ಇದಂತೂ ನಿಜವಾಗಿಯೂ ಅತಿ ಆಶ್ಚರ್ಯದ ಸಂಗತಿ. ಭಾರತದ ಇತರ ಎಲ್ಲಾ ರಾಜ್ಯಗಳಿಗೆ ಹೋಲಿಸಿದಾಗ, ಕೇವಲ 2 ರಾಜ್ಯಗಳಾದ ಗುಜರಾತ್ ಮತ್ತು ಮೇಘಾಲಯಗಳಲ್ಲಿ ಮಾತ್ರ, ಅದರಲ್ಲೂ ಕೇವಲ 65% ಹೆಂಗಸರು ಮಾತ್ರ ಪೀರಿಯಡ್ ಪ್ರಾಡಕ್ಟ್ಸ್ ಬಳಸುತ್ತಾರಂತೆ! ಇತರ ರಾಜ್ಯಗಳಲ್ಲಿ ಈ ಅಂಕಿ ಸಂಖ್ಯೆ ಬಹಳ ಕಡಿಮೆ. ಇಂದಿನ ಆಧುನಿಕ ಕಾಲದಲ್ಲೂ ಇಷ್ಟೆಲ್ಲ ಟಿವಿ, ಪೇಪರ್, ಪತ್ರಿಕೆ, ಮೊಬೈಲ್ ಜಾಹೀರಾತುಗಳ ನಡುವೆಯೂ ನಮ್ಮ ದೇಶದ ಮುಕ್ಕಾಲು ಪಾಲಿಗೂ ಹೆಚ್ಚಿನ ಹೆಂಗಸರು ಸ್ಯಾನಿಟರಿ ನ್ಯಾಪ್ ಕಿನ್ ಬಳಸುವುದೇ ಇಲ್ಲ. ಇಂದಿಗೂ ಸಹ ಮುಟ್ಟಿನ ದಿನಗಳಲ್ಲಿ ಹಳೆಯ ಕಾಲದಂತೆ ಬಟ್ಟೆಗಳನ್ನೇ ಬಳಸುತ್ತಾರೆ. ಇದಕ್ಕೆ ಅತಿ ಮುಖ್ಯ ಕಾರಣ ಎಂದರೆ, ಹೆಂಗಸರು ಈ ಕುರಿತು ಬಹಿರಂಗವಾಗಿ ಮಾತನಾಡಲು ಇಂದಿನ ಕಾಲದಲ್ಲೂ ಸಂಕೋಚಪಡುತ್ತಾರೆ.
ಈ ಕಾರಣದಿಂದಾಗಿ ಹೆಚ್ಚಿನ ಸೋಂಕು ರೋಗ ತಗುಲುತ್ತದೆ, ಬಂಜೆತನ ಕ್ಯಾನ್ಸರ್ ಹೆಚ್ಚು ಭೀತಿಯೂ ಇದೆ. ಹೀಗಾಗಿ ಇಂದಿನ ತುರ್ತು ಅಗತ್ಯ ಎಂದರೆ ಈ ಕುರಿತು ಜಾಗೃತಿ ಹೊಂದುವುದು. ಆಗ ಮಾತ್ರ ಎಲ್ಲಾ ಹೆಂಗಸರೂ ಇಂಥ ಪ್ರಾಡಕ್ಟ್ಸ್ ಬಳಸಿ, ತಮ್ಮ ಹೈಜೀನ್ ಕುರಿತು ಎಚ್ಚರ ವಹಿಸುವಂತಾಗುತ್ತದೆ.
ಮುಟ್ಟಿನ ದಿನಗಳಲ್ಲಿ ಹೆಂಗಸರು ಹೆಚ್ಚಾಗಿ ಬಟ್ಟೆ ಬಳಸುವುದರಿಂದ, ಅದರಿಂದ ಯೋನಿಗೆ ಸೋಂಕು ತಗುಲುವ ಸಂಭವ ಬಹಳ ಹೆಚ್ಚು. ಅದು ಖಂಡಿತಾ ಸರ್ವೈಕಲ್ ಕ್ಯಾನ್ಸರ್ ಗೆ ದಾರಿ ಮಾಡುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಹೆಂಗಸರು ಗರ್ಭಾಶಯ ಸರ್ವೈಕಲ್ ಕ್ಯಾನ್ಸರ್‌ಕಾರಣ ಸಾಯುತ್ತಿರುತ್ತಾರೆ.
ಇದರಲ್ಲಿ ಹೆಚ್ಚಿನ ಪ್ರಮಾಣ ಗ್ರಾಮೀಣ ಹೆಂಗಸರದ್ದು. ಮುಟ್ಟಿನ ದಿನಗಳಲ್ಲಿ ಇವರು ತಮ್ಮ ಹೈಜೀನ್ ಕಡೆ ಎಳ್ಳಷ್ಟು ಕಾಳಜಿ ವಹಿಸುವುದಿಲ್ಲ. ಹೀಗಾಗಿ ಸರ್ವೈಕಲ್ ಕ್ಯಾನ್ಸರ್ ಮಾಮೂಲಿ ಆಗಿ, ಅದು ನೇರ ಹೆಂಗಸರ ಗುಪ್ತಾಂಗದ ಕ್ಯಾನ್ಸರ್ ಗೆ ತಿರುಗುತ್ತದೆ. ಇದು ಸರ್ವಿಕ್ಸ್ ಭಾಗದ ಸೆಲ್ಸ್ ನ್ನು ಪ್ರಭಾವಿತಗೊಳಿಸಿ, ಇಂಥ ಹಾನಿಕಾರಕ ಕ್ಯಾನ್ಸರ್ ಗೆ ದಾರಿ ಆಗುತ್ತದೆ.
ಅಗ್ಗದ ನ್ಯಾಪ್ ಕಿನ್ ಅಪಾಯಕ್ಕೆ ನಾಂದಿ
ಹೆಂಗಸರು ಸದಾ ತಮ್ಮ ಕುಟುಂಬದ ಸದಸ್ಯರ ಆರೋಗ್ಯಕ್ಕಷ್ಟೇ ಪ್ರಾಥಮಿಕತೆ ನೀಡುತ್ತಾರೆ. ಅವರ ಊಟ ತಿಂಡಿ, ಆರೋಗ್ಯದ ಕಾಳಜಿಯಲ್ಲಿ ಮುಳುಗಿ ತಮ್ಮನ್ನು ತಾವು ಸಂಪೂರ್ಣ ನಿರ್ಲಕ್ಷಿಸಿಕೊಳ್ಳುತ್ತಾರೆ. ಇದರಿಂದ ಸಹಜವಾಗಿ ಇವರಲ್ಲಿ ಆರೋಗ್ಯ ದೋಷ ತುಂಬಿಕೊಳ್ಳುತ್ತದೆ. ಜೊತೆಗೆ ಹಣ ಉಳಿಸುವ ಚಾಳಿಗೆ ಬಿದ್ದು, ಅಗ್ಗದ ನ್ಯಾಪ್ ಕಿನ್ ಅಥವಾ ಮನೆಯ ಹಳೆಯ ಕಾಟನ್ ಬಟ್ಟೆಗಳನ್ನೇ ಬಳಸಿ ಕಾಲಕಳೆಯುತ್ತಾರೆ. ಇದು ಅತಿ ಅಗ್ಗಕ್ಕೆ ಸಿಗಬಹುದಾದ ನ್ಯಾಪ್ ಕಿನ್ ಇರಬಹುದು, ಆದರೆ ಇಂಥವುಗಳಲ್ಲಿ ಬ್ಲೀಚಿಂಗ್ ಸಹಿತ ಅನೇಕ ಅಪಾಯಕಾರಿ ಕೆಮಿಕಲ್ಸ್ ಬಳಕೆ ಆಗುವುದರಿಂದ, ಇದು ಓವೇರಿಯನ್ ಕ್ಯಾನ್ಸರ್ ಜೊತೆಗೆ ಬಂಜೆತನಕ್ಕೆ ದಾರಿ ಮಾಡುತ್ತದೆ.
ಬಹುತೇಕ ಹೆಂಗಸರು ನಾನ್ ಆರ್ಗ್ಯಾನಿಕ್ ಸ್ಯಾನಿಟರಿ ಪ್ಯಾಡ್ಸ್ ನ್ನೇ ಬಳಸುತ್ತಾರೆ. ಇದರ ಪ್ರತಿ ಒಂದು ಪ್ಯಾಡ್ ನಲ್ಲೂ 4 ಪ್ಲಾಸ್ಟಿಕ್ ಕವರ್ ಗಾಗುವಷ್ಟು ಪ್ಲಾಸ್ಟಿಕ್ ತುಂಬಿಕೊಂಡಿರುತ್ತದೆ. ಇದರಿಂದ ಹೆಂಗಸರ ಆರೋಗ್ಯಕ್ಕೆ ಎಷ್ಟು ಹಾನಿಕರ ಎಂಬುದನ್ನು ನೀವು ಅಂದಾಜು ಮಾಡಬಹುದು.