ಶರ್ಮಿಳಾಗೆ ಅತ್ತೆಯ ಹೊಗಳಿಕೆ ಇಷ್ಟವಾಗುತ್ತದೆ. ತನ್ನ ಸೊಸೆಗೆ ಮನೆಯಲ್ಲಿದ್ದುಕೊಂಡು ಕೆಲಸ ಮಾಡುವುದು ಬಹಳ ಹಿಡಿಸುತ್ತದೆ ಎಂದು ಅತ್ತೆ ಅವರಿವರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಶರ್ಮಿಳಾ ಸಂಜೆ ಪತಿಯ ಜೊತೆ ಸುತ್ತಾಡಲು ಹೋಗುತ್ತಾಳೆ. ಆದರೆ ಈಚೆಗೆ ಆಕೆ ಖುಷಿಯಿಂದ ಇರುವ ಬದಲು ಅನಾರೋಗ್ಯಪೀಡಿತಳಂತೆ ಕಂಡುಬರತೊಡಗಿದಳು. ಸ್ಮಿತಾಗೆ ಸಾಕಷ್ಟು ಸೌಂದರ್ಯಪ್ರಜ್ಞೆ ಇದೆ. ತ್ವಚೆಯ ಕುರಿತಂತೆ ಆಕೆ ವಿಶೇಷ ಕಾಳಜಿ ವಹಿಸುತ್ತಾಳೆ. ಆದರೂ ಆಕೆಗೆ ಕಳೆದ ಕೆಲವು ದಿನಗಳಿಂದ ತ್ವಚೆಯಲ್ಲಿ ತಾಜಾತನ ಕಂಡುಬರುತ್ತಿಲ್ಲ. ಅವಳು ತಾಜಾತನದ ತ್ವಚೆಯಿಂದ ಗೆಳತಿಯರ ಲಯದಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರಳಾಗುತ್ತಿದ್ದಳು. ಈಚೆಗೆ ಆಕೆಗೆ ಎಲ್ಲರೂ ಏನಾಯ್ತು ಏನಾಯ್ತು ಎಂದು ಕೇಳುತ್ತಿರುತ್ತಾರೆ. ಜೊತೆಗೆ ತಮ್ಮದೇ ಆದ ಸಲಹೆಗಳನ್ನು ಕೊಡುತ್ತಿರುತ್ತಾರೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಆಸುಪಾಸು ನೋಡಲು ಸಿಗುತ್ತವೆ. ಈ ಉದಾಹರಣೆಗಳು `ವಿಂಟರ್‌ಬ್ಲೂಸ್‌' ಎಂಬ ಮನೋರೋಗಕ್ಕೆ ಸಂಬಂಧಪಟ್ಟಿವೆ.

ಮನೋತಜ್ಞೆ ಡಾ. ಅನುಪಮಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ಈ ರೋಗವನ್ನು ಮಹಿಳೆಯರಿಗೆ ಸಂಬಂಧಪಟ್ಟ ರೋಗವೆಂದೇ ಹೇಳಲಾಗುತ್ತದೆ. ಪುರುಷರಲ್ಲಿ ಕಂಡುಬರುವುದು ಅಪರೂಪ. ದೀರ್ಘಾವಧಿಯವರೆಗೆ ಬಿಸಿಲಿನ ಸಂಪರ್ಕಕ್ಕೆ ಬರದೇ ಇದ್ದರೆ ಮೆಲಾಟೋನಿನ್‌ನ್ಯೂರೊ ಹಾರ್ಮೋನಿನ ಕೊರತೆ ಉಂಟಾಗುತ್ತದೆ. ``ಮಹಿಳೆಯರಲ್ಲಿಯೇ ಈ ರೋಗ ಹೆಚ್ಚಾಗಿ ಬರಲು ಮುಖ್ಯ ಕಾರಣ ಅವರು ಬಿಸಿಲನ್ನು ಹೆಚ್ಚಾಗಿ ಇಷ್ಟಪಡುವುದಿಲ್ಲ. ಆದರೆ ಪುರುಷರು ಬಿಸಿಲಿನಲ್ಲಿ ಎಕ್ಸ್ ಪೋಸ್‌ಆಗುತ್ತಲೇ ಇರುತ್ತಾರೆ. ಹೀಗಾಗಿ ಅವರಿಗೆ ಈ ರೋಗ ಉಂಟಾಗುವ ಸಾಧ್ಯತೆ ಕಡಿಮೆ. ಮನೋಚಿಕಿತ್ಸಕಿ ಡಾ. ರೂಪಾ ಹೇಳುವುದು ಹೀಗೆ, ``ವಿಂಟರ್‌ಬ್ಲೂಸ್‌ನ್ನು ಹೆಚ್ಚಿನ ಜನರು ಸೀಝನ್‌ಡಿಸಾರ್ಡರ್‌ಎಂದು ಭಾವಿಸುತ್ತಾರೆ. ಕಾಲಮಾನಕ್ಕೆ ತಕ್ಕಂತೆ ಆಹಾರ ಹಾಗೂ ಜೀವನಶೈಲಿಯನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯ.''

ಬಿಸಿಲು ಸೌಂದರ್ಯದ ಶತ್ರು ಅಲ್ಲ

ಬಿಸಿಲನ್ನು ಬಹಳಷ್ಟು ಜನ ಹಾನಿಕರ ಎಂದು ಭಾವಿಸುತ್ತಾರೆ. ಹೀಗಾಗಿ ಅದರ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುತ್ತಾರೆ. ಆದರೆ ವಾಸ್ತವ ಸಂಗತಿ ಏನೆಂದರೆ ಬೆಳಗಿನ ಸೂರ್ಯನ ಕಿರಣಗಳಲ್ಲಿ `ಡಿ' ವಿಟಮಿನ್‌ನ ಪ್ರಮಾಣ ಹೇರಳವಾಗಿರುತ್ತದೆ. ಎಳೆ ಬಿಸಿಲಿಗೆ ಮೈಯೊಡ್ಡುವುದರಿಂದ ನಮ್ಮ ಮೂಳೆಗಳು ಗಟ್ಟಿಗೊಳ್ಳುತ್ತವೆ. ತ್ವಚೆ ಕೂಡ ಕಾಂತಿ ಪಡೆದುಕೊಳ್ಳುತ್ತದೆ. ಕ್ಯಾಲ್ಶಿಯಂ ಹೀರಿಕೊಳ್ಳುವಿಕೆ ಸುಲಭವಾಗಿ ಆಗುತ್ತದೆ. ಹೀಗಾಗಿ ಮುಂಜಾನೆಯ ಬಿಸಿಲು ನಮ್ಮ ದೇಹಕ್ಕೆ ಬಹಳ ಉಪಯುಕ್ತ.

``ಧೂಪ್‌ ಮೇ ನಿಕಲಾ ನ ಕರೊ ರೂಪ್‌ ಕೀ ರಾನಿ.....'' ಹಾಡಿನ  ಈ ಸಾಲುಗಳು ಸಿನಿಮಾಕ್ಕೆ ಸರಿ. ಆದರೆ ವಾಸ್ತವದಲ್ಲಿ ನಮ್ಮ ದೃಷ್ಟಿಕೋನ ಬೇರೆಯಾಗಿರಬೇಕು. ಆ ಸಾಲುಗಳನ್ನು ಗೀತ ರಚನೆಕಾರ ಮಧ್ಯಾಹ್ನ ಬಿಸಿಲಿನ ಪ್ರಖರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿರಬೇಕು. ಮುಂಜಾನೆ ಎಳೆಬಿಸಿಲಿನ ಆನಂದ ಪಡೆದರೆ ತನುಮನಕ್ಕೆ ನೆಮ್ಮದಿ ನಿರಾಳತೆ ಇರುತ್ತದೆ. ಬಿಸಿಲಿನಲ್ಲಿ ಬೆಳಕು ಹಾಗೂ ಕಾಂತಿ ಇರುತ್ತದೆ. ಇದರಿಂದ ಮನಸ್ಸು ಖುಷಿಯಿಂದ ಇರುತ್ತದೆ, ಮೊದಲು ಜನರು ಜಗಲಿಕಟ್ಟೆಯ ಮೇಲೆ ಹರಟೆ ಹೊಡೆಯುತ್ತ ಬಿಸಿಲಿನ ಮಜ ಪಡೆದುಕೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರವೃತ್ತಿ ಕಡಿಮೆಯಾಗುತ್ತ ಹೊರಟಿದೆ. ಹೀಗಾಗಿ ಈ ಪ್ರವೃತ್ತಿಯನ್ನು ಮತ್ತೆ ಅನುಸರಿಸುವುದು ಉತ್ತಮ. ಹೊಸ ಸಂಶೋಧನೆಗಳ ಪ್ರಕಾರ, ಬಿಸಿಲು ಕಾಯಿಸುವುದರಿಂದ ಹೃದಯ ರೋಗಗಳು ಕೂಡ ನಿಯಂತ್ರಣಕ್ಕೆ ಬರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ