ವಿಶ್ವದಲ್ಲಿ ಸುಮಾರು 30 ಕೋಟಿ ಜನರು ಉಬ್ಬಸ, ದಮ್ಮು , ಆಸ್ತಮಾ ಎಂದೆಲ್ಲ ಕರೆಯಲ್ಪಡುವ ರೋಗದಿಂದ ಬಳಲುತ್ತಿದ್ದಾರೆ. ಈ ರೋಗ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕವಾಗಿ ಬಹಳ ತೊಂದರೆ ಉಂಟು ಮಾಡುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ಮಕ್ಕಳು ಕೂಡ ಈ ರೋಗಕ್ಕೆ ಬಹುವೇಗದಲ್ಲಿ ಸಿಲುಕುತ್ತಿದ್ದಾರೆ.

ನಿಯಂತ್ರಣ ಅಸಾಧ್ಯವೇನಲ್ಲ : ಕೆಲವು ಸಂಗತಿಗಳ ಬಗ್ಗೆ ವಿಶೇಷ ಗಮನಕೊಟ್ಟರೆ ನಿಸ್ಸಂದೇಹವಾಗಿಯೂ ಆಸ್ತಮಾ ನಿಯಂತ್ರಣ ಸಾಧ್ಯವಿದೆ.

ಸಮೀಕ್ಷೆಯಿಂದ ತಿಳಿದು ಬಂದಂತೆ, ಆಸ್ತಮಾ ಹೆಚ್ಚಲು 3 ಪ್ರಮುಖ ಕಾರಣಗಳೆಂದರೆ ಮಾಲಿನ್ಯ ಸ್ಟ್ರೆಸ್‌ ಅರ್ಥಾತ್‌ ಒತ್ತಡ ಜೀವನಶೈಲಿ ಮಾಲಿನ್ಯ ಹಲವು ಪ್ರಕಾರದ್ದಾಗಿದೆ. ಅದರಲ್ಲಿ ವಾಹನಗಳಿಂದ ಹೊರಬರುವ ಹೊಗೆ, ಕಾರ್ಖಾನೆಯ ಮಾಲಿನ್ಯ, ಸ್ವಚ್ಛತೆ ಕಾಪಾಡದೇ ಇರುವುದು ಮುಖ್ಯ ಕಾರಣ. ಗ್ರಾಮಗಳಿಗೆ ಹೋಲಿಸಿದರೆ, ನಗರಪ್ರದೇಶಗಳಲ್ಲೇ ಆಸ್ತಮಾ ರೋಗಿಗಳ ಪ್ರಮಾಣ ಹೆಚ್ಚಿಗೆ ಇದೆ.

ಎರಡನೇ ಮಹತ್ವದ ಕಾರಣವೆಂದರೆ ಒತ್ತಡ. ಇದು ಇಂದಿನ ತಲೆಮಾರಿನವರಲ್ಲಿ ಅಧಿಕವಾಗಿದೆ. ದೊಡ್ಡವರೇ ಇರಲಿ, ಚಿಕ್ಕಮಕ್ಕಳೇ ಇರಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ಒತ್ತಡಕ್ಕೆ ಸಿಲುಕುತ್ತಿದ್ದಾರೆ. ದೊಡ್ಡವರಲ್ಲಿ ಕೆಲಸದ ಒತ್ತಡ ಅಧಿಕವಾಗಿದೆ. ಅದೇ ಮಕ್ಕಳಲ್ಲಿ ಹೆಚ್ಚು ಅಂಕ ಪಡೆದುಕೊಳ್ಳುವ ಬಗ್ಗೆ ಹಾಗೂ ಯುವಕರಲ್ಲಿ ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕೆಂಬ ಬಗ್ಗೆ ಸದಾ ಟೆನ್ಶನ್‌ ಇರುತ್ತದೆ.

ಇಂದಿನ ಯುವಕರು ಶಾಲೆ, ಕಾಲೇಜು, ಮನೆ, ಕಂಪ್ಯೂಟರ್‌ ಹಾಗೂ ಎ.ಸಿ. ಕೋಣೆಯ ಮಟ್ಟಿಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಇಂದಿನ ಜೀವನಶೈಲಿ ಬಹಳಷ್ಟು ಬದಲಾಗಿದೆ. ಊಟ ತಿಂಡಿಯ ಅಭ್ಯಾಸಗಳು ದಾರಿತಪ್ಪಿವೆ. ಜನರು ಆರೋಗ್ಯಕರ ಆಹಾರಗಳಿಗಿಂತ ಹೆಚ್ಚಾಗಿ ಜಂಕ್‌ ಫುಡ್‌ಗಳನ್ನು ಹೆಚ್ಚು ಹೆಚ್ಚು ಅವಲಂಬಿಸುತ್ತಿದ್ದಾರೆ.

ಆಸ್ತಮಾಕ್ಕೆ ಸಾಕಷ್ಟು ಔಷಧಿಗಳಿವೆ. ಆದರೆ ಅವುಗಳ ಅಡ್ಡಪರಿಣಾಮಗಳು ಕೂಡ ಸಾಕಷ್ಟು ಹೆಚ್ಚುತ್ತಿವೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಗೆ ಈ ರೋಗ ಅಧಿಕವಾಗಿ ಬಾಧಿಸುತ್ತಿದೆ.

ಇದರ ಮುಖ್ಯ ಕಾರಣದ ಬಗ್ಗೆ ಡಾ. ನಿತಿನ್‌ ಹೀಗೆ ಹೇಳುತ್ತಾರೆ, ``ಮಹಿಳೆಯರಲ್ಲಿ ಹಾರ್ಮೋನು ಬದಲಾವಣೆ ಹಾಗೂ ದೈಹಿಕ ರಚನೆ ಹೇಗಿರುತ್ತದೆಂದರೆ, ಅವರು ಇದರ ಕಪಿಮುಷ್ಟಿಗೆ ಸಿಲುಕುತ್ತಾರೆ. ಅಂದಹಾಗೆ ಅವರ ಶ್ವಾಸನಾಳಗಳು ಪುರುಷರ ಶ್ವಾಸನಾಳಗಳಿಗಿಂತ ತೆಳ್ಳಗಿರುತ್ತವೆ. ಅವು ಯಾವುದೇ ಬಗೆಯ ಅಲರ್ಜಿಯಿಂದ ಬಹುಬೇಗ ಸಂಕುಚಿತಗೊಳ್ಳುತ್ತವೆ.

ಎಚ್ಚರಿಕೆಯಿಂದ ಇರುವುದು ಅತ್ಯವಶ್ಯ

ಆಸ್ತಮಾವನ್ನು 2 ಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಚೈಲ್ಡ್ ಆಸ್ತಮಾ ಇದು 1 ರಿಂದ 15 ವರ್ಷದ ತನಕ ಇರುತ್ತದೆ. ಇದರಲ್ಲಿ ಶೇ.33ರಷ್ಟು ಮಕ್ಕಳು 15 ವರ್ಷ ತಲುಪುವ ಹೊತ್ತಿಗೆ ಸರಿಹೋಗುತ್ತಾರೆ. ಇನ್ನು ಶೇ.33ರಷ್ಟು ಮಕ್ಕಳು ಜೀವನವಿಡೀ ಆಸ್ತಮಾದೊಂದಿಗೆ ಬದುಕಬೇಕಾಗುತ್ತದೆ. ಉಳಿದ ಶೇ.34ರಷ್ಟು ಮಕ್ಕಳಿಗೆ 18 ವರ್ಷದ ಬಳಿಕ ಇದು ಹೆಚ್ಚು ತೊಂದರೆಯಾಗಿ ಪರಿಣಮಿಸುತ್ತದೆ.

ಇತ್ತೀಚೆಗೆ ಆಸ್ಪತ್ರೆಯಲ್ಲಿ ಲಂಗ್ಸ್ ಫಂಕ್ಶನ್‌ ಟೆಸ್ಟ್ ಮಾಡಿಸಲಾಗುತ್ತದೆ. ಅದರಿಂದ ಆಸ್ತಮಾದ ಮಟ್ಟ ಗೊತ್ತಾಗುತ್ತದೆ. ಅದು ಮೈಲ್ಡ್, ಮಾಡರೇಟ್‌ ಮತ್ತು ಸಿವಿಯರ್‌ ಹೀಗೆ 3 ಪ್ರಕಾರಗಳಲ್ಲಿರಬಹುದು. ಹೀಗಾಗಿ ಯಾವುದೇ ಸಂದೇಹ ಉಂಟಾದಾಗ ನೀವು ಇದರ ಟೆಸ್ಟ್ ಮಾಡಿಸಬಹುದು, ಅದು ಹೆಚ್ಚು ಖರ್ಚಿನದ್ದೇನಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ