ಹಬ್ಬಗಳಲ್ಲಿ ಗಡದ್ದಾಗಿ ಸಿಹಿ, ಕರಿದ ತಿಂಡಿ ಸವಿದರೂ ನೀವು ಹೇಗೆ ನಿಮ್ಮ ದೇಹ ತೂಕ ನಿಯಂತ್ರಿಸಬಹುದು ಎಂದು ತಿಳಿಯೋಣವೇ…..?
ಹಬ್ಬಗಳು ಎಂದಾಕ್ಷಣ ಸಡಗರ ಸಂಭ್ರಮದ ವಾತಾವರಣ ತಾನಾಗಿ ಉಕ್ಕುತ್ತದೆ. ಈ ಸಂದರ್ಭದಲ್ಲಿ ತಯಾರಾಗುವ ಬಗೆ ಬಗೆಯ ಮಿಠಾಯಿ, ಪಕ್ವಾನ್ನಗಳು ಎಂಥವರ ಬಾಯಲ್ಲೂ ನೀರೂರಿಸುತ್ತವೆ, ತಮ್ಮ ಡಯೆಟ್‌ಗಿಯೆಟ್ ಮರೆತು ಹಬ್ಬ ಎಂಜಾಯ್ ಮಾಡೋಣ ಎನಿಸುತ್ತದೆ. ಧಾರಾಳ ಶುಗರ್, ಎಣ್ಣೆ, ತುಪ್ಪ ತುಂಬಿದ ಈ ವ್ಯಂಜನಗಳು ದೇಹಕ್ಕೆ ಹಾನಿಕಾರಕ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಈ ಕುರಿತು ಎಕ್ಸ್ ಪರ್ಟ್ ನ್ಯೂಟ್ರಿಶನಿಸ್ಟ್ ಹೇಳುವುದೆಂದರೆ, ಈ ವ್ಯಂಜನಗಳು ಮುಖ್ಯವಾಗಿ ನಮ್ಮ ಆರೋಗ್ಯ ಬಿಗಡಾಯಿಸುವ ನಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಅಂಶಗಳ ಮಟ್ಟ ಹೆಚ್ಚಿಸಿ ಹೃದ್ರೋಗ ಕಾಡುವ ಸ್ಥಿತಿ ತರಬಹುದು. ಕಳೆದ 2 ವರ್ಷಗಳಿಂದ ಕೋವಿಡ್ ಕೊರೋನಾದ ಮಹಾಮಾರಿಯಿಂದ ಬೇಸತ್ತಿದ್ದ ಜನ ಈ ಸಲ ಗ್ರಾಂಡಾಗಿ ಹಬ್ಬದ ಆಚರಣೆಗೆ ಧಾವಿಸುವುದರಲ್ಲಿ ಆಶ್ಚರ್ಯವಿಲ್ಲ.
ಮನೆ ಮಂದಿ ಎಲ್ಲಾ ಕೂಡಿ ಸಂಭ್ರಮದಿಂದ ದೀಪಾವಳಿಯಂಥ ಹಬ್ಬವನ್ನು ಗ್ರಾಂಡಾಗಿ ಆಚರಿಸುವುದು ಶ್ಲಾಘನೀಯ ವಿಷಯ. ಆದರೆ ಕೆಲವು ಸಂಗತಿಗಳನ್ನು ಅಗತ್ಯ ಗಮನದಲ್ಲಿರಿಸಿಕೊಂಡು ಈ ಮೇಲಿನ ಸಮಸ್ಯೆ ಕಾಡದಂತೆ ಎಚ್ಚರ ವಹಿಸಬೇಕು :
ಸಕ್ಕರೆ ಎಂಬ ಬಿಳಿ ವಿಷ ಬೇಡ
ಸಕ್ಕರೆಯಲ್ಲಿನ ಪ್ರಧಾನ ಅಂಶವೇ ಫ್ರಕ್ಟೋಸ್. ಇದರಿಂದ ನಮ್ಮ ದೇಹದ ಟ್ರೈಗ್ಲಿಸರೈಡ್ ಅಂಶ ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ಹಬ್ಬಗಳ ಸಂದರ್ಭದಲ್ಲಿ ಹೊರಗೆ ಹೋದಾಗ ಕ್ಯಾಂಡಿ, ಬೇಕರಿ ಐಟಂ, ಐಸ್ ಕ್ರೀಂ, ಅಧಿಕ ಸಕ್ಕರೆಯ ಸಿಹಿ ಪದಾರ್ಥಗಳನ್ನು ದೂರವಿಡಿ. ಶುಗರ್ ಫ್ರೀ ಮಿಠಾಯಿ ಅಂದಾಕ್ಷಣ 100% ಸೇಫ್ ಅಲ್ಲ. ಇದರಿಂದಲೂ ಕೊಬ್ಬು ಹೆಚ್ಚುವ ಸಾಧ್ಯತೆ ಇದ್ದೇ ಇದೆ. ಇದು ಸಕ್ಕರೆ ಸಹಿತ, ರಹಿತ ಎರಡಕ್ಕೂ ಅನ್ವಯ. ಇದು ಆರೋಗ್ಯಕ್ಕೆ ಹಾನಿಕರ ಎಂಬುದರಲ್ಲಿ ಎರಡು ಮಾತಿಲ್ಲ.
ರೀಫೈಂಡ್ ವ್ಯಂಜನಗಳು ಬೇಡ
ಬಿಳಿ ಬ್ರೆಡ್, ಅಕ್ಕಿ, ಪಾಸ್ತಾ, ಮ್ಯಾಕ್ರೋನಿ ಇತ್ಯಾದಿ ಆಹಾರ ಪದಾರ್ಥಗಳಲ್ಲಿ ಸಕ್ಕರೆ ಅಂಶ ಧಾರಾಳ ಇದ್ದು, ನಮ್ಮಲ್ಲಿ ಜೀರ್ಣವಾದ ತಕ್ಷಣ ಕಾಟ ಕೊಡುತ್ತದೆ. ಇದನ್ನು ಬಿಟ್ಟು ಇತರ ಆಹಾರ ಪದಾರ್ಥ ಬಳಸುತ್ತಾ ಸಮಸ್ಯೆ ಕಾಡದಂತೆ ಎಚ್ಚರವಹಿಸಿ.
ಆಹಾರದಲ್ಲಿ ಫೈಬರ್ ಇರಲಿ
ಇಂಥ ಹಬ್ಬಗಳಲ್ಲಿ ಮನೆಯಲ್ಲಿ ತಯಾರಿಸಿದ ವ್ಯಂಜನಗಳಲ್ಲಿ ಧಾರಾಳ ಫೈಬರ್ ಇರುವಂತೆ ಎಚ್ಚರವಹಿಸಿ. ಆಧುನಿಕ ಸಂಶೋಧನೆಗಳ ಪ್ರಕಾರ, ಫೈಬರ್ ಯುಕ್ತ ಆಹಾರದಲ್ಲಿ ಜಟಿಲ ಕಾರ್ಬೊಹೈಡ್ರೇಟ್ ಅಂಶವಿದ್ದು, ದೇಹಕ್ಕೆ ಲಾಭಕರ. ಇದು ಕೊಬ್ಬಿನ ಟ್ರೈಗ್ಲಿಸರೈಡ್ ಅಂಶ ಹೆಚ್ಚದಂತೆ ತಡೆಯುತ್ತದೆ. ನಿಮ್ಮ ಊಟ ತಿಂಡಿಗಳಲ್ಲಿ ಸಲಾಡ್, ಹಸಿ ತರಕಾರಿ ಇತ್ಯಾದಿ ಧಾರಾಳವಿರಲಿ. ಫೈಬರ್ ಧಾನ್ಯ ಹಾಗೂ ಪೌಷ್ಟಿಕಾಂಶಗಳು ತುಂಬಿದ ತರಕಾರಿ, ಹಣ್ಣು ಹಂಪಲನ್ನು ಹೆಚ್ಚಾಗಿ ಸೇವಿಸಿ.
ಸರಿಯಾದ ಫ್ಯಾಟ್ ಮಾತ್ರ ಸೇವಿಸಿ
ಈ ಮೇಲಿನ ಅಂಶಗಳನ್ನು ನಮ್ಮ ರಕ್ತದಲ್ಲಿ ಸಹಜ ಮಟ್ಟದಲ್ಲಿ ಇರಿಸಿಕೊಳ್ಳುವುದಕ್ಕಾಗಿ ನೀವು ಆಲಿವ್ ಆಯಿಲ್, ಸಾಲ್ಮನ್‌ಫಿಶ್, ಡಯೇಟರಿ ಪ್ರಾಡಕ್ಟ್ಸ್ ಬಳಸುತ್ತಿರಬೇಕು. ಇವುಗಳಲ್ಲಿ ಒಮೇಗಾ 3 ಅಂಥ ಫ್ಯಾಟಿ ಆ್ಯಸಿಡ್ಸ್ ಇದ್ದು ಸಪ್ಲಿಮೆಂಟ್ಸ್ ಆಗಿ ಕೆಲಸ ಮಾಡುತ್ತವೆ. ಜೊತೆಗೆ ರೆಡ್ ಮೀಟ್ ನ ಸ್ಯಾಚುರೇಟೆಡ್ ಫ್ಯಾಟ್ ಬಿಟ್ಟು ವೈಟ್ ಮೀಟ್ ಆರಿಸಿ. ಅಪರೂಪಕ್ಕೆ ಐಸ್ ಕ್ರೀಂ ಸೇವಿಸಿದರೂ ಅದರಿಂದ 5% 6% ಕ್ಯಾಲೋರಿಗಿಂತ ಹೆಚ್ಚಿನಂಶ ಮೈಗೂಡಬಾರದು. ಕೊಲೆಸ್ಟ್ರಾಲ್ ಅಂಶ ದೈನಿಕ 300 ಮಿ.ಗ್ರಾಂ.ಗಿಂತ ಹೆಚ್ಚಾಗಬಾರದು. ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸದಿರಿ.
ನಿಯಮಿತ ವ್ಯಾಯಾಮ ಅತ್ಯಗತ್ಯ
ಎಲ್ಲಾ ವಯೋಮಾನದವರಿಗೂ ಯಥಾಶಕ್ತಿ ನಿಯಮಿತ ವ್ಯಾಯಾಮ ಅತ್ಯಗತ್ಯ. ಹೈ ಟ್ರೈಗ್ಲಿಸರೈಡ್ ವ್ಯಕ್ತಿಗಳಿಗೆ ದಣಿಸುವ ವರ್ಕ್ ಔಟ್ ಹೆಚ್ಚು ಅಗತ್ಯ. ಇದರಿಂದ ರಕ್ತದಲ್ಲಿನ ಶುಗರ್ ಅಂಶ ಕಡಿಮೆ ಆಗುವುದಲ್ಲದೆ, ದೇಹದ ಶಕ್ತಿಸಾಮರ್ಥ್ಯ ಹೆಚ್ಚಿಸುತ್ತದೆ. ಹೀಗಾಗಿ ದೇಹದಲ್ಲಿನ ಟ್ಲೈಗ್ಲಿಸರೈಡ್ ನಲ್ಲಿನ ಸಕ್ಕರೆ ಅಂಶ ಎಷ್ಟೋ ಕಡಿಮೆ ಆಗಿ, ದೇಹಕ್ಕೆ ಪುಷ್ಟಿ ದೊರಕುತ್ತದೆ. ಏರೋಬಿಕ್ಸ್ ನಿಂದಲೂ ಹೃದ್ರೋಗಿಗಳಿಗೆ ಈ ಕಷ್ಟ ಬಹುತೇಕ ಕಳೆಯುತ್ತದೆ.
– ಪ್ರತಿನಿಧಿ
ದೇಹ ತೂಕ ನಿಯಂತ್ರಿಸಿ
ದೇಹ ತೂಕವನ್ನು ನಾವು ಸದಾ ಕಂಟ್ರೋಲ್ ನಲ್ಲಿ ಇಡಬೇಕು. ಸ್ಥೂಲತೆಯಿಂದ ತಮಗೇನೂ ತೊಂದರೆ ಕಾಣುತ್ತಿಲ್ಲ, ಹಾಗಿರುವಾಗ ಅದರ ಕುರಿತಾಗಿ ಇಷ್ಟೊಂದು ಚಿಂತೆ ಏಕೆ ಅನ್ನುತ್ತಾರೆ. ವಯಸ್ಸು ಕಡಿಮೆ ಇದ್ದಾಗ, ಇದರ ಸೈಡ್ ಎಫೆಕ್ಟ್ಸ್ ತಿಳಿಯುವುದಿಲ್ಲ. ಆದರೆ ವಯಸ್ಸು ಮಾಗಿದಂತೆ, ಶುಗರ್, ಬಿ.ಪಿ. ಕಾಟ ತೀವ್ರವಾಗುತ್ತದೆ. ಇದರಿಂದ ಇಮ್ಯುನಿಟಿ, ಮೆಟಬಾಲಿಕ್ ಚಟುವಟಿಕೆಗಳು ತಂತಾನೇ ತಗ್ಗುತ್ತವೆ. ಹೀಗಾಗಿ ಟ್ರೈಗ್ಲಿಸರೈಡ್ ಪ್ರಮಾಣ ಅತ್ಯಧಿಕ ಹೆಚ್ಚುತ್ತದೆ. ಹೆಲ್ದಿ ಕ್ಯಾಲೋರಿಸ್ ವುಳ್ಳ ಆಹಾರ ಸೇವನೆ ಒಂದೇ ಇದಕ್ಕೆ ಮದ್ದು. ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಒಟ್ಟಾರೆ ಸಿಹಿ ಬೇಡ ಎಂದು ಹೇಳುವ ಬದಲು, ಯಾವುದೇ ತಿಂಡಿಯನ್ನಾದರೂ ಅತಿ ಕನಿಷ್ಠ ಪ್ರಮಾಣದಲ್ಲಿ ಸೇವಿಸಿ. ಇದರಿಂದ ತೂಕ ಹೆಚ್ಚಿಗೇನೂ ಏರುಪೇರು ಆಗುವುದಿಲ್ಲ, ವ್ಯಕ್ತಿ ಆರೋಗ್ಯ ಹೊಂದುತ್ತಾನೆ.