ಕಿಕರ್ಫಿಶ್ ಸ್ಕ್ವೇರ್ಸ್
ಸಾಮಗ್ರಿ : 200 ಗ್ರಾಂ ತಾಜಾ ಮೀನು, 2-2 ಚಮಚ ಪೆರಿಪೆರಿ ಸಾಸ್ ಚಿಲೀ ಲೈವ್ ಮರ್ಮೀಡ್, 1 ಸಣ್ಣ ಸೌತೇಕಾಯಿ, ಗಾರ್ನಿಶಿಂಗ್‌ಗಾಗಿ ತುಸು ಥಾಯ್ ರೆಡ್ ಚಿಲೀ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೀನು ಶುಚಿಗೊಳಿಸಿ, ತುಂಡರಿಸಿ ಪೆರಿಪೆರಿ ಸಾಸ್‌ನಲ್ಲಿ ಮ್ಯಾರಿನೇಟ್‌ಗೊಳಿಸಿ (ಸವರಿ ನೆನೆಯಲು ಬಿಡಿ). ನಂತರ ಈ ತುಂಡುಗಳನ್ನು ಚಿತ್ರದಲ್ಲಿ ತೋರಿಸಿದಂತೆ ಉದ್ದದ ಕಡ್ಡಿಗೆ ಸಿಗಿಸಿಡಿ ಹಾಗೂ ಪ್ರೀಹೀಟೆಡ್ ಓವನ್‌ನಲ್ಲಿ ಚೆನ್ನಾಗಿ ಬೇಯುವವರೆಗೂ ಗ್ರಿಲ್ ಮಾಡಿ. ಎಲ್ಲಾ ಕಡೆ ತಿರುಗಿಸುತ್ತಾ 3-4 ನಿಮಿಷ ಬೇಯಿಸಿ. ಈ ಬಿಸಿ ಬಿಸಿ ಗ್ರಿಲ್ಡ್ ಫಿಶ್ ಮೇಲೆ ಕೊ.ಸೊಪ್ಪು ಉದುರಿಸಿ, ಥಾಯ್ ರೆಡ್ ಚಿಲೀ ಜೊತೆ ಸಿಂಗರಿಸಿ, ಚಿತ್ರದಲ್ಲಿರುವಂತೆ ಹೆಚ್ಚಿದ ಸೌತೆ, ಚಿಲೀ ೈವ್‌ಮರ್ಮೀಡ್ ಸೇರಿಸಿ ಸವಿಯಲು ಕೊಡಿ.
ಗ್ರಿಲ್ಡ್ ಝುಕೀನಿ ರೋಲ್ಸ್
ಸಾಮಗ್ರಿ : 150 ಗ್ರಾಂ ಝುಕೀನಿ (ಆಸ್ಟ್ರೇಲಿಯನ್ ಸೌತೆ), 200 ಗ್ರಾಂ ರಿಕೋಟಾ ಚೀಸ್, ಉದ್ದಕ್ಕೆ ಹೆಚ್ಚಿದ ಒಂದಿಷ್ಟು ಗ್ರೀನ್‌ಯೆಲ್ಲೋ ರೆಡ್ ಕ್ಯಾಪ್ಸಿಕಂ, 10-12 ತುಳಸಿ ಎಲೆಗಳು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು ಓರಿಗ್ಯಾನೋ, ಹರಿಸಾ ಸಾಸ್ (ಹಾಟ್‌ಚಿಲೀ ಪೆಪ್ಪರ್ ಪೇಸ್ಟ್).
ವಿಧಾನ : ಮಧ್ಯಮ ಉರಿಯಲ್ಲಿ ಗ್ರಿಲ್ ಪ್ಲೇಟ್‌ನ್ನು ಪ್ರೀಹೀಟ್ ಮಾಡಿ. ಚಿತ್ರದಲ್ಲಿರುವಂತೆ ಝುಕೀನಿಯನ್ನು ಉದ್ದುದ್ದಕ್ಕೆ ತುಂಡರಿಸಿ, ಒಳಭಾಗ ಟೊಳ್ಳಾಗಿಸಿ, ಉಪ್ಪು ಮೆಣಸು ಸವರಿಡಿ. ನಂತರ ಅದು ಮೃದುವಾಗುವವರೆಗೂ ಗ್ರಿಲ್ ಮಾಡಬೇಕು. ಒಂದು ಬಟ್ಟಲಿಗೆ ರಿಕೋಟಾ ಚೀಸ್, 3 ಬಗೆಯ ಕ್ಯಾಪ್ಸಿಕಂ, ಓರಿಗ್ಯಾನೋ, ತುಳಸಿ ಎಲೆಗಳು ಇತ್ಯಾದಿ ಬೆರೆಸಿಕೊಳ್ಳಿ. ಇನ್ನು ಟೊಳ್ಳಾದ ಭಾಗಕ್ಕೆ ತುಂಬಿಸಿ. ಅಡಿ ಭಾಗಕ್ಕೆ ಬಿಲ್ಲೇ ಕತ್ತರಿಸಿ ಕೂರಿಸಿ. ಇದನ್ನು ಮತ್ತೆ ಗ್ರಿಲ್ ಮಾಡಿ, ಹೊರತೆಗೆದು, ಹರೀಸಾ ಸಾಸ್ ಹಾಕಿ ಸವಿಯಲು ಕೊಡಿ.
ಟಾರ್ಟಿಲಾ ಚಿಪ್ಸ್
ಸಾಮಗ್ರಿ : 150 ಗ್ರಾಂ ಟಾರ್ಟಿಲಾ ಚಿಪ್ಸ್ (ರೆಡಿಮೇಡ್ ಲಭ್ಯ), ಅರ್ಧ ಕಪ್ ಬೆಂದ ರಾಜ್ಮಾ ಕಾಳು, ಅದರಲ್ಲಿ ಅರ್ಧ ಭಾಗ ಟೊಮೇಟೊ ಸಾಸ್, 40 ಗ್ರಾಂ ಚೆಡಾರ್ ಚೀಸ್, 30 ಗ್ರಾಂ ಕ್ರೀಂ, 50 ಗ್ರಾಂ ಹೆಚ್ಚಿದ ಚೊರಿಜೊಸ್ ಸಾಸೇಜ್, 10 ಗ್ರಾಂ ಗ್ರೀನ್‌ಚಿಮಿಚುರಿ ಸಾಸ್, ಅಲಂಕರಿಸಲು 12 ಹಸಿ ಕೆಂಪು ಮೆಣಸಿನಕಾಯಿ.
ವಿಧಾನ : ಒಂದು ಪ್ಲೇಟ್‌ನಲ್ಲಿ ಮೊದಲು ಒಂದು ಪದರ ಬೆಂದ ರಾಜ್ಮಾ ಹರಡಿಕೊಳ್ಳಿ. ಅದರ ಮೇಲೆ ಮತ್ತೊಂದು ಪದರ ಟಾರ್ಟಿಲಾ ಚಿಪ್ಸ್ ಬರಲಿ. ಇದರ ಮೇಲೆ 1-1 ಪದರ ಮತ್ತೆ ರಾಜ್ಮಾ, ನಂತರ ಚೆಡಾರ್ ಚೀಸ್ ಬರಲಿ. ಇದರ ಮೇಲೆ ಮತ್ತೊಮ್ಮೆ ಟಾರ್ಟಿಲಾ ಚಿಪ್ಸ್ ಹರಡಿರಿ. ಕೊನೆಯಲ್ಲಿ ಮೇಲಿನ ಪದರವಾಗಿ ಮತ್ತೊಮ್ಮೆ ಚೆಡಾರ್ ಚೀಸ್ ಬರಲಿ. ಆಮೇಲೆ ಇದನ್ನು ಬೇಕ್‌ಮಾಡಿ. ಬೇಕ್ ಮಾಡಿದ ನಂತರ, ಹಸಿ ಕೆಂಪು ಮೆಣಸಿನಕಾಯಿ, ಕೊ.ಸೊಪ್ಪಿನಿಂದ ಅಲಂಕರಿಸಿ, ಕ್ರೀಂ ಸಾಸ್ ಜೊತೆ ಸವಿಯಲು ಕೊಡಿ.