ಸೋರೆ ಸೋಯಾ ಪಕೋಡ

ಸಾಮಗ್ರಿ : 1-1 ಕಪ್‌ ಸೋರೆಕಾಯಿ ತುರಿ ಸೋಯಾ ಚೂರು, 1 ಕಪ್‌ ನೆನೆಸಿ ರುಬ್ಬಿಕೊಂಡ ಉದ್ದಿನ ಹಿಟ್ಟು, ಅರ್ಧರ್ಧ ಕಪ್ ಅಕ್ಕಿಹಿಟ್ಟು ಕಡಲೆಹಿಟ್ಟು ಹುರಿದ ರವೆ, ಒಂದಿಷ್ಟು ಹೆಚ್ಚಿದ ಹಸಿಮೆಣಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಖಾರ ಗರಂ ಮಸಾಲೆ ಅಮ್ಚೂರ್‌ ಪುಡಿ, ಅರ್ಧರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ 2 ಈರುಳ್ಳಿ, ಕರಿಯಲು ಎಣ್ಣೆ.

ವಿಧಾನ : 1-2 ತಾಸು ಸೋಯಾ ಚೂರನ್ನು ನೆನೆಹಾಕಿ, ನಂತರ ಲಘುವಾಗಿ ಬೇಯಿಸಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಪಕೋಡ ಮಿಶ್ರಣ ಕಲಸಬೇಕು. ಬಾಣಲೆಯಲ್ಲಿ ರೀಫೈಂಡ್‌ ಎಣ್ಣೆ ಬಿಸಿ ಮಾಡಿಕೊಂಡು, ಇದರಿಂದ ಚೂರು ಚೂರೇ ಮಿಶ್ರಣ ಹಾಕುತ್ತಾ, ಪಕೋಡ ಕರಿಯಿರಿ. ಬಿಸಿ ಇರುವಾಗಲೇ ಚಿತ್ರದಲ್ಲಿರುವಂತೆ ಅಲಂಕರಿಸಿ, ಪುದೀನಾ ಚಟ್ನಿ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಮಾವಿನ ಸ್ಪೆಷಲ್ ರಸಂ

ಸಾಮಗ್ರಿ : 4 ಮಾಗಿದ ಹುಳಿಮಾವು, 8-10 ಸಕ್ಕರೆ ಬಾದಾಮಿ (ಏಪ್ರಿಕಾಟ್‌), 10-15 ಬಾದಾಮಿ, 5-6 ಹಸಿ ಮೆಣಸಿನಕಾಯಿ, 3-4 ಲವಂಗದೆಲೆ, 3-4 ಏಲಕ್ಕಿ, 1-2 ಲವಂಗ, 1-2 ಚಕ್ಕೆ, 1-1 ಸಣ್ಣ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ ಪುಡಿ.

ವಿಧಾನ : ಮೊದಲು ಮಾವಿನ ಸಿಪ್ಪೆ ಹೆರೆದು ಸಣ್ಣ ಹೋಳುಗಳಾಗಿಸಿ. ಏಪ್ರಿಕಾಟ್‌ ಸುಲಿದಿಟ್ಟು ಮೊಸರಲ್ಲಿ ನೆನೆಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಲವಂಗದೆಲೆ, ಏಲಕ್ಕಿ, ಚಕ್ಕೆ, ಲವಂಗ ಹಾಕಿ ಚಟಪಟಾಯಿಸಿ. ಬಾದಾಮಿ ಸೇರಿಸಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮಾವಿನ ಹೋಳು, ಏಪ್ರಿಕಾಟ್‌, ಉದ್ದಕ್ಕೆ ಸೀಳಿದ ಹಸಿ ಮೆಣಸು ಸೇರಿಸಿ ಬಾಡಿಸಬೇಕು. ಆಮೇಲೆ ಉಪ್ಪು, ಖಾರ, ಅರಿಶಿನ ಸೇರಿಸಿ, 2 ಕಪ್‌ ನೀರು ಬೆರೆಸಿ  ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಿದರೆ ಮಾವಿನ ಸ್ಪೆಷಲ್ ರಸಂ ರೆಡಿ!

ಸೌತೆಯ ಸ್ಪೆಷಲ್ ಬಾಲ್ಸ್

ಸಾಮಗ್ರಿ : 1 ಸಣ್ಣ ಸೌತೇಕಾಯಿ, 2 ಕಪ್‌ ನೆನೆಸಿ ರುಬ್ಬಿಕೊಂಡ ಹೆಸರುಬೇಳೆ, ಬೇಯಿಸಿ ಮಸೆದ 2 ಆಲೂ, ಸಣ್ಣಗೆ ಹೆಚ್ಚಿದ 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಾಟ್‌ ಮಸಾಲ ಕರಿಯಲು ಎಣ್ಣೆ.

ವಿಧಾನ : ಸೌತೇಕಾಯಿಯನ್ನು ನೀಟಾಗಿ ತುರಿದಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಂಡು, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿಯಾಗಿ ಸವಿಯಲು ಕೊಡಿ.

ಚಪಾತಿ ಸಮೋಸಾ

ಸಾಮಗ್ರಿ : 1-1 ಕಪ್‌ ಬೇಯಿಸಿದ ಕಡಲೆಕಾಳು, ಹಸಿ ಬಟಾಣಿ, ಹೆಸರುಕಾಳು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ 1 ಕಪ್‌), ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಚಾಟ್ ಮಸಾಲ, ಇಂಗು, ಗರಂಮಸಾಲ, ಒಂದಿಷ್ಟು ಹೆಚ್ಚಿದ ಕೊ.ಸೊಪ್ರು, ಶುಂಠಿ, ಹಸಿ ಮೆಣಸು, 1 ಗಿಟುಕು ತೆಂಗಿನ ತುರಿ, ಚಿಟಿಕಿ ಅರಿಶಿನ, ಮೃದುವಾದ 8-10 ಚಪಾತಿಗಳು, ಕರಿಯಲು ಎಣ್ಣೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ