``ಕೆಲವು ತಿಂಗಳುಗಳ ಹಿಂದೆ ನನ್ನ ಸ್ನೇಹಿತರೊಬ್ಬರು ತಮ್ಮ ಮಗ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಬೇಕೆನ್ನುತ್ತಾನೆ. ಆದರೆ ನಾನು ಆ ಕೋರ್ಸ್‌ಗೆ ಅವನನ್ನು ಸೇರಿಸುವುದಿಲ್ಲ,'' ಎಂದರು ನನ್ನ ಸ್ನೇಹಿತೆ.
ನಾನು ``ಏಕೆ?'' ಎಂದು ಅವರನ್ನು ಕೇಳಿದೆ.
``ನಾನು ನನ್ನ ಮಗನನ್ನು ಮಾಂಸ ಹಾಗೂ ಮೊಟ್ಟೆಯ ಜೊತೆ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ,'' ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದರು.
ಚಂದ್ರಶೇಖರ್ ಒಬ್ಬ ಚಾರ್ಟರ್ಡ್ ಅಕೌಂಟಂಟ್. ಸಸ್ಯಾಹಾರಿಗಳಿಗೆ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುವುದು ಅಸಾಧ್ಯ. ಏಕೆಂದರೆ ಅಲ್ಲಿ ಪ್ರಾಣಿಗಳನ್ನು ಕತ್ತರಿಸುವುದು ಹಾಗೂ ಬೇಯಿಸುವುದನ್ನು ಕಲಿಯಲೇಬೇಕಾಗುತ್ತದೆ. ಇದೇ ನಿಟ್ಟಿನಲ್ಲಿ ಚಂದ್ರಶೇಖರ್‌ರವರು ಮಂತ್ರಿಗಳಿಗೆ, ಅಧಿಕಾರಿಗಳಿಗೆ ಹಾಗೂ ತಮ್ಮ ಸಮಾಜದ ಮುಖಂಡರಿಗೆ ಪತ್ರ ಬರೆಯಲು ಶುರು ಮಾಡಿದರು. ಅವರು ದೆಹಲಿಗೂ ಕೂಡ ಆಗಮಿಸಿ ಅವರಿವರನ್ನು ಕಂಡು ತಮ್ಮ ಅನಿಸಿಕೆ ತಿಳಿಸಿದರು.
ಕೆಲವರಿಗೆ ಸಸ್ಯಾಹಾರವನ್ನಷ್ಟೇ ಸೇವಿಸಬೇಕಾಗಿರುತ್ತದೆ. ಅಂತಹ ವರ್ಗದವರಿಗಾಗಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಮಾಂಸ ಬೇಯಿಸುವುದನ್ನು ಕಲಿಯುವ ಅಗತ್ಯವಾದರೂ ಏನಿದೆ? ಅವರಿಗೆ ಜೀವನವಿಡೀ ಸಸ್ಯಾಹಾರವನ್ನಷ್ಟೇ ತಯಾರಿಸಬೇಕು. ಇದು ಮಾರುಕಟ್ಟೆಯ ಬೇಡಿಕೆ, ಕುಟುಂಬದವರ ಇಚ್ಛೆ ಹಾಗೂ ಕೌಟುಂಬಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ನಾನು ಸ್ವತಃ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡಿರಲಿಲ್ಲ. ಏಕೆಂದರೆ ಅಲ್ಲಿ ಪ್ರಾಣಿಗಳ ದೇಹವನ್ನು ಕತ್ತರಿಸಬೇಕಾಗಿತ್ತು.
ವೈವಿಧ್ಯತೆ ಇರಲಿ
ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ 40ಕ್ಕೂ ಹೆಚ್ಚು ವಿಷಯಗಳಿರುತ್ತವೆ. ಅದರಲ್ಲಿ ಕಾನೂನು, ಫ್ರಂಟ್ ಆಫೀಸ್ ಉಸ್ತುವಾರಿ, ಟಿಕೆಟಿಂಗ್, ವಾಸಸ್ಥಳದ ವ್ಯವಸ್ಥೆ, ಕೋಣೆಗಳ ಬುಕಿಂಗ್, ಮಾಂಸಾಹಾರ ತಿಂಡಿಗಳ ತಯಾರಿಕೆ ಕಲಿಯುವುದನ್ನು ಕಡ್ಡಾಯಗೊಳಿಸಿ ಇತರೆ ಕ್ಷೇತ್ರಗಳ ಮಾಹಿತಿಯಿಂದ ವಂಚಿತರನ್ನಾಗಿ ಮಾಡಿದೆ.
ಈ ಕಡ್ಡಾಯದ ನೀತಿ ಅನುಸರಿಸುತ್ತ ನಾವು ನಮ್ಮ ಸಸ್ಯಾಹಾರಿ ಪಾಕಕಲೆಯನ್ನು ವಿಶ್ವಾದ್ಯಂತ ಪಸರಿಸುವುದನ್ನು ತಡೆಯುತ್ತಿದ್ದೇವೆ. ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಹೋಗುವವರೆಲ್ಲರು ಮಾಂಸಾಹಾರಿಗಳಾಗಿ ಇರುತ್ತಾರೆ. ಹೀಗಾಗಿ ಸಸ್ಯಾಹಾರಿಗಳ ನಿಯಮಗಳು ಹಾಗೂ ಸಂವೇದನಾಶೀಲತೆಯ ಬಗ್ಗೆ ಅವರಿಗೆ ಅರಿವು ಇರಲು ಹೇಗೆ ಸಾಧ್ಯ? ಅವರು ಸಸ್ಯಾಹಾರ ತಿಂಡಿಗಳಲ್ಲಿ ಮಾಂಸಾಹಾರ ಅದರಲ್ಲೂ ವಿಶೇಷವಾಗಿ ಮೊಟ್ಟೆ ಉಪಯೋಗಿಸಲು ಹಿಂದೇಟು ಹಾಕುವುದಿಲ್ಲ. ಒಂದುವೇಳೆ ಸಸ್ಯಾಹಾರಿಗಳಿಗೂ ಈ ಕೋರ್ಸ್ ಸೇರುವ ಅವಕಾಶ ಸಿಕ್ಕರೆ ಗೃಹಿಣಿಯರಿಗೆ ಇದು ಬಹಳ ಇಷ್ಟ ಆಗಬಹುದು. ಅವರು ಅನಿಮಲ್ ಫ್ಯಾಟ್‌ನಲ್ಲಿ ಸಸ್ಯಾಹಾರಿ ಪದಾರ್ಥವನ್ನು ಕರಿಯಲು ಕೂಡ ಹಿಂದೇಟು ಹಾಕುತ್ತಾರೆ, ಅಷ್ಟು ಮುಜುಗರ. ಸಸ್ಯಾಹಾರಿ ಆಂದೋಲನ ಈಗ ವಿಶ್ವಾದ್ಯಂತ ಭರದಿಂದ ಪಸರಿಸುತ್ತಿದೆ. ಈಗ ಸಾವಿರಾರು ಹೋಟೆಲ್‌ಗಳು ಕೇವಲ ಸಸ್ಯಾಹಾರಿಗಳಿಗಾಗಿ ಮಾತ್ರ ತೆರೆಯುತ್ತಿವೆ. ಸಸ್ಯಾಹಾರಿ ಅಡುಗೆ ಕಲಿತು ಅವರು ಇಂತಹ ಹೋಟೆಲ್‌ಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಬಹುದಾಗಿದೆ.
ನಮ್ಮ ದೇಶದಲ್ಲಿ ಬಹಳಷ್ಟು ಉತ್ಸವ, ಸಮಾರಂಭ, ಮದುವೆಗಳಲ್ಲಿ ಹಾಗೂ ಇತರೆ ಕೆಲವು ಕಾರ್ಯಕ್ರಮಗಳಲ್ಲಿ ಕೇವಲ ಸಸ್ಯಾಹಾರವನ್ನಷ್ಟೇ ಕೊಡಲಾಗುತ್ತದೆ. ಅಲ್ಲಿ ಸೂಕ್ತ ತರಬೇತಿ ಪಡೆದ ಶೆಫ್‌ಗಳ ಅಗತ್ಯ ಇರುತ್ತದೆ.
ಷರತ್ತುಗಳು ಇರಬಾರದು
ಸಸ್ಯಾಹಾರಿಗಳಿಗೆ ಷರತ್ತು ರಹಿತವಾಗಿ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರವೇಶ ಸಿಕ್ಕರೆ ಅವರಿಗೆ ಒಳ್ಳೆಯ ತರಬೇತಿ ಸಿಗುತ್ತದೆ. ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರು ಈ ಕ್ಷೇತ್ರದ ಕಡೆ ಒಲವು ತೋರಿಸುವುದಿಲ್ಲ. ಡಾಬಾಗಳಲ್ಲಿ ಹಾಗೂ ಚಿಕ್ಕಪುಟ್ಟ ಹೋಟೆಲ್‌ಗಳಲ್ಲಿ ಕೇವಲ ಸಸ್ಯಾಹಾರಿ ಊಟತಿಂಡಿಯನ್ನಷ್ಟೇ ನೀಡಲಾಗುತ್ತದೆ. ಆದರೆ ಕೆಲವು ಹೋಟೆಲ್‌ಗಳಲ್ಲಿ ಅದರ ಗುಣಮಟ್ಟ ಸರಿ ಇರುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಅಲ್ಲಿ ತರಬೇತಿ ಪಡೆದವರ ಕೊರತೆ ಇರುತ್ತದೆ. ಒಳ್ಳೆಯ ಗುಣಮಟ್ಟದ, ಅಗ್ಗದ ಸಾಕಷ್ಟು ಸ್ವಚ್ಛತೆಯ ವಾತಾವರಣದಲ್ಲಿ ತಿನ್ನುವ ಜಾಗಗಳ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಏಕೆಂದರೆ ನಾನು ಸಾಕಷ್ಟು ಸುತ್ತಾಡುತ್ತಿರುತ್ತೇನೆ.