನಿಯನ್‌, ಬೀಟ್‌ ರೂಟ್‌, ಕ್ಯಾಪ್ಸಿಕಂ ಇತ್ಯಾದಿಗಳ ಫರ್ಮೆಂಟೆಡ್‌ ಪಿಕ್‌ ಬಲು ಚೆನ್ನಾಗಿರುತ್ತದೆ. ಇನ್ನು ಬಿಸಿ ಮಾಡುವುದರಿಂದ ಇದರ ವಿಟಮಿನ್ ಸಿಯ ಕೆಲವು ಹಂತದವರೆಗೂ ನಷ್ಟವಾಗುತ್ತದೆ, ಆದರೆ ವಿಟಮಿನ್ಸ್ ಸಿ‌ಯ ಲಾಭ ಸಿಗುತ್ತದೆ. ಜೊತೆಗೆ ತರಕಾರಿಯಲ್ಲಿನ ವಿಟಮಿನ್‌,  ಫೈಬರ್‌ ಸುರಕ್ಷಿತವಾಗಿರುತ್ತದೆ. ಫರ್ಮೆಂಟೇಶನ್‌ನಿಂದ ಉತ್ತಮ ಬ್ಯಾಕ್ಟೀರಿಯಾದ ಪ್ರಮಾಣ ಹೆಚ್ಚುತ್ತದೆ, ಕೆಟ್ಟ ಬ್ಯಾಕ್ಟೀರಿಯಾ ತಗ್ಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರೊಬಯೋಟಿಕ್‌ ರಸಾಯನಿಕ ಕ್ರಿಯೆ ತಂತಾನೇ ಜರುಗಿ, ಉತ್ತಮ ಬ್ಯಾಕ್ಟೀರಿಯಾ ಹೆಚ್ಚಲು ನೆರವಾಗುತ್ತದೆ.

beetroot

ಇಂಥ ಫರ್ಮೆಂಟೆ ಲೆಡ್‌ ವೆಜ್‌ ಪಿಕ್ಸ್‌ ಕೇಲ ಬ್ರೈನ್‌ (ಉಪ್ಪಿನ ನೀರು) ಯಾವ ವಿನಿಗರ್‌ನಿಂದ ತಯಾರಾಗುತ್ತದೆ. ಇದರಲ್ಲಿ ತರಕಾರಿ ಮಾತ್ರವಲ್ಲದೆ, ಮೇಲೆ ತಿಳಿಸಿದ ವಿಟಮಿನ್ಸ್, ಪ್ರೋಬಯೋಟಿಕ್ಸ್ ಸಹ ಲಭ್ಯ. ರುಚಿಗಾಗಿ ತುಸು ವಿಭಿನ್ನ ಮಸಾಲೆ, ಸೋಯಾಬೀಜ, ಎಳ್ಳೆಣ್ಣೆ, ಸಾಸುವೆ ಎಣ್ಣೆ, ಬೆಳ್ಳುಳ್ಳಿ, ಕರಿಮೆಣಸು, ಲವಂಗದೆಲೆ ಇತ್ಯಾದಿ ಬೆರೆಸಿಕೊಳ್ಳಿ.

ಇದರ ಲಾಭಗಳು

cucumbers2

ಆಹಾರದಲ್ಲಿ ತರಕಾರಿ ಹಾಜರ್‌: ಇದು ಕೇವಲ ಪಿಕ್‌ ಮಾತ್ರವಲ್ಲ, ಆಹಾರದಲ್ಲಿ ತರಕಾರಿ ಪ್ರಮಾಣ ಹೆಚ್ಚಿಸುತ್ತದೆ. ಇದರ ಅಲ್ಪ ಪ್ರಮಾಣದ ಸೇವನೆ, ಅರ್ಧ ಕಪ್‌ ತರಕಾರಿ ಪಲ್ಯ ತಿಂದುದಕ್ಕೆ ಸಮ!

ಜೋಮು ನಿಯಂತ್ರಣಕ್ಕೆ ಲಾಭಕರ : ಫರ್ಮೆಂಟೆಡ್‌ ಪಿಕ್‌ನ ಜೂಸ್‌ ಡೀಹೈಡ್ರೇಶನ್‌ ಮತ್ತು ಮಾಂಸಖಂಡಗಳು ಜೋಮು ಹಿಡಿದಾಗ ಬಹಳ ಲಾಭಕಾರಿ.

ಆ್ಯಂಟಿ ಆಕ್ಸೈಡ್‌ : 2014ರಲ್ಲಿ ಜಪಾನಿನಲ್ಲಿ ಇಲಿಗಳ ಮೇಲೆ ನಡೆಸಲಾದ ಪ್ರಯೋಗದಿಂದ, ಈ ಪಿಕ್‌ನ ಪ್ರೊಬಯೋಟಿಕ್ಸ್ ಸ್ಪೈನ್ ಕ್ಯಾನ್ಸರ್‌ನ ಚಿಕಿತ್ಸೆಗೆ ಸಹಕಾರಿ ಎಂದು ಸಾಬೀತಾಗಿದೆ. ವಿಜ್ಞಾನಿಗಳ ಪ್ರಕಾರ ಇಷ್ಟರಲ್ಲಿ ಇದು ಮಾನವರಿಗೂ ಲಾಭಕರ ಎಂದು ನಿರೂಪಿತವಾಗಲಿದೆ.

ರೋಗ ನಿವಾರಣೆಗೆ ಸಹಕಾರಿ : ಈ ಫರ್ಮೆಂಟೆಡ್‌ ಪಿಕ್‌ನಿಂದ ರಕ್ತದಲ್ಲಿನ ಶುಗರ್‌ ಲೆವೆಲ್ ‌ಹೆಚ್ಚದಂತೆ ನಿಯಂತ್ರಿಸಬಹುದಾಗಿದೆ. ಹೀಗಾಗಿ ಶುಗರ್‌ ಲೆವೆಲ್ ‌ಮೇಂಟೇನ್‌ ಮಾಡಲು ಇದು ಹಿತಕಾರಿ. ಇದರ ಹೊರತಾಗಿ ಇಂಥ ಉಪ್ಪಿನಕಾಯಿಯಲ್ಲಿನ ಗುಡ್ ಬ್ಯಾಕ್ಟೀರಿಯಾ ಪ್ರೋಬಯೋಟಿಕ್ಸ್ ನಮ್ಮ ಜೀರ್ಣಶಕ್ತಿ, ಚರ್ಮ, ಸೌಂದರ್ಯ, ಮೂಳೆ, ಕಂಗಳು, ಸ್ಟ್ರೋಕ್‌, ಹೃದ್ರೋಗಗಳಿಗೂ ಲಾಭಕರ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ