ಗುಂಡು ಬದನೆಯ ಗ್ರೇವಿ

ಸಾಮಗ್ರಿ : 500 ಗ್ರಾಂ ಗುಂಡು ಬದನೆ, 3-4 ಈರುಳ್ಳಿ, 4-5 ಹುಳಿ ಟೊಮೇಟೊ, 1-1 ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಅರ್ಧ ಚರ್ಮ ಹಸಿಮೆಣಸಿನ ಪೇಸ್ಟ್, 2 ಚಮಚ ಟೊಮೇಟೊ ಕೆಚಪ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ ಗರಂಮಸಾಲ, 1-1 ಸಣ್ಣ ಚಮಚ ಮೆಂತ್ಯ ಸೋಂಪು, ಜೀರಿಗೆ, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ, 2-3 ಚಿಟಕಿ ಅರಿಶಿನ.

ವಿಧಾನ : ಮೊದಲು ಚಿಕ್ಕ ಬಾಣಲೆಯಲ್ಲಿ ಜೀರಿಗೆ, ಸೋಂಪು, ಮೆಂತ್ಯ ಹುರಿದು ಪುಡಿ ಮಾಡಿ. ಇದಕ್ಕೆ ಗರಂಮಸಾಲ, ಖಾರ, ಅರಿಶಿನ ಬೆರೆಸಿಕೊಳ್ಳಿ. ಗುಂಡು ಬದನೆಗಳನ್ನು ಶುಚಿಗೊಳಿಸಿ, ತೊಟ್ಟು ಇರುವಂತೆಯೇ 4 ಸೀಳಾಗಿ ಕತ್ತರಿಸಿ, ಒಳಭಾಗಕ್ಕೆ ಈ ಮಸಾಲೆಯನ್ನು ಸಮನಾಗಿ ತುಂಬಿಸಿ, ನೆನೆಯಲು ಬಿಡಿ. ಗ್ರೇವಿ ತಯಾರಿಸಲು ಮೊದಲು ಈರುಳ್ಳಿ, ಟೊಮೇಟೋಗಳನ್ನು ಬೇರೆ ಬೇರೆಯಾಗಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಟ್ಟು, ಕರಿಬೇವು ಚಟಪಟಾಯಿಸಿ. ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಅದಾದ ಮೇಲೆ ಈರುಳ್ಳಿ, ನಂತರ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ನೆನೆದ ಬದನೆಗಳನ್ನು ಇಡಿಯಾಗಿ ಹಾಕಿ ಚೆನ್ನಾಗಿ ಬಾಡಿಸಬೇಕು. ಆಮೇಲೆ ಉಳಿದ ಮಸಾಲೆ, ಉಪ್ಪು, ಅರಿಶಿನ ಎಲ್ಲಾ ಹಾಕಿ ಕೈಯಾಡಿಸಿ. ಚೆನ್ನಾಗಿ ಬೆಂದಿದೆ ಎನಿಸಿದಾಗ ಕೆಳಗಿಳಿಸಿ ಪೂರಿ, ಚಪಾತಿ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಗಾರ್ಲಿಕ್ಪೂರಿ

ಸಾಮಗ್ರಿ : 250 ಗ್ರಾಂ ಗೋದಿಹಿಟ್ಟು, 50 ಗ್ರಾಂ ಮೈದಾ, 4 ಚಮಚ ಬೆಳ್ಳುಳ್ಳಿ ಪೇಸ್ಟ್, 2 ಚಿಟಕಿ ಅರಿಶಿನ, 1 ಚಮಚ ಬ್ಯಾಡಗಿ ಮೆಣಸಿನಪುಡಿ, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ, ತುಪ್ಪ, ಉಪ್ಪು.

ವಿಧಾನ : ಬೆಳ್ಳುಳ್ಳಿ ಪೇಸ್ಟ್ ಗೆ ತುಸು ಉಪ್ಪು, ಬ್ಯಾಡಗಿ ಮೆಣಸಿನಪುಡಿ ಹಾಕಿ ಬೆರೆಸಿಕೊಳ್ಳಿ. ಗೋದಿಹಿಟ್ಟಿಗೆ ಮೈದಾ, ಉಪ್ಪು, ಅರಿಶಿನ ಹಾಕಿ ತುಸು ನೀರು ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ. ನಾದಿಕೊಂಡು, ನೆನೆಯಲು ಬಿಡಿ. ಇದನ್ನು ಸಣ್ಣ ಉಂಡೆಗಳಾಗಿ ಲಟ್ಟಿಸಿ. ಮಧ್ಯೆ 1-1 ಚಮಚ ಬೆಳ್ಳುಳ್ಳಿ ಮಿಶ್ರಣ ಹರಡಿ, ಮಡಿಚಿ ಮತ್ತೆ ಲಟ್ಟಿಸಿ. ಹೀಗೆ ಎಲ್ಲ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು, ಬದನೆ ಗ್ರೇವಿ ಜೊತೆ ಸವಿಯಲು ಕೊಡಿ.

cookry-single-02

ಪೀನಟ್ಕರೀ

ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, 100 ಗ್ರಾಂ ಹುರಿದ ಕಡಲೆಬೀಜ, 2 ಚಮಚ ಬ್ಯಾಡಗಿ ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಧನಿಯಾಪುಡಿ, ಅಮ್ಚೂರ್‌ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಓಮ, ಎಳ್ಳು, 2 ಈರುಳ್ಳಿ, 3 ಟೊಮೇಟೊ, ತುಸು ಹೆಚ್ಚಿದ ಕೊ.ಸೊಪ್ಪು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ