ಕೆಲವು ಸುಲಭವಾದ ಟಿಪ್ಸ್ ಫಾಲೋ ಮಾಡಿ, ನೀವು ಸಹ ಈ ಸಲದ ಹಬ್ಬದಲ್ಲಿ ಹಾಯಾಗಿ ಎಂಜಾಯ್ ಮಾಡುತ್ತಾ, ಫಿಟ್ ನೆಸ್ ಕುರಿತು ಕಾಳಜಿ ವಹಿಸಬಾರದೇಕೆ.....?
ಈಗೆಲ್ಲ ಫಿಟ್ ನೆಸ್ ಕುರಿತು ಎಲ್ಲರೂ ಅಧಿಕ ಎಚ್ಚರ ವಹಿಸುತ್ತಾರೆ. ಫಿಟ್ ನೆಸ್ ಫ್ರೀಕ್ ಎನಿಸಲು ಸ್ಟ್ರಿಕ್ಟ್ ಡಯೆಟ್ ಫಾಲೋ ಮಾಡುತ್ತಾರೆ. ಆದರೆ ದಸರಾ, ದೀಪಾವಳಿಯಂಥ ದೊಡ್ಡ ಹಬ್ಬಗಳು ಬಂದಾಗ, ಸಹಜವಾಗಿಯೇ ತವರುಮನೆಗೆ ಹಬ್ಬ ಆಚರಿಸಲು ಹೊರಟು, ಒಡಹುಟ್ಟಿದವರು, ಫ್ರೆಂಡ್ಸ್ ಜೊತೆ ಜಾಲಿಯಾಗಿ ಅಮ್ಮನ ಕೈಗುಣಕ್ಕೆ ಮಾರುಹೋಗಿ, ಗ್ರಾಂಡಾಗಿ ಹಬ್ಬ ಆಚರಿಸುವ ನೆಪದಲ್ಲಿ ಬೇಕಾದ್ದನ್ನು ತಿಂದುಂಡು ಕಿಲೋ ಕಿಲೋ ಕ್ಯಾಲೋರಿ ಮೈಗೂಡಿಸಿಕೊಳ್ಳುತ್ತಾರೆ. ಒಂದಷ್ಟು ವೆಯ್ಟ್ ಗೆಯ್ನ್ ಆಗುವುದಂತೂ ಗ್ಯಾರಂಟಿ. ಹಾಗಂತ ಹಬ್ಬದ ಸಂದರ್ಭದಲ್ಲೂ ಏನೂ ತಿನ್ನದೆ, ಎಂಜಾಯ್ ಮಾಡದೆ ಹಾಗೇ ಇರಾದೀತೇ?
ಅದೇ ತರಹ ಮದುವೆ, ಮುಂಜಿ, ಶುಭ ಸಮಾರಂಭಗಳಿಗೆ ಹೋದಾಗಲೂ 2-3 ದಿನಗಳ ದೂರದ ಊರಿಗೆ ಬಂದಿರುವಾಗ, ಅಲ್ಲೆಲ್ಲ ಡಯೆಟಿಂಗ್ ಎಂದು ತಲೆ ಕೆಡಿಸಿಕೊಳ್ಳಲಾಗದು. ಆಗಲೂ ಹೀಗೇ ಆಗುತ್ತದೆ. ಇಂಥ ಸಮಾರಂಭಗಳಲ್ಲಿ ಅಪರೂಪಕ್ಕೆ ಕಸಿನ್ಸ್, ಬಂಧುಬಳಗ ಸೇರಿರುವಾಗ ಡಯೆಟ್ ಯಾರಿಗೆ ನೆನಪಿರುತ್ತದೆ? ಇಂಥ ಕಡೆ ಸ್ವೀಟ್ಸ್ ಸೇವನೆ ಧಾರಾಳ ಆಗಿರುತ್ತದೆ.
ಇದೆಲ್ಲ ಮುಗಿಸಿಕೊಂಡು ಮನೆಗೆ ಹೋದಾಗ, ಒಮ್ಮೊಮ್ಮೆ ಆರೋಗ್ಯ ಕೈ ಕೊಡುವುದುಂಟು. ನಾವು ನಮ್ಮ ಮನೆಯಲ್ಲೇ ಇದ್ದರೂ, ಗ್ರಾಂಡಾಗಿ ಹಬ್ಬ ಆಚರಿಸಿದ 2-3 ದಿನಗಳಲ್ಲಿ ಈ ತೊಂದರೆ ತಪ್ಪಿದ್ದಲ್ಲ. ಹೊಟ್ಟೆ ಕೆಟ್ಟು ವಾಂತಿ, ಭೇದಿ ಕಾಟ ಶುರುವಾಗುತ್ತದೆ. ಜ್ವರ ಕಾಡಿದರೂ ಆಶ್ಚರ್ಯವಿಲ್ಲ. ಹಲವು ಸಲ ವೈದ್ಯರ ಕ್ಲಿನಿಕ್ ಗೆ ಹೋಗಿ ಬಂದ ನಂತರ, ಗಾಡಿ ಸರಿಹೋಗುತ್ತದೆ. ಈ ಅವಾಂತರದಿಂದಾಗಿ ಒಮ್ಮೊಮ್ಮೆ ಆಫೀಸಿಗೆ 4-5 ದಿನ ರಜೆ ಹಾಕಬೇಕಾದ ಅನಿವಾರ್ಯತೆ ಬರಬಹುದು.
2 ವಾರಗಳ ಕಾಲ ಸುಸ್ತು, ಸಂಕಟ ಕಾಡಬಹುದು. ಹೀಗಾದಾಗ ನಾವು ಮುಂದಿನ ಹಬ್ಬದ ಸೀಸನ್ನಿನಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುತ್ತೇವೆ ಎಂದು ಸಂಕಲ್ಪ ತೊಡುತ್ತೇವೆ. ಆದರೆ ಅದನ್ನು ಎಷ್ಟು ಪರಿಪಾಲಿಸುತ್ತೇವೆ ಎನ್ನುವುದೇ ಮುಖ್ಯ.
ಶ್ರಾವಣ ಮಾಸದಲ್ಲಿ ಮಳೆ ಚಳಿ ಶುರುವಾದಂತೆ, ಸಾಲು ಸಾಲು ಹಬ್ಬಗಳು ಇಣುಕುತ್ತವೆ. ಎಲ್ಲರೂ ಈ ಹಬ್ಬಗಳಿಗಾಗಿ ಕಾಯುವುದು ಸಹಜ. ಏಕೆಂದರೆ ಇಡೀ ವರ್ಷ ಕಾದು, ಈ ಹಬ್ಬಗಳು ಬಂದಾಗ, ಮನೆಯವರೆಲ್ಲ ಒಂದೆಡೆ ಸೇರಲು ಊರಿಗೆ ಹೊರಡುವುದು ವಾಡಿಕೆ. ಸಿಹಿ, ಗ್ರಾಂಡ್ ಭೋಜನ ಮಾಮೂಲಿ. ಇದರ ಕಾರಣ ನಾವು ಓವರ್ ಈಟಿಂಗ್ ಗೆ ಈಡಾಗುತ್ತೇವೆ. ಇದರ ಪರಿಣಾಮ ಖಂಡಿತಾ ನಮ್ಮ ಫಿಟ್ ನೆಸ್ ಮೇಲೆ ಆಗುತ್ತದೆ. ಮಿಠಾಯಿ, ಹಾಲಿನ ಉತ್ಪನ್ನ, ಹುರಿದು ಕರಿದ ಸಾಮಗ್ರಿ ಜಾಸ್ತಿ ಸೇವಿಸುವುದರಿಂದ, ದೇಹಕ್ಕೆ ಫ್ಯಾಟ್ ಶುಗರ್ ಹೆಚ್ಚಾಗಿ ಸೇರುತ್ತದೆ. ಇದರಿಂದಾಗಿ ನಮ್ಮ ದೇಹ ತೂಕ ಹೆಚ್ಚುತ್ತದೆ, ಇಡೀ ವರ್ಷ ಹೆಲ್ತ್ ಕಾನ್ಶಿಯಸ್ ಆಗಿದ್ದಿದ್ದು, ಈಗ ವ್ಯರ್ಥ ಆಗಿಹೋಗುತ್ತದೆ.
ಅಸಲಿಗೆ, ಫೆಸ್ಟಿವ್ ಸೀಸನ್ ಎಂಜಾಯ್ ಮಾಡುವುದರ ಜೊತೆಗೆ ನಮ್ಮ ಫಿಟ್ ನೆಸ್ ಸಹ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದನ್ನು ಸಾಧಿಸುವುದು ಹೇಗೆ? ನಮ್ಮ ದಿನಚರಿಯಲ್ಲಿ ಕೆಲವು ಸುಲಭದ ಟಿಪ್ಸ್ ಅನುಸರಿಸಿ, ನಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕಬಹುದು. ಇದರಿಂದ ನಿಮ್ಮ ಫೆಸ್ಟಿವ್ ಎಂಜಾಯ್ ಮೆಂಟ್ ಸಹ ಕೆಡುವುದಿಲ್ಲ.