ಕುಕೀ ಕ್ರೀಂ ಮಿಲ್ಕ್ ಶೇಕ್

ಸಾಮಗ್ರಿ : ಅರ್ಧ ಕಪ್‌ ಮೊಸರು, 1 ಕಪ್‌ಹಾಲು, 2 ಚಮಚ ಕೋಕೋ ಪುಡಿ, ಅಗತ್ಯವಿದ್ದಷ್ಟು ಪುಡಿ ಸಕ್ಕರೆ, ಐಸ್‌ ಕ್ಯೂಬ್ಸ್, ಓರಿಯೋ ಕುಕೀಸ್‌.

ವಿಧಾನ : ಓರಿಯೋ ಕುಕೀಸ್‌ ಕ್ರಶ್‌ ಮಾಡಿಡಿ. ಉಳಿದೆಲ್ಲ ಸಾಮಗ್ರಿಗಳನ್ನು ಬ್ಲೆಂಡರ್‌ನಲ್ಲಿ ಗಾಢ ಕ್ರೀಂ ಆಗುವಂತೆ ಬ್ಲೆಂಡ್‌ ಮಾಡಿ, ಮೇಲೆ ಓರಿಯೋ ಉದುರಿಸಿ ಸರ್ವ್ ಮಾಡಿ.

ಕ್ಯಾರೆಟ್‌ಮಿಲ್ಕ್ ಶೇಕ್‌

ಸಾಮಗ್ರಿ : 1 ಕಪ್‌ ಹಾಲು, ನೆನೆಸಿದ 4-5 ಬಾದಾಮಿ, ಹೆಚ್ಚಿದ 1-2 ಕ್ಯಾರೆಟ್‌, ಅಗತ್ಯವಿದ್ದಷ್ಟು ಸಕ್ಕರೆ, ಪುಡಿ ಐಸ್‌, ಅಲಂಕರಿಸಲು ಚಾಕಲೇಟ್‌ ಸಿರಪ್‌.

ವಿಧಾನ : ಹಾಲಿಗೆ ನೆನೆದ ಬಾದಾಮಿ, ಕ್ಯಾರೆಟ್‌ ತುಂಡು ಹಾಕಿ ಲಘುವಾಗಿ ಬೇಯಿಸಿ. ಸಕ್ಕರೆ ಹಾಕಿ ಕದಡಿಕೊಳ್ಳಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ ಮಿಕ್ಸರ್‌ನಲ್ಲಿ ಬ್ಲೆಂಡ್‌ ಮಾಡಿ. ಇದನ್ನು ಗ್ಲಾಸಿಗೆ ಬಗ್ಗಿಸಿ ಚಾಕಲೇಟ್‌ ಸಿರಪ್‌ನಿಂದ ಅಲಂಕರಿಸಿ ಸರ್ವ್ ಮಾಡಿ.

ಬ್ಲೂಬೆರಿ ಸೋಯಾ ಶೇಕ್

ಸಾಮಗ್ರಿ :  ಅರ್ಧ ಕಪ್‌ ಮೊಸರು, 1 ಕಪ್‌ಸೋಯಾ ಮಿಲ್ಕ್, ಅರ್ಧ ಕಪ್‌ ಬೀಜರಹಿತ ನೇರಳೆ ಹಣ್ಣು, ಒಂದಿಷ್ಟು ಸಕ್ಕರೆ, ಐಸ್‌ಕ್ಯೂಬ್‌.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಿಕೊಂಡು ಗ್ಲಾಸುಗಳಿಗೆ ತುಂಬಿಸಿ ಸವಿಯಲು ಕೊಡಿ.

ಆ್ಯಪಲ್ ಸ್ಪೈಸಿ ಶೇಕ್

ಸಾಮಗ್ರಿ : 1 ಕಪ್‌ ತುಂಡರಿಸಿದ ಸೇಬು, ಅರ್ಧ ಸಣ್ಣ ಚಮಚ ದಾಲ್ಚಿನ್ನಿ ಪುಡಿ, 1 ಕಪ್‌ ಹಾಲು, 1-2 ಸ್ಕೂಪ್‌ ಐಸ್‌ಕ್ರೀಂ, ತುಸು ಪುಡಿ ಐಸ್‌.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಿಕೊಂಡು ಗ್ಲಾಸುಗಳಿಗೆ ತುಂಬಿಸಿ ಸವಿಯಲು ಕೊಡಿ.

ಗುಡ್‌ಮಾರ್ನಿಂಗ್‌ಮಿಲ್ಕ್ ಶೇಕ್‌

ಸಾಮಗ್ರಿ : 1-2 ಮಾಗಿದ ಬಾಳೆಹಣ್ಣು, 5-6 ಸ್ಟ್ರಾಬೆರಿ, 1 ಕಪ್‌ ಗಟ್ಟಿ ಹಾಲು, ಅಗತ್ಯವಿದ್ದಷ್ಟು ಸಕ್ಕರೆ, ಜೇನುತುಪ್ಪ, ಓಟ್ಸ್, ತುಸು ಪುಡಿ ಐಸ್‌.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಿಕೊಂಡು ಗ್ಲಾಸುಗಳಿಗೆ ತುಂಬಿಸಿ ಸವಿಯಲು ಕೊಡಿ.

ಶ್ಯಾಮ್ ರಾಕ್‌ಮಿಲ್ಕ್ ಶೇಕ್‌

ಸಾಮಗ್ರಿ : 1 ಕಪ್‌ ಹಾಲು, 2-3 ಸ್ಕೂಪ್‌ ವೆನಿಲಾ ಐಸ್‌ಕ್ರೀಂ, ತುಸು ಪುದೀನಾ, ಪುಡಿ ಐಸ್‌, ಅಲಂಕರಿಸಲು ಚಾಕಿ ಚಿಪ್ಸ್, ವಿಪ್ಡ್ ಕ್ರೀಂ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಿಕೊಂಡು ಗ್ಲಾಸುಗಳಿಗೆ ತುಂಬಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ